ಅಡಿಕೆ, ಕಾಫಿ, ಕಾಳುಮೆಣಸು, ತೆಂಗು ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿ ಉಂಟುಮಾಡುವ ಕೀಟಗಳ ನಿಯಂತ್ರಣಕ್ಕಾಗಿ “ಬಯೋಬೀಟಲ್ ಶೀಲ್ಡ್” ಎಂಬ ಜೈವಿಕ ಉತ್ಪನ್ನವನ್ನು ಅಭಿವೃದ್ಧಿಪಡಿಸಿರುವುದಾಗಿ ಇನಾಮಿಕ್ ಟೆಕ್ನಾಲಜಿಯ ಸಿಇಒ ಬಾಲಸುಬ್ರಹ್ಮಣ್ಯ ಎಚ್.ಎಂ. ತಿಳಿಸಿದ್ದಾರೆ.
ಅವರ ಪ್ರಕಾರ, ಈ ಉತ್ಪನ್ನವನ್ನು ಬೆಳೆಗಳಿಗೆ ಸಿಂಪಡಿಸಿದರೆ ಕೀಟಬಾಧೆ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ರೈತರ ತೋಟಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಉತ್ತಮ ಪರಿಣಾಮ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ಬಯೋಶಮನ ಹಾಗೂ ಬಯೋಬೀಟಲ್ ಶೀಲ್ಡ್ ಎರಡೂ ಜೈವಿಕ ತಂತ್ರಜ್ಞಾನದ ಆಧಾರದ ಮೇಲೆ ಅಭಿವೃದ್ಧಿಪಡಿಸಲಾದ ಉತ್ಪನ್ನಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

















