ಶೃಂಗೇರಿ: ಬಿಜಿಎಸ್ ದರ್ಶಿನಿ ಸಂಯುಕ್ತ ಪ್ರೌಢಶಾಲೆ 100% ಫಲಿತಾಂಶ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಮ್ಮೆ ಹೆಮ್ಮೆಯ ಸಾಧನೆ ಮಾಡಿರುವ ಬಿಜಿಎಸ್ ದರ್ಶಿನಿ ಸಂಯುಕ್ತ ಪ್ರೌಢಶಾಲೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ.

ಈ ವರ್ಷದ ವಿಶೇಷತೆ ಎಂದರೆ, ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಅನರ್ಘ ಎಚ್ ಎ ಮತ್ತು ಅತ್ರೇಯ ಎಸ್ ಪಿ ಇಬ್ಬರೂ 619 ಅಂಕಗಳನ್ನು (99.04%) ಗಳಿಸಿ ಈ ಸಾಧನೆ ಮಾಡಿದ್ದಾರೆ.

ಇದಲ್ಲದೆ, ಅಧ್ವಿಶ್ರೀ ಎಚ್ ಪಿ 614 ಅಂಕಗಳು (98.24%), ಪ್ರಣಮ್ಯ ಕಾಮತ್ 612 ಅಂಕಗಳು (97.92%), ತಾನ್ವಿ ಶೆಟ್ಟಿ 611 ಅಂಕಗಳು (97.76%) ಮತ್ತು ಕುಂದನ್ ಇಂದ್ರ ಪಿ 600 ಅಂಕಗಳು (96%) ಗಳಿಸಿ ಗಮನಾರ್ಹ ಸಾಧನೆ ತೋರಿದ್ದಾರೆ.

ಒಟ್ಟು 98 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿರುವುದು ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ. ಗ್ರೇಡ್ ಪ್ರಕಾರ ಫಲಿತಾಂಶ ಹೀಗಿದೆ: A+ ಗ್ರೇಡ್‌ನಲ್ಲಿ 29 ವಿದ್ಯಾರ್ಥಿಗಳು, A ಗ್ರೇಡ್‌ನಲ್ಲಿ 28, B+ ಗ್ರೇಡ್‌ನಲ್ಲಿ 24 ಮತ್ತು B ಗ್ರೇಡ್‌ನಲ್ಲಿ 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರ ಸಮನ್ವಯದ ಪ್ರಯತ್ನದಿಂದ ಈ ಶ್ರೇಷ್ಠ ಸಾಧನೆ ಸಾಧ್ಯವಾಗಿದೆ ಎಂದು ಆಡಳಿತ ಮಂಡಳಿ ಸಂತೋಷ ವ್ಯಕ್ತಪಡಿಸಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.