ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬುದ್ದಿ ಮಾತು ಹೇಳಿದ KSRTC ಅಧಿಕಾರಿಗೆ ಅಸಿಸ್ಟೆಂಟ್ ಓರ್ವ ಚಾಕು ಇರಿದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಜಗದೀಶ್ ಕುಮಾರ್ ಚಾಕು ಇರಿತಕ್ಕೆ ಒಳಗಾದ ಅಧಿಕಾರಿ.

ಇಲ್ಲಿನ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಜಗದೀಶ್ ಕುಮಾರ್ ವಾಹನ ಹತ್ತುವ ವೇಳೆ ಜೂನಿಯರ್ ಅಸಿಸ್ಟೆಂಟ್ ರಿತೇಶ್ ಏಕಾಏಕಿ ಅವರನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದ್ದ ಅಧಿಕಾರಿಯ ಕೈಗೆ ಗಾಯವಾಗಿದೆ.
ಇದನ್ನೂ ಓದಿ; ಗೂಗಲ್ ಪೇ ಹೊಂದಿರುವವರಿಗೆ 1 ಲಕ್ಷ ಸಾಲ!; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಹಾಜರಾತಿಗೆ ಸಂಬಂಧಿಸಿದಂತೆ ರಿತೇಶ್ ಹಾಗೂ ಆತನ ಕುಟುಂಬದವರನ್ನು ಕರೆದು ಬುದ್ದಿ ಮಾತು ಹೇಳಿದ್ದರಂತೆ. ಅಲ್ಲದೇ ಕುಟುಂಬದವರ ಮನವಿ ಮೇರೆಗೆ ಚಿಕ್ಕಮಗಳೂರಿನಿಂದ ಬೇಲೂರಿಗೆ ವರ್ಗಾವಣೆ ಮಾಡಲಾಗಿತ್ತು. ಇದರಿಂದ ರಿತೇಶ್ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ; ಹಣ ಬಾರದ ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮೀ ಯೋಜನೆಗೆ ಹೆಲ್ಪ್ ಡೆಸ್ಕ್ ಆರಂಭ…!
ಗಾಯಾಳು ಅಧಿಕಾರಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಕೃತ್ಯದ ಬಳಿಕ ಆರೋಪಿ ರಿತೇಶ್ ಪರಾರಿಯಾಗಿದ್ದಾನೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?












