ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) 7ನೇ ವಯಸ್ಸಿನಿಂದ 84ನೇ ವಯಸ್ಸಿನವರೆಗೆ ಆರ್.ಎಸ್.ಎಸ್ ಕಟ್ಟಾಳಾಗಿದ್ದ ಇವರು ಇದೀಗ ಬೀದಿಯಲ್ಲಿ ಜೀವನ ಕಳೆಯುತ್ತಿದ್ದಾರೆ. ಅವರೇ ವಿಠಲ್ ಆಚಾರ್ಯ (92) ಮೂಲತಃ ಉಡುಪಿ ಜಿಲ್ಲೆಯವರು. ಆದರೆ, ದಶಕಗಳಿಂದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನೆಲೆಯೂರಿದ್ದಾರೆ.
ಇದನ್ನೂ ಓದಿ; ಇ-ಖಾತೆ ಪಡೆಯುವವರಿಗೆ ಮುಖ್ಯ ಮಾಹಿತಿ; ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

1975ರಲ್ಲಿ ಅಂದಿನ ಪ್ರಧಾನಿ ದೇಶದ ಮೇಲೆ ಎಮರ್ಜೆನ್ಸಿ ಹೇರಿದಾಗ ಅದರ ವಿರುದ್ಧ ಹೋರಾಡಿ ಯಡಿಯೂರಪ್ಪ, ಪಿ. ಜಿ.ಆರ್. ಸಿಂಧ್ಯಾ, ಶಂಕರಮೂರ್ತಿ, ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಬೆಳಗಾವಿ-ಬಳ್ಳಾರಿ ಜೈಲಿನಲ್ಲಿ ದಿನ ಕಳೆದಿದ್ದಾರೆ. ಚಿಕ್ಕಮಗಳೂರು ನಗರಸಭೆ ಸದಸ್ಯರಾಗಿದ್ದ ಇವರು, ಜನಸಂಘದಿಂದ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದರು. ದತ್ತಪೀಠದ ಹೋರಾಟದಲ್ಲೂ ಸಿ. ಟಿ. ರವಿ, ಕಾರ್ಕಳ ಸುನೀಲ್ ಕುಮಾರ್ ಬೆನ್ನೆಲುಬಾಗಿ ನಿಂತವರು. ಆದರೆ, ಇಂದು ಬೀದಿಯಲ್ಲಿ ಜೀವನ ಕಳೆಯುತ್ತಿದ್ದಾರೆ.
ಹೌದು, ನಾಲ್ಕು ಗಂಡು, ಒಂದು ಹೆಣ್ಣು ಮಗುವಿದ್ದು ಎಲ್ಲರೂ ಡಾಕ್ಟರ್, ಇಂಜಿನಿಯರ್, ಕೊಟ್ಯಾಂತರ ಆಸ್ತಿ ಇದ್ರು ಇಂದು ಅನಾಥರಾಗಿ ಸಂಧ್ಯಾಕಾಲವನ್ನ ಬೀದಿ ಬದಿ ಕಳೆಯುತ್ತಿದ್ದಾರೆ.
ಇದನ್ನೂ ಓದಿ; ರೈತರ ಗಮನಕ್ಕೆ; ತೋಟಗಾರಿಕೆ ಬೆಳೆ ಬೆಳೆಯಲು ಅರ್ಜಿ ಆಹ್ವಾನ
ಇಳಿವಯಸ್ಸಿನಲ್ಲೂ ಬೀದಿಯಲ್ಲಿ ಕುಳಿತು ಹೋರಾಟ:
ವಿಠಲ್ ಆಚಾರ್ಯ ಜೀವನದಲ್ಲಿ 107 ಪ್ರಕೃತಿ ಯಜ್ಞ ಮಾಡಿದ್ದಾರೆ. ಅದು ನಿಲ್ಲಬಾರದು ಅನ್ನೋದು ಇವರ ಬಯಕೆ. ಈ ಯಜ್ಞಕ್ಕೆ ಹಾಕುವ ವಸ್ತುಗಳು ಕಾರ್ಬನ್ ಡೈ ಆಕ್ಸೆಡ್ ಆದರೂ ಕೂಡ ಪ್ರಕೃತಿ ಅದನ್ನ ಪಡೆದು ನಮಗೆ ಆಕ್ಸಿಜನ್ ನೀಡುತ್ತೆ. ಇಂದಿನ ಪೀಳಿಗೆ ಜನರಿಗೆ ಆಸಕ್ತಿ ಇಲ್ಲ. ಯಜ್ಞ ನಿಲ್ಲಬಾರದು ಅಂತ ಬ್ಯಾಂಕಿನಲ್ಲಿ 25 ಲಕ್ಷ ಹಣವಿಟ್ಟು ಪ್ರತಿವರ್ಷ ಯಜ್ಞ ಮಾಡ್ತಿದ್ರಂತೆ. ಆದರೆ, ತಾನು ಸತ್ತ ನಂತರವೂ ಯಜ್ಞ ನಿಲ್ಲಬಾರದು ಅಂತ ಮಕ್ಕಳಿಗೆ ಆಸ್ತಿ ಮಾಡಿ, ಅವರಿಗೊಂದು ದಡ ಮುಟ್ಟಿ ಯಜ್ಞಕ್ಕೆ ಅಂತ ಒಂದು ಸೈಟ್ ಇಡ್ಕೊಂಡಿದ್ದರು. ಆ ಸೈಟ್ ಮಾರಿ ಅಥವಾ ಅದರಲ್ಲಿ ಕಾಂಪ್ಲೆಕ್ಸ್ ಕಟ್ಟಿ ಟ್ರಸ್ಟ್ ನಿರ್ಮಿಸಿ ಬಂದ ಹಣದಲ್ಲಿ ಯಜ್ಞ ನಡೆಸಬೇಕು ಅನ್ನೋದು ಇವರ ಬಯಕೆ. ಆದರೆ, ಇವರ ಮಕ್ಕಳೇ ಮೋಸ ಮಾಡಿದ್ದಾರಂತೆ.
ಇದನ್ನೂ ಓದಿ; ಪಡಿತರ ಚೀಟಿದಾರರಿಗೆ ಬಿಗ್ ಶಾಕ್; ಜಾರಿಗೆ ಬರಲಿವೆ ಈ ಹೊಸ ನಿಯಮಗಳು!
ಮಕ್ಕಳೇ ಮೋಸ ಮಾಡಿದ್ದಾರೆಂದು ಅವರ ಅನ್ನ ನನಗೆ ಬೇಡ ಅಂತ ಮನೆ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ಮಾಡ್ತಿದ್ದಾರೆ. ಈ ಇಳಿವಯಸ್ಸಿನಲ್ಲಿ ಮಕ್ಕಳ ಮನೆಗೆ ಹೋಗದೇ ಬೇರೆಡೆ ಇದ್ದು, ಕಷ್ಟ ಪಟ್ಟು ಮಾಡಿದ್ದ ಜಾಗ ಇಲ್ಲ. ಆ ಜಾಗ ಟ್ರಸ್ಟ್ʼಗೆ ಕೊಡಲೇಬೇಕು. ಪ್ರತಿವರ್ಷ ಪ್ರಕೃತಿಯಜ್ಞ ನಡೆಯಲೇಬೇಕು ನಿಲ್ಲಬಾರದು ಎಂದು ಬೀದಿಯಲ್ಲಿ ಕುಳಿತು ಹೋರಾಟ ಮಾಡುವಂತಾಗಿರೋದು ನಿಜಕ್ಕೂ ದುರಂತ.
ಇದನ್ನೂ ಓದಿ; ಯಜಮಾನಿಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್; ಏನದು? ಮಹಿಳೆಯರೇ ಮಿಸ್ ಮಾಡ್ದೆ ಈ ಸುದ್ದಿ ಓದಿ













