
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಫಿ ತೋಟದ ಮಾಲೀಕರೊಬ್ಬರ ಜಮೀನಿನಲ್ಲಿದ್ದ ಬೃಹತ್ ಕೃಷಿ ಹೊಂಡದಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಮಕರವಳ್ಳಿ ಗ್ರಾಮದ ಆಕಾಶ್ (21) ಮೃತ ಯುವಕ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಮೇ 1 ರಿಂದ ದೇಶಾದ್ಯಂತ ಹೊಸ ರೂಲ್ಸ್ ಜಾರಿ!; ಈ ಎಲ್ಲಾ ನಿಯಮಗಳಲ್ಲಿ ಬದಲಾವಣೆ; ಇಲ್ಲಿದೆ ನೋಡಿ ಡಿಟೈಲ್ಸ್

ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿರುವ ತನ್ನ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದ. ಎ.27ರಂದು ತನ್ನ ಅಣ್ಣ ಕುಶಾಲ್ ಹಾಗೂ ಸ್ನೇಹಿತದಾರ ಭರತ್, ಶ್ರೇಯಸ್ ಎಂಬುವರೊಂದಿಗೆ ಆಕಾಶ್ ಬೆಂಗಳೂರಿನಿಂದ ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ. ಗೋಣಿಬೀಡು ಗ್ರಾಮದಲ್ಲಿರುವ ಜಯರಾಮೇಗೌಡ ಎಂಬವರ ಹೋಮ್ ಸ್ಟೇನಲ್ಲಿ ಉಳಿದು ಕೊಂಡಿದ್ದರು. ಭಾನುವಾರ ಸಂಜೆ ನಾಲ್ವರು ಜಯರಾಮೇಗೌಡ ಅವರ ಜಮೀನಿನಲ್ಲಿದ್ದ ಬೃಹತ್ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದರು ಎಂದು ಹೇಳಲಾಗಿದೆ.


ಈ ವೇಳೆ ಕೃಷಿ ಹೊಂಡದ ಆಳದ ಅರಿವಿಲ್ಲದೆ ಆಕಾಶ್ ಈಜಾಡುತ್ತ ಆಳದ ಗುಂಡಿಗೆ ಇಳಿದಿದ್ದಾನೆ. ಗುಂಡಿಯಿಂದ ಮೇಲೆ ಬರಲಾರದೇ ನಾಪತ್ತೆಯಾಗಿದ್ದ. ಸಹೋದರ ಹಾಗೂ ಸ್ನೇಹಿತರು ಕೃಷಿ ಹೊಂಡದಲ್ಲಿ ಆಕಾಶ್ ಗಾಗಿ ಎಷ್ಟೇ ಹುಡುಕಿದರೂ ಪತ್ತೆಯಾಗಿಲ್ಲ. ನಂತರ ಸ್ಥಳೀಯ ಮುಳುಗು ತಜ್ಞ ಸ್ನೇಕ್ ಆರೀಫ್ ಜೊತೆ ಗೋಣಿಬೀಡು ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ರಾತ್ರಿವರೆಗೂ ಹುಡುಕಾಡಿದರೂ ಆಕಾಶ್ ಮೃತದೇಹ ಪತ್ತೆಯಾಗಿಲ್ಲ. ಸೋಮವಾರ ಬೆಳಗ್ಗೆ ಮಂಗಳೂರು ಮೂಲದ ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ಸ್ನೇಕ್ ಆರೀಫ್ ಆಕಾಶ್ ಶವಕ್ಕಾಗಿ ಹುಡುಕಾಡಿದ ಸುಮಾರು 2 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: ರೇಷನ್ ಕಾರ್ಡ್ ಇದೆಯಾ?; ಹಾಗದ್ರೆ ಉಚಿತವಾಗಿ ಸಿಗಲಿದೆ ಗ್ಯಾಸ್ ಸ್ಟವ್ ಹಾಗೂ ಗ್ಯಾಸ್ ಸಿಲಿಂಡರ್!; ಇಲ್ಲಿದೆ ನೋಡಿ ಡಿಟೈಲ್ಸ್
ಘಟನೆ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ 100 ಅಡಿ ಕಂದಕಕ್ಕೆ ಬಸ್ ಪಲ್ಟಿ: ಆರು ವರ್ಷದ ಬಾಲಕ ಸಾವು
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ 100 ಅಡಿ ಕಂದಕಕ್ಕೆ ಪ್ರವಾಸಿ ಬಸ್ ಉರುಳಿ ಬಿದ್ದು, ಆರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ನಡೆದಿದೆ. ಮೊಹಮ್ಮದ್ ಸವಾಜ್ (6) ಮೃತ ಬಾಲಕ.
ತುಮಕೂರು ಜಿಲ್ಲೆ ಶಿರಾ ತಾಲೂಕಿನಿಂದ ಮಾಣಿಕ್ಯಾಧಾರ, ದತ್ತಪೀಠ, ಮುಳ್ಳಯ್ಯನಗಿರಿಗೆ ಬಂದಿದ್ದ ಪ್ರವಾಸಿಗರು, ದತ್ತಪೀಠ-ಮಾಣಿಕ್ಯಾಧಾರ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ 100 ಅಡಿ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ 23 ಜನರಿಗೆ ಸಣ್ಣಪುಟ್ಟ ಗಾಯ ಹಾಗೂ 6 ಜನರಿಗೆ ಗಂಭೀರ ಗಾಯವಾಗಿದ್ದು, ಆರು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಇನ್ನು ಗಾಯಾಳುಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ನೀವು ವಾಟ್ಸಾಪ್ ಬಳಕೆದಾರರೇ?; ವಾಟ್ಸಾಪ್‌ನಲ್ಲಿ ನಿಮಗೆ ಇನ್ನಷ್ಟು ಭದ್ರತೆ ಬೇಕೇ?; ಹಾಗಿದ್ರೆ ಈ ಸುದ್ದಿ ಓದಲೇಬೇಕು













