ಚಿಕ್ಕಮಗಳೂರು: ಜಿಲ್ಲೆಯಲ್ಲಿ ತೀವ್ರಗೊಂಡ ಕೂಂಬಿಂಗ್ ಕಾರ್ಯಚರಣೆ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಕೆಲವು ದಿನಗಳ ಹಿಂದೆ ನಕ್ಸಲ್ ನಾಯಕ ವಿಕ್ರಂಗೌಡ ಎಎನ್‌ಎಫ್ (ANF) ಗುಂಡಿಗೆ ಕಾಡಲ್ಲೇ ಹತನಾದ. ಇದೀಗ ಕರ್ನಾಟಕದ ಐವರು ನಕ್ಸಲರಿಗಾಗಿ ಚಿಕ್ಕಮಂಗಳೂರು ಜಿಲ್ಲೆಯ ಸುತ್ತಮುತ್ತ ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಂಡಿದೆ.


ಇದನ್ನೂ ಓದಿ; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಜಾಬ್‌ ಆಫರ್; 10th ಪಾಸ್‌ ಆದವರು ಅರ್ಜಿ ಸಲ್ಲಿಸಿ


ಕೆರೆಕಟ್ಟೆ ವ್ಯಾಪ್ತಿಯ ಸುತ್ತಿನಗುಡ್ಡದಲ್ಲಿ ತೀವ್ರಗೊಂಡ ಕೂಂಬಿಂಗ್
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ವ್ಯಾಪ್ತಿಯ ಸುತ್ತಿನ ಗುಡ್ಡದಲ್ಲಿ ಮಧ್ಯ ರಾತ್ರಿ ಕಾಡಿನ ನಡುವೆ ಟರ್ಚ್ ಲೈಟ್ ಕಾಣಿಸಿದ ಹಿನ್ನೆಲೆ ANF ಸಿಬ್ಬಂದಿಗಳಿಂದ ತೀವ್ರ ಕಾರ್ಯಚರಣೆ ನಡೆಯುತ್ತಿದೆ.


ಇದನ್ನೂ ಓದಿ; ಇ-ಖಾತೆ ಪಡೆಯುವವರಿಗೆ ಮುಖ್ಯ ಮಾಹಿತಿ; ಇಲ್ಲಿದೆ ಕಂಪ್ಲೀಟ್‌ ಡಿಟೈಲ್ಸ್


ಕಾಫಿನಾಡಿನ ಕಾಡಿನಲ್ಲಿ ಐವರು ನಕ್ಸಲರ ತಂಡ:
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮುಂಡಗಾರು ಲತಾ, ಕಳಸ‌ ತಾಲೂಕಿನ ಬಾಳೆಹೊಳೆಯ ವನಜಾಕ್ಷಿ, ದ. ಕ. ಜಿಲ್ಲೆಯ ವೇಣೂರು ಗ್ರಾಮದ ಸುಂದರಿ, ರಾಯಚೂರು ಮೂಲದ ‌ಜಯಣ್ಣ, ಶೃಂಗೇರಿ ತಾಲೂಕಿನ ಹಿತ್ತಲಮನೆಯ ರವೀಂದ್ರ ಕಾಫಿನಾಡಿನ ಕಾಡಿನಲ್ಲಿ ಐವರು ನಕ್ಸಲರ ತಂಡ ಅಡಗಿರುವ ಅನುಮಾನದ ಬೆನ್ನಲೇ ತೀವ್ರ ಕಾರ್ಯಚರಣೆ ನಡೆಸಲಾಗುತ್ತಿದೆ.


ಇದನ್ನೂ ಓದಿ; ಗೃಹ ಸಾಲ ಪಡೆಯುವವರಿಗೆ ಭರ್ಜರಿ ಸುದ್ದಿ;  RBI ನಿಂದ ಹೊಸ ನಿಯಮಗಳು ಜಾರಿ


ಶರಣಾಗತಿಗೆ ಮೊದಲ‌ ಆದ್ಯತೆ ನೀಡಿರುವ ANF:
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಮೋಸ್ಟ್ ವಾಂಟೆಡ್‌ ನಕ್ಸಲ್ ಸುರೇಶ್ 2013 ರಲ್ಲಿ ಕೇರಳದ ಆಸ್ಪತ್ರೆಯಲ್ಲಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದ. ಈ ವೇಳೆ ಸುರೇಶ್ ಪತ್ನಿಯಾಗಿರುವ ವನಜಾಕ್ಷಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಾಹಿತಿ ತಿಳಿದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಶರಣಾಗತಿಗೆ ANF ಮೊದಲ‌ ಆದ್ಯತೆ ನೀಡಿದೆ.


ಇದನ್ನೂ ಓದಿ; ಯಜಮಾನಿಯರಿಗೆ ಗುಡ್ ನ್ಯೂಸ್;  ಈ ದಿನ 2 ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ!


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.