ಅಜ್ಜಂಪುರ: ಪಾಳು ಬಿದ್ದಿರುವ 50 ಅಡಿ ಆಳದ ಬಾವಿಗೆ ಮಹಿಳೆ ಬಿದ್ದಿರುವ ಘಟನೆ

ಅಜ್ಜಂಪುರ: (ನ್ಯೂಸ್ ಮಲ್ನಾಡ್ ವರದಿ)  ಪಾಳು ಬಿದ್ದಿರುವ 50 ಅಡಿ ಆಳದ ಬಾವಿಗೆ ಮಹಿಳೆ ಬಿದ್ದಿರುವ ಘಟನೆಯೊಂದು ನಿನ್ನೆ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ತಡಗ ಗ್ರಾಮದಲ್ಲಿಈ ಘಟನೆ ನಡೆದಿದೆ. ಸ್ನೇಹಿತರ ಮನೆಯ ಹಬ್ಬದ ಊಟ ಮಾಡಲು ಬಂದು ತಡೆಗೋಡೆ ಇಲ್ಲದ 50 ಅಡಿ ಆಳವಾದ ನೀರಿಲ್ಲದ ಪಾಳು ಬಾವಿಯೊಳಗೆ ಮಹಿಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.


ಇದನ್ನೂ ಓದಿ:ಇದನ್ನೂ ಓದಿ: ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಕೆ; ರಾಜ್ಯ ಸರ್ಕಾರದಿಂದ ಮತ್ತೊಂದು ಯೋಜನೆ ಜಾರಿ; ಯಾವ ಯೋಜನೆ?, ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಕೂಲಿ ಕೆಲಸಕ್ಕೆ ತಡಗ ಗ್ರಾಮಕ್ಕೆ‌ ಬಂದಿದ್ದ ಚಿಕ್ಕಜಾಜೂರು ಮೂಲದ ತಿಮ್ಮಕ್ಕ (40) ಎಂಬ ಮಹಿಳೆ ರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ 50 ಅಡಿ ಆಳವಾದ ಪಾಳು ಬಿದ್ದ ಬಾವಿಗೆ ರಾತ್ರಿ ಮಹಿಳೆ ಬಿದ್ದಿದ್ದು. ಮರುದಿನ ಮಧ್ಯಾಹ್ನದ ವೇಳೆಗೆ ಮಹಿಳೆಯ ನರಳಾಟವನ್ನು ಗಮನಿಸಿದ ಗ್ರಾಮಸ್ಥರು ತಕ್ಷಣವೇ ಅಗ್ನಿಶಾಮಕ ದಳ ಸಿಬ್ಬಂದಿಗಳಿಗೆ ವಿಷಯ ತಿಳಿಸಿದ್ದಾರೆ.


ಇದನ್ನೂ ಓದಿ: ಮದುವೆಗೆ ಸರ್ಕಾರದಿಂದ ಸಿಗಲಿದೆ 60,000 ಸಹಾಯಧನ!; ಹೇಗೆ?, ಯಾರು ಅರ್ಹರು, ಇಲ್ಲಿದೆ ನೋಡಿ


ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಮಹಿಳೆಯ ರಕ್ಷಣೆ ಮಾಡಿದ್ದು, ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ತಡೆಗೋಡೆ ಇಲ್ಲದ ಪಾಳು ಬಿದ್ದ ಬಾವಿಯನ್ನು ಗ್ರಾಮ ಪಂಚಾಯಿತಿ ಮುಚ್ಚಿಲ್ಲ. ನೂರಾರು ಬಾರಿ ಬಾವಿ ಮುಚ್ಚುವಂತೆ ಮನವಿ ಮಾಡಿದ್ದರೂ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ 19 ನೇ ಕಂತಿನ 2000 ಹಣ ಜಮಾ!


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.