ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಸಾಕುಪ್ರಾಣಿಗಳಿಗೆ ಅಹಾರ ಉಪ ಉತ್ಪನ್ನ ತಯಾರಿಸುವ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಮಲ್ನಾಡ್ ಪ್ರೋ ರಿಚ್ ಘಟಕದಲ್ಲಿ ಕೋಳಿ ಮಾಂಸದ ತ್ಯಾಜ್ಯದೊಂದಿಗೆ ಹಸು, ಕರುಗಳ ಮಾಂಸವನ್ನು ಸಹ ಸೇರಿಸಲಾಗುತ್ತಿದೆ ಎಂಬ ದೂರಿನ ಮೇರೆಗೆ ತುಂಗಾನಗರ ಠಾಣಾ ಪೊಲೀಸರು ಗುರುವಾರ ದಾಳಿ ನಡೆಸಿದರು.

ದಾಳಿಯಲ್ಲಿ ಕರುವಿನ ಕಳೇಬರ ಹಾಗೂ ತ್ಯಾಜ್ಯ ಪತ್ತೆಯಾಗಿದೆ. ಘಟಕಕ್ಕೆ ಗೋ ಸಾಗಾಟ ಮಾಡಿ ನಂತರ ಅವುಗಳ ವಧೆ ಮಾಡಿ, ಅವುಗಳಿಂದ ಪಶು ಆಹಾರ ತಯಾರಿಸಿ ಲಾಭಕ್ಕಾಗಿ ಮಾರಾಟ ಮಾಡುತ್ತಿದ್ದ ಆರೋಪದಡಿ ಕಮಲೇಶ್ ಹಾಗೂ ಆತನ ಸಹಚರರು ಮತ್ತು ಜಾಗದ ಮಾಲೀಕರ ವಿರುದ್ಧ ಗೋ ಹತ್ಯೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ; ಸಾರ್ವಜನಿಕರ ಗಮನಕ್ಕೆ; ರಾಜ್ಯದ ಪ್ರತಿಯೊಬ್ಬರ ಮೊಬೈಲ್ ಗೆ ಬರಲಿದೆ ಎಮರ್ಜೆನ್ಸಿ ಅಲರ್ಟ್!
ಏನಿದು ಘಟನೆ:
ಶಿವಮೊಗ್ಗದ ಕೋಳಿ, ಕುರಿ ಮತ್ತು ಮೀನು ತ್ಯಾಜ್ಯ ಗಳನ್ನ ಪರಿಷ್ಕರಿಸಿ ಪೆಡಿಗ್ರೀ, ಫಿಶ್ ಮೀಲ್ ಮತ್ತು ಕೋಳಿ ಪೌಲ್ಟ್ರಿಗಳಿಗೆ ಆಹಾರ ಉತ್ಪನ್ನ ತಯಾರಿಸುವ ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಮಲ್ನಾಡು ಪ್ರೋ ರಿಚ್ ನಲ್ಲಿ ಸತ್ತ ಕರುವೊಂದು ಪತ್ತೆಯಾಗಿದ್ದು ಹಿಂದೂ ಸಂಘಟನೆಗಳ ಕಣ್ಣಿಗೆ ಗುರಿಯಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿಯಿಂದ ದಿನಾಲು ಮೂರು ವಾಹನಗಳು ಈ ಮಲ್ನಾಡು ರಿಚ್ ಪ್ರೋ ಕಾರ್ಖಾನೆಗಳಿಗೆ ಬರುತ್ತದೆ. ಇಲ್ಲಿ ಚಿಕನ್ ಮತ್ತು ಫಿಶ್ ತ್ಯಾಜ್ಯ ಮಾತ್ರ ತರಲು ಪಾಲಿಕೆಯಿಂದ ಅನುಮತಿಯಿದೆ. ಆದರೆ ಮೊನ್ನೆ ಬಂದ ತ್ಯಾಜ್ಯ ವಾಹನದಲ್ಲಿ ಕರುವಿನ ಶವ ಪತ್ತೆಯಾಗಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿವೆ. ಈ ತ್ಯಾಜ್ಯ ಚಿಕ್ಕಮಗಳೂರಿನಿಂದ ಬಂದ ತ್ಯಾಜ್ಯವೊಂದರಲ್ಲಿ ಮೃತ ಕರುವೊಂದು ಪತ್ತೆಯಾಗಿದೆ ಎಂದು ಕೂಡ ಹೇಳಲಾಗುತ್ತಿದೆ. ಇತ್ತೀಚೆಗಷ್ಟೆ ಚಿಕ್ಕಮಗಳೂರು ನಗರ ಸಭೆ ಸಹ ಎಂಒಯು ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ; ರೈತರಿಗೆ ಸಿಹಿ ಸುದ್ದಿ;ಪಿಎಂ ಕಿಸಾನ್ ಹೊಸ ಕಂತಿನ ಹಣ ಈ ತಿಂಗಳಲ್ಲೇ ಬಿಡುಗಡೆ?
ಇನ್ನು ದಾಳಿಯಲ್ಲಿ ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನ ಹಾಗೂ 12 ಫೀಡಿಂಗ್ ಫುಡ್ ನ ಚೀಲಗಳನ್ನು ಜಪ್ತಿ ಮಾಡಲಾಗಿದೆ. ತುಂಗಾನಗರ ಠಾಣೆಯ ಪಿಎಸ್ಐ ಕುಮಾರ್ ಕುರಗುಂದ ಹಾಗೂ ಸಿಬ್ಬಂದಿ ತಂಡ ದಾಳಿಯಲ್ಲಿ ಇದ್ದರು.
ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಲು ಪರದಾಡಿದ ವಿಮಾನ
ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಬೆಂಗಳೂರಿನಿಂದ ಶಿವಮೊಗ್ಗ ನಿಲ್ದಾಣಕ್ಕೆ ಬಂದಿದ್ದ ವಿಮಾನವೊಂದು ಲ್ಯಾಂಡ್ ಆಗದೇ ಬೆಂಗಳೂರಿಗೆ ವಾಪಸ್ ಆಗಿದ್ದ ಘಟನೆ ಒಂದು ಇತ್ತೀಚೆಗಷ್ಟೇ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಅಂತಹದ್ದೇ ಘಟನೆ ನಡೆದಿದೆ. ಬೆಂಗಳೂರು-ಶಿವಮೊಗ್ಗ ಇಂಡಿಗೋ ವಿಮಾನ ಹವಾಮಾನ ವೈಪರೀತ್ಯದಿಂದಾಗಿ 20 ನಿಮಿಷ ತಡವಾಗಿ ಲ್ಯಾಂಡ್ ಆಗಿದೆ.
ಇಂದು (ಅಕ್ಟೋಬರ್ 12) ಬೆಳಿಗ್ಗೆ 9.50 ಕ್ಕೆ ಬೆಂಗಳೂರಿನಿಂದ ಹೊರಟ ವಿಮಾನ 11.05 ಕ್ಕೆ ಶಿವಮೊಗ್ಗದ ಸೋಗಾನೆ ಬಳಿ ಇರುವ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ವಿಮಾನ 20 ನಿಮಿಷ ತಡವಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ
ಮೋಡ ಕವಿದ ವಾತಾವರಣ ಇರುವುದರಿಂದ ವಿಸಿಬಲಿಟಿ ಇಲ್ಲದಿರುವ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ ಲ್ಯಾಂಡ್ ವಿಳಂಬವಾಗಿದೆ. ಇನ್ನು ಇದೇ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ.
ಈ ಹಿಂದೆಯೂ ಲ್ಯಾಂಡ್ ಆಗದೇ ಬೆಂಗಳೂರಿಗೆ ವಾಪಸ್ ಹೋಗಿದ್ದ ವಿಮಾನ:
ಕಳೆದ ಭಾನುವಾರ ಅಂದರೆ ಅಕ್ಟೋಬರ್ 8 ರಂದು ಹವಾಮಾನ ವೈಪರೀತ್ಯದಿಂದಾಗಿ ಇಂಡಿಗೋ ವಿಮಾನ ಶಿವಮೊಗ್ಗ ನಿಲ್ದಾಣದಲ್ಲಿ ಲ್ಯಾಂಡ್ ಆಗದೇ ಬೆಂಗಳೂರಿಗೆ ವಾಪಸ್ ಆಗಿತ್ತು. ಅಂದು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ತುಂತುರು ಮಳೆ ಆಗುತ್ತಿತ್ತು. ಜೊತೆಗೆ ಭಾರೀ ಪ್ರಮಾಣದ ಮೋಡ ಆವರಿಸಿತ್ತು. ಹೀಗಾಗಿ ಪೈಲೆಟ್ ಗೆ ರನ್ ವೇ ಸರಿಯಾಗಿ ಕಾಣಿಸಿಲ್ಲ. ಇದರಿಂದ ಆಗಸದಲ್ಲಿ ಸುತ್ತಾಡಿತ್ತು. ಆದರೂ ರನ್ ವೇ ಸರಿಯಾಗಿ ಕಾಣಿಸದಿರುವುದರಿಂದ ಕೊನೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಿತ್ತು












