ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿ ಮತದಾನ ವೇಳೆ ಪ್ರವೀಣ್ ಖಾಂಡ್ಯ ಹಾಗೂ ಬೆಂಬಲಿಗರ ಮೇಲೆ ನಡೆದ ಹಲ್ಲೆ ಪ್ರಕರಣ ದಾಖಲಾದ ನಂತರದಲ್ಲಿ, ಪ್ರವೀಣ್ ಖಾಂಡ್ಯ ಇತರರ ಮೇಲೆ ಪ್ರತಿ ದೂರನ್ನು ನೀಡಲಾಗಿದ್ದು ಹಾಗೆ ದೂರು ನೀಡಿರುವ ದಲಿತ ಯುವಕ ನಾಪತ್ತೆಯಾಗಿದ್ದು, ಈ ಕುರಿತು ಯುವಕನ ತಾಯಿ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಮೇ 1 ರಿಂದ ದೇಶಾದ್ಯಂತ ಹೊಸ ರೂಲ್ಸ್ ಜಾರಿ!; ಈ ಎಲ್ಲಾ ನಿಯಮಗಳಲ್ಲಿ ಬದಲಾವಣೆ; ಇಲ್ಲಿದೆ ನೋಡಿ ಡಿಟೈಲ್ಸ್

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರರು ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಶಾಂತಿಯುತವಾಗಿ ಮತದಾನದ ನಡೆಯುತ್ತಿದ್ದಾಗಲೇ ಚಿಕ್ಕಮಗಳೂರು ತಾಲೂಕಿನ ಉಜ್ಜೆನಿ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು. ಶೃಂಗೇರಿ ಕ್ಷೇತ್ರ ವ್ಯಾಪ್ತಿಯ ಪ್ರಭಾವಿ ಬಿಜೆಪಿ ಹಾಗೂ ಮಾಜಿ ಬಜರಂಗದಳದ ಮುಖಂಡ ಖಾಂಡ್ಯ ಪ್ರವೀಣ್ ಮೇಲೆ ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಈ ಕುರಿತು ಹಲ್ಲೆ ಮಾಡಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗತ್ತು. ಅಲ್ಲದೆ ಪ್ರತಿ ದೂರಿನ ಮೇರೆಗೆ ಪ್ರವೀಣ್ ಖಾಂಡ್ಯ ಹಾಗೂ ಬೆಂಬಲಿಗರ ವಿರುದ್ಧವೂ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿತ್ತು.

ಇದೀಗ ಅಟ್ರಾಸಿಟಿ ದೂರು ನೀಡಿರುವ ಯುವಕ ನಾಪತ್ತೆಯಾಗಿರುವ ಕುರಿತು ಯುವಕನ ತಾಯಿ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?;
26/04/2024 ರಂದು 4.30 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದ ನನ್ನ ಮಗ ರಾಜೇಶನಿಗೆ (26) ಯಾವುದೋ ಒಂದು ಕರೆ ಬಂದಿದ್ದು, ಆ ಪೋನ್ ನಲ್ಲಿ ಮಾತನಾಡಿದ ನಂತರ ಎದ್ದು ಕೈ ಕಾಲು ತೊಳೆದು ಬಟ್ಟೆ ಹಾಕಿಕೊಂಡು ಆ ಮೇಲೆ ಬರುತ್ತೇನೆ ಎಂದು ರಸ್ತೆಗೆ ಹೋದನು. ಅಷ್ಟರಲ್ಲಿ ಬಿಳಿ ಬಣ್ಣದ ಒಂದು ಕಾರು ಬಂದಿದ್ದು, ಆ ಕಾರಿನಲಿ. ಸಂತೋಷ್ ಬಾಳೆಗದ್ದೆ ಇದ್ದು, ನನ್ನ ಮಗ ರಾಜೇಶ್ ಸಂತೋಷ್ ರವರ ಬಳಿ ಸುಮಾರು 2 ತಿಂಗಳಿಂದ ಕೆಲಸಕ್ಕೆ ಹೋಗುತ್ತಿದ್ದು, ಆ ಕಾರು ಹತ್ತಿಕೊಂಡು ಹೋದ ನನ್ನ ಮಗ ರಾಜೇಶ ಇಂದಿನವರೆವಿಗೂ ಮನೆಗೆ ಬಂದಿರುವುದಿಲ್ಲ.
ಇದನ್ನೂ ಓದಿ: ರೇಷನ್ ಕಾರ್ಡ್ ಇದೆಯಾ?; ಹಾಗದ್ರೆ ಉಚಿತವಾಗಿ ಸಿಗಲಿದೆ ಗ್ಯಾಸ್ ಸ್ಟವ್ ಹಾಗೂ ಗ್ಯಾಸ್ ಸಿಲಿಂಡರ್!; ಇಲ್ಲಿದೆ ನೋಡಿ ಡಿಟೈಲ್ಸ್
ಫೋನ್ ಮಾಡಿದರೆ ಪೋನ್ ಸ್ವಿಚ್ ಆಫ್ ಆಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಸಂಬಂಧಿಕರು, ನೆಂಟರಿಷ್ಟರ ಬಳಿ ವಿಚಾರಿಸಿ ಹುಡುಕಾಡಿ ನೋಡಿದ್ದು ಸಿಕ್ಕಿರುವುದಿಲ್ಲ. ಕೊನೆಗೆ 26/04/2024 ರಂದು ಉಜ್ಜಿನಿ ಗ್ರಾಮದಲ್ಲಿ ನಡೆದ ಚುನಾವಣೆ ಘರ್ಷಣೆ ಸಂಬಂಧ ಹಸಲರು ಜಾತಿಯ ನನ್ನ ಮಗನನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಖಾಂಡ್ಯ ಪ್ರವೀಣ್ ಭಟ್ ರ ವಿರುದ್ಧ ದಲಿತ ದೌರ್ಜನ್ಯ ಕೇಸ್ ಕೊಟ್ಟಿರುವುದಾಗಿ ತಿಳಿದು ಬಂದಿರುತ್ತೆ. ಆದರೆ ಇದರಲ್ಲಿ ನನ್ನ ಮಗ ಅಮಾಯಕನಾಗಿರುತ್ತಾನೆ. ನಾಪತ್ತೆಯಾಗಿರುವ ಮಗನನ್ನು ಪತ್ತೆ ಮಾಡಿ ಕೊಡಬೇಕೆಂದು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಯುವಕನ ತಾಯಿ ದೂರು ನೀಡಿದ್ದಾರೆ.
ಉಜ್ಜಿನಿಯಲ್ಲಿ ನಡೆದ ಘಟನೆ ಸಂದರ್ಭದಲ್ಲಿ ನನ್ನ ಮಗನು ಮನೆಯಲ್ಲಿಯೇ ಇದ್ದು, ರಾಜಕೀಯ ದುರುದ್ದೇಶದಿಂದ ನನ್ನ ಮಗನನ್ನು ಬಳಸಿಕೊಂಡು ಒತ್ತಾಯಪೂರ್ವಕವಾಗಿ ದೂರನ್ನು ನೀಡಿಸಲಾಗಿದೆ. ಈ ಹಿಂದೆ ನಡೆದ ಕೆಲವು ಘಟನೆಗಳಲ್ಲಿ ಈ ಭಾಗದಲ್ಲಿ ಕೆಲವು ಹತ್ಯೆಗಳಾಗಿವೆ, ಆದ್ದರಿಂದ ರಾಜಕೀಯ ವ್ಯಕ್ತಿಗಳ ಷಡ್ಯಂತ್ರದಿಂದ ನನ್ನ ಮಗನ ಜೀವಕ್ಕೆ ಅಪಾಯ ಇದ್ದು ನಮಗೆ ಮಗನನ್ನು ಒಪ್ಪಿಸಿ ನ್ಯಾಯ ಕೊಡಿಸಬೇಕು ಎಂದು ತಾಯಿ ಒತ್ತಾಯಿಸಿದ್ದಾರೆ.












