ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಯ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್ ಕಾರ್ಡ್ ಅನ್ನು ಇಲ್ಲಿ ಪಡೆಯಿರಿ

ಏನಿದು ಘಟನೆ:
ಸಾರ್ವಜನಿಕ ಸ್ಥಳದಲ್ಲಿ ಕರ್ಕಶವಾಗಿ ಶಬ್ದ ಮಾಡುತ್ತಾ ಪ್ರವಾಸಿಗರಿಗೆ ತೊಂದರೆ ಉಂಟುಮಾಡುತ್ತಿದ್ದ ವೇಳೆ, ಮುಳ್ಳಯ್ಯನಗಿರಿ ಪ್ರವಾಸಿ ತಾಣದ ಸಮೀಪ ಕರ್ತವ್ಯ ನಿರತ ಸಿಬ್ಬಂದಿ ಆಗಮಿಸಿ ತಿಳುವಳಿಕೆ ನೀಡಿ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ; ರಾಜ್ಯದ ಎಲ್ಲಾ ರೈತರಿಗೆ ಮುಖ್ಯ ಮಾಹಿತಿ; ಈ ಕೆಲಸ ಮಾಡಲು ಮೂರು ದಿನ ಮಾತ್ರ ಬಾಕಿ
ಈ ವೇಳೆ ಕರ್ತವ್ಯ ನಿರತ ಸಿಬ್ಬಂದಿಯ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಬೆಂಗಳೂರು ನಿವಾಸಿ ಚಿದಾನಂದ ಹಾಗೂ ಇತರರ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿದೆ.
ಪ್ರವಾಸಿ ತಾಣದಲ್ಲಿ ಹೆಚ್ಚಾಗುತ್ತಿದ್ಯಾ ಪುಂಡಾರ ಹಾವಳಿ:
ನಿನ್ನೆ ಅಷ್ಟೆ ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದ ಘಟನೆ ನಡೆದಿದೆ. ಹೌದು, ಬೆಂಗಳೂರು ಮೂಲದ ಪ್ರವಾಸಿಗರು ಪ್ರಸಿದ್ಧ ಪ್ರವಾಸಿತಾಣ ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಇದನ್ನ ಪ್ರಶ್ನಿಸಿದ ಮಿತ್ರ ಪಡೆಯ ಸದಸ್ಯರಿಗೂ ಕೂಡ ಧಮ್ಕಿ ಹಾಕಿದ್ದಾರೆ. ಸದ್ಯ ಡ್ರಿಂಕ್ಸ್ ಇದ್ದ ಕಾರನ್ನ ಪೊಲೀಸರು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸಲು ಸಿಂಪಲ್ ಸ್ಟೆಪ್ ಇಲ್ಲಿದೆ ನೋಡಿ
ಪ್ರವಾಸಿ ತಾಣಗಳ ಬಳಿ ಪುಂಡಾಟಿಕೆ ಎಲ್ಲದಕ್ಕೂ ತಡೆಯೊಡ್ಡಬೇಕಿದೆ. ಇಲ್ಲದೆ ಹೋದರೆ ಪುಂಡಪೋಕರಿ, ಕುಡುಕರ ತಾಣವಾಗಿ ಮಾರ್ಪಡುವುದರಲ್ಲಿ ಎರಡು ಮಾತಿಲ್ಲ.













