ಕಾಫಿನಾಡಲ್ಲಿ ಕಾಡಾನೆ ಓಡಾಟದ ಹಿಂದೆ ಬಿದ್ದ ಡ್ರೋನ್ ಕ್ಯಾಮರಾ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡಿನಲ್ಲಿ ಹೆಚ್ಚಾಗುತ್ತಿರುವ ಆನೆ ಹಾವಳಿ ಹಿನ್ನೆಲೆಯಲ್ಲಿ ಡ್ರೋನ್ ಮೂಲಕ ಅರಣ್ಯ ಇಲಾಖೆ ಅವುಗಳ ಚಲನ-ವಲನದ ಪತ್ತೆ ಮಾಡುತ್ತಿದೆ. ಬೀಟಮ್ಮ ಗ್ಯಾಂಗ್ʼನಿಂದ ಬೇರ್ಪಟ್ಟ 23 ಕಾಡಾನೆ ಹಿಂಡುಗಳು ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಯಲ್ಲಿ ಚಲನ-ವಲನ ಕಂಡುಬರುತ್ತಿದೆ.


ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್‌ ಕಾರ್ಡ್‌ ಅನ್ನು ಇಲ್ಲಿ ಪಡೆಯಿರಿ


ಡ್ರೋನ್ ನಲ್ಲಿ ಆನೆಗಳು ಸಾಗೋ ಟ್ರ್ಯಾಕ್ ಪತ್ತೆ:
ಕಾಫಿನಾಡಲ್ಲಿ ಬೀಟಮ್ಮ ಆಂಡ್ ಟೀಂ ರೌಂಡ್ಸ್ ಹಾಕುತ್ತಿದ್ದು, ಅರಣ್ಯ ಇಲಾಖೆ ಡ್ರೋನ್ ನಲ್ಲಿ ಆನೆಗಳು ಸಾಗೋ ಟ್ರ್ಯಾಕ್ ಪತ್ತೆ ಮಾಡುತ್ತಿದ್ದಾರೆ. ಆನೆ ಟಾಸ್ಕ್ ಫೋರ್ಸ್ ಹಾಗೂ ರಿವರ್ಸ್ ಫಾರಸ್ಟ್ ಸಿಬ್ಬಂದಿಗಳ ಜೊತೆಗೆ ಹಿರಿಯ ಅಧಿಕಾರಿಗಳು ಬೀಟಮ್ಮ ಟೀಂ ಸಾಗೋ ಮಾರ್ಗದಲ್ಲೇ ಮೊಕ್ಕಾಂ ಹೂಡಿದ್ದಾರೆ.


ಇದನ್ನೂ ಓದಿ; ರಾಜ್ಯದ ಎಲ್ಲಾ ರೈತರಿಗೆ ಮುಖ್ಯ ಮಾಹಿತಿ; ಈ ಕೆಲಸ ಮಾಡಲು ಮೂರು ದಿನ ಮಾತ್ರ ಬಾಕಿ


24 ಗಂಟೆಯೂ ಕಾಡಾನೆ ಬೆನ್ನತ್ತಿರೋ ಟಾಸ್ಕ್ ಪೋರ್ಸ್:
17 ಕಾಡಾನೆ ಹಿಂಡು ವಾರದಿಂದ ಚಿಕ್ಕಮಗಳೂರು ತಾಲೂಕಿನಲ್ಲಿ ಬೀಡು ಬಿಟ್ಟಿದ್ದು, ಆನೆ ಹೋಗೋ ಮಾರ್ಗದಲ್ಲಿ ಜನ, ಕಾರ್ಮಿಕರಿದ್ದರೆ ತಕ್ಷಣವೇ ಸೂಕ್ತ ಕ್ರಮಕೈಗೊಳ್ಳಲಾಗುತ್ತಿದೆ. ಟಾಸ್ಕ್ ಪೋರ್ಸ್ ಸಿಬ್ಬಂದಿಗಳು 24 ಗಂಟೆಯೂ ಕಾಡಾನೆ ಹಿಂಡು ಬೆನ್ನತ್ತಿದ್ದಾರೆ.


ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್‌ ಶಿಪ್‌; ಅರ್ಜಿ ಸಲ್ಲಿಸಲು ಸಿಂಪಲ್‌ ಸ್ಟೆಪ್‌ ಇಲ್ಲಿದೆ ನೋಡಿ


ರಿಲ್ಯಾಕ್ಸ್ ಮೂಡ್​ʼನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​:
ಚಿಕ್ಕಮಗಳೂರು ತಾಲೂಕಿನ ಆಲದಗುಡ್ಡೆ ಗ್ರಾಮದಲ್ಲಿ ಆನೆಗಳ ಹಿಂಡು ಪತ್ತೆಯಾಗಿದೆ. ಸಕಲೇಶಪುರದಿಂದ ಚಿಕ್ಕಮಗಳೂರಿಗೆ ಬಂದಿರುವ ಆನೆ ಹಿಂಡು ಅಕೇಶಿಯ ಪ್ಲಾಂಟೇಶನ್​ನಲ್ಲಿ ರಿಲ್ಯಾಕ್ಸ್ ಮೂಡ್​ನಲ್ಲಿವೆ. ಬೀಟಮ್ಮ ಗ್ಯಾಂಗ್​ನಿಂದ ಬೇರ್ಪಟ್ಟ 23 ಕಾಡಾನೆಗಳು ಆಲದಗುಡ್ಡೆ ಸಮೀಪದ ಮಾರಿಕಟ್ಟೆ ಅಕೇಶಿಯ ಪ್ಲಾಂಟೇಷನ್ ನಲ್ಲಿ ಬೀಡುಬಿಟ್ಟಿದ್ದು, ಡ್ರೋನ್ ಕ್ಯಾಮರಾದಲ್ಲಿ ಕಾಡಾನೆ ಹಿಂಡಿನ ದೃಶ್ಯ ಸೆರೆಯಾಗಿದೆ.


ಇದನ್ನೂ ಓದಿ; ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್; ಈ ದಾಖಲೆ ಇಲ್ಲದೆ ಇದ್ದರು ಪಡೆಯಬಹುದು ಇ-ಖಾತಾ!


Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.