ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಮಲೆನಾಡಿನ ಬೆಲ್ಜಿಯಂ ನಾಯಿಗಳನ್ನು ಭಾರತೀಯ ಸೇನೆಯ ಬೆಂಗಳೂರು ಶಾಖೆಯ ಬೇಹುಗಾರಿಕೆ ವಿಭಾಗದ ಮುಖ್ಯಸ್ಥ ಕರ್ನಲ್ ಡಾ.ಜೈವಿನ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ; ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ; ಏನಿದು ಪಿಎಂ ವಿಶ್ವಕರ್ಮ ಯೋಜನೆ; ಇದಕ್ಕೆ ಯಾರು ಅರ್ಹರು

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಿಂದ ಸುಮಾರು 4 ಕಿಲೋ ಮೀಟರ್ ನಷ್ಟು ದೂರದಲ್ಲಿರುವ ಕಡೇಗದ್ದೆ ನಿವಾಸಿಯಾಗಿರುವ ಚಕ್ರಪಾಣಿ ಕುಟುಂಬ ಇಡೀ ಕೊಪ್ಪಕ್ಕೆ ಮಾತ್ರವಲ್ಲದೆ ದೇಶ, ವಿದೇಶದಲ್ಲೂ ಆರ್ಯುವೇದ ಚಿಕಿತ್ಸೆಯಿಂದ ಹೆಸರುವಾಸಿಯಾಗಿದೆ. ಅಷ್ಟೆ ಅಲ್ಲದೆ ಚಕ್ರಪಾಣಿ ಅವರ ಮಗ ಡಾ.ರಾಘವೇಂದ್ರ ದಂಪತಿಗಳು ಕೊಪ್ಪ ತಾಲೂಕಿನ ಕಡೇಗದ್ದೆ ಗ್ರಾಮದಲ್ಲಿ ಆಯುರ್ವೇದಿಕ್ ಆಸ್ಪತ್ರೆ ನಡೆಸುತ್ತಿದ್ದಾರೆ.

ಇದನ್ನೂ ಓದಿ; ಗಣೇಶ ಚತುರ್ಥಿ ಪೂಜೆ ಮಾಡಲು ಶ್ರೇಷ್ಠ ಸಮಯ ಯಾವುದು ಗೊತ್ತಾ?; ಶುಭ ಮುಹೂರ್ತದ ವಿವರ, ಆಚರಣೆ ಇಲ್ಲಿದೆ
ಒಂದು ಲಕ್ಷದ 20 ಸಾವಿರ ಬೆಲಬಾಳುವ ಮಲಿನಾಯ್ಸ್ ನ ಜಾತಿಯ ಶ್ವಾನಗಳನ್ನು ಕುಟುಂಬ ಸೇನಗೆ ನೀಡಿದೆ. ರಾಘವೇಂದ್ರ ಅವರ ಆಯುರ್ವೇದಿಕ್ ಆಸ್ಪತ್ರೆಯಲ್ಲಿದ್ದ ಮೂರು ಬೆಲ್ಜಿಯಂ ನಾಯಿಗಳನ್ನ ಚಕ್ರಪಾಣಿ ಅವರ ಮೊಮ್ಮಕ್ಕಳಾದ ಸಾನ್ವಿ ಕಾರಂತ್ ಹಾಗೂ ಮಾನ್ವಿ ಕಾರಂತ್ ಅವರು ನಾಯಿಗಳನ್ನ ಭಾರತೀಯ ಸೈನ್ಯದ ಬೇಹುಗಾರಿಕೆ ಶಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ನಾಯಿ ಮರಿಗಳಿಗೆ ಮೀರತ್ನ ಆರ್.ವಿ.ಸಿ.ಕೇಂದ್ರದಲ್ಲಿ ತರಬೇತಿ ನೀಡಿ ಕಾಶ್ಮೀರದ ಗಡಿ ಪ್ರದೇಶಕ್ಕೆ ಕಳುಹಿಸಲಾಗುತ್ತದೆ ಎನ್ನಲಾಗಿದೆ.
ಮೂಡಿಗೆರೆ: ಚಾರ್ಮಾಡಿ ಘಾಟಿಯಲ್ಲಿ ಹೆಚ್ಚುತ್ತಿರುವ ಅಪಘಾತ | ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೆಡ್ ಅಳವಡಿಕೆ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಉತ್ತಮ ಗುಣಮಟ್ಟದ ರಸ್ತೆಗಳಿದ್ದರೂ ಸಹ ಚಾರ್ಮಾಡಿ ಘಾಟಿಯಲ್ಲಿ ಮಂಜು ಕವಿದ ವಾತಾವರಣ ಇರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಪಾಲಿಸುವುದರ ಜೊತೆಗೆ ತಾಳ್ಮೆಯಿಂದ ವಾಹನ ಚಾಲನೆ ಮಾಡಬೇಕು ಎಂದು ಪಿ.ಎಸ್.ಐ ಜಂಬೂರಾಜ್ ಮಹಾಜನ್ ತಿಳಿಸಿದರು.
ಇದನ್ನೂ ಓದಿ; HSRP ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ; ಏನಿದು HSRP? ಅಳವಡಿಕೆ ಹೇಗೆ?
ಶನಿವಾರ ಚಾರ್ಮಾಡಿ ಘಾಟಿಯಲ್ಲಿ ಬಣಕಲ್ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಅಪಘಾತ ತಡೆಗಟ್ಟಲು ಬ್ಯಾರಿಕೆಡ್ ಗಳನ್ನು ಅಳವಡಿಸಲಾಯಿತು. ಯುವಕರು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ಚಾರ್ಮಾಡಿ ಘಾಟಿಯ ತಿರುವಿನ ಬಳಿ ರಸ್ತೆ ಬದಿಯ ಮೋರಿಗಳು ಬಿರುಕು ಬಿಟ್ಟಿದೆ. ಬಿರುಕು ಬಿಟ್ಟ ಪ್ರದೇಶದಲ್ಲಿ ಬ್ಯಾರಿಕೆಡ್ ಅಳವಡಿಸಿ, ಮುಂಜಾಗ್ರತಾ ಕ್ರಮವನ್ನು ಬಣಕಲ್ ಪೊಲೀಸರು ಕೈಗೊಂಡರು. ಬಸ್ ಲಾರಿ ಮೊದಲಾದ ಘನ ವಾಹನಗಳು ಸಂಚರಿಸುವಾಗ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದರು.
ಈ ಸಂದರ್ಭದಲ್ಲಿ ಬಣಕಲ್ ಠಾಣೆಯ ಎ.ಎಸ್.ಐ ಶಶಿ, ಜಗದೀಶ್, ಸಿಬ್ಬಂದಿ ವರ್ಗದವರು ಹಾಜರಿದ್ದರು.
ಇದನ್ನೂ ಓದಿ; ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ
















