ತುಂಗಾ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ತನಿಖಾ ವರದಿ ತಿಳಿಸಿದೆ.
ಇದನ್ನೂ ಓದಿ; ವಿದ್ಯಾರ್ಥಿಗಳೇ ಗಮನಿಸಿ; ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ತುಂಗೆಯ ನೀರಿನಲ್ಲಿ ಅಲ್ಯೂಮಿನಿಯಂ ಅಂಶ ಪತ್ತೆ:
ತುಂಗಾ ನೀರಿನಲ್ಲಿ ಜೀವಕ್ಕೆ ಹಾನಿಕಾರಕವಾದ ಅಲ್ಯೂಮಿನಿಯಂ ಅಂಶ ಹೇರಳವಾಗಿರುವುದು ಮಾಲಿನ್ಯ ನಿಯಂತ್ರಣ ಮಂಡಳಿಯ ತನಿಖಾ ವರದಿಯಲ್ಲಿ ದೃಢಪಟ್ಟಿದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತುಂಗೆಯ ನೀರನ್ನು ಮಾನದಂಡದನ್ವಯ ಪರೀಕ್ಷೆಗೆ ಒಳಪಡಿಸಿ, ನೀರು ಕುಡಿಯಲು ಯೋಗ್ಯವಿಲ್ಲದಿರುವ ಅನೇಕ ಆತಂಕಕಾರಿ ಅಂಶಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ ಪಿಸಿಬಿ) ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ; ಬೀಚ್ ಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಇಬ್ಬರು ಸಮುದ್ರ ಪಾಲು
ತುಂಗಾ ನದಿಯ ಎಲ್ಲಾ ಭಾಗದಲ್ಲೂ ಸ್ಯಾಪಲ್ ಸಂಗ್ರಹ:
ತುಂಗಾ ನದಿಯಲ್ಲಿ ಅಲ್ಯೂಮಿನಿಯಂ ಅಂಶ ಇರುವುದು ಗಮನಕ್ಕೆ ಬಂದಾಗ, ಎಲ್ಲ ವಿಭಾಗಗಳೊಂದಿಗೆ ಚರ್ಚೆ ಮಾಡಿ ಹಲವು ಕಡೆ ನೀರಿನ ಸ್ಯಾಪಲ್ ಸಂಗ್ರಹಿಸಿ ಕೊನೆಗೆ ಎಲ್ಲ ಕಡೆಯೂ ಅಲ್ಯೂಮಿನಿಯಂ ಅಂಶ ಇರುವುದು ಖಾತರಿಯಾಗಿದೆ. ಈಗ ನೀರಿನ ಮೂಲದಲ್ಲಿ ಶೃಂಗೇರಿಯವರೆಗೆ ಮತ್ತು ಭದ್ರಾ ನದಿಯ ಮೂಲದಲ್ಲೂ ಕೂಡ ನೀರಿನ ಪರೀಕ್ಷಿಸಿ ಈ ವರದಿ ನೀಡಿದೆ.
ತುಂಗಾ ನದಿಯಲ್ಲಿ ಅಲ್ಯೂಮಿನಿಯಂ ಅಂಶ ಪತ್ತೆಯಾಗಲು ಕಾರಣವೇನು?;
ತುಂಗಾ ನದಿಯಲ್ಲಿ ಅಲ್ಯೂಮಿನಿಯಂ ಸೇರುವುದಕ್ಕೆ ಹಲವು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಅದರಲ್ಲಿ ಅತಿಯಾದ ರಾಸಾಯನಿಕಗಳ ಬಳಕೆ, ಸ್ಥಳೀಯ ಸಂಸ್ಥೆಗಳ ಅವೈಜ್ಞಾನಿಕ ಕ್ರಮಗಳು, ನೈಸರ್ಗಿಕ ಅದಿರು, ಮಾನವ ಹಸ್ತಕ್ಷೇಪದಿಂದ ತುಂಗಾ ನದಿಯಲ್ಲಿ ಅಲ್ಯೂಮಿನಿಯಂ ಅಂಶ ಪತ್ತೆಯಾಗಲು ಸಂಭಾವ್ಯ ಕಾರಣ ಎನ್ನಲಾಗುತ್ತಿದೆ.
ಹಾಗಾದರೆ ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಅಲ್ಯೂಮಿನಿಯಂ ಅಂಶ ಪತ್ತೆ:
ಶೃಂಗೇರಿಯ ನೆಮ್ಮಾರು- 0.114, ಶೃಂಗೇರಿ ಪಟ್ಟಣ- 0.243, ಮೆಣಸೆ ಸೇತುವೆ- 0.633, ತೀರ್ಥಹಳ್ಳಿ ಜಲಶುದ್ದೀಕರಣ ಘಟಕ- 0.203, ಬಾಳಗಾರು ಮಠದ ಹತ್ತಿರ- 0.394, ಗಾಜನೂರು ಜಲಾಶಯ ಹಿನ್ನೀರು- 0.365, ಗಾಜನೂರು ಅಗ್ರಹಾರ ಬಳಿ- 0.070, ಶಿವಮೊಗ್ಗದ ಹರಕೆರೆ ಲಿಫ್ಟ್ ಸ್ಟೇಷನ್- 0.113, ತುಂಗಾ ಸೇತುವೆ ಎಡದಂಡೆ- 0.160, ನಲ್ಲಿಯಿಂದ ಸಂಗ್ರಹಿಸಿದ ನೀರು- 0.268, ಕೆ.ಆರ್ ಜಲಶುದ್ದೀಕರಣ ಬ್ಯಾಕ್ ವಾಶ್- 12.126, ಸಂಸ್ಕರಿತ ತ್ಯಾಜ್ಯ ನೀರು- 13.397 ಪ್ರಮಾಣದಲ್ಲಿ ಪತ್ತೆಯಾಗಿದೆ.
ಇನ್ನು ಪ್ರತಿ ಲೀಟರ್ ನೀರಿನಲ್ಲಿ 0.03 ರಿಂದ 0.063 ಎಂ ಎಲ್ ಅಲ್ಯೂಮಿನಿಯಂ ಅಂಶ ಇರಬೇಕು. ಆದರೆ, ತುಂಗಾ ನದಿಯ ನೀರಿನಲ್ಲಿ 0.021 ರಿಂದ 13.4 ಎಂ ಎಲ್ ವರೆಗೆ ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಕುದುರೆಮುಖದ ಗಂಗಾಮೂಲದಲ್ಲಿ 0.039ನಷ್ಟು ಅಲ್ಯೂಮಿನಿಯಂ ಇರುವುದನ್ನು ವರದಿ ದೃಢಪಡಿಸಿದೆ.
ಕೊಪ್ಪ: ವಸೂಲಿ ದಂಧೆ, ರೌಡಿ ಶೀಟರ್ ಗಳ ಜೊತೆಗೆ ಗಲಾಟೆ : ಇಬ್ಬರು ಪೊಲೀಸರ ಸಸ್ಪೆಂಡ್
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಎರಡು ಪ್ರತ್ಯೇಕ ಪ್ರಕರಣದಲ್ಲಿ ಕೊಪ್ಪ ಪೊಲೀಸ್ ಠಾಣೆಯ ಇಬ್ಬರು ಕಾನ್ ಸ್ಟೆಬಲ್ ಗಳು ಅಮಾನತುಗೊಂಡಿದ್ದಾರೆ. ಕಾನ್ ಸ್ಟೆಬಲ್ ಸಿದ್ದೇಶ್, ಹೆಡ್ ಕಾನ್ ಸ್ಟೆಬಲ್ ಉಮಾಶಂಕರ್ ಅಮಾನತುಗೊಂಡಿರುವವರು.
ಏನಿದು ಘಟನೆ
6 ತಿಂಗಳ ಹಿಂದೆ ಲಿಂಗದಹಳ್ಳಿ ಠಾಣೆಯಿಂದ ಅಮಾನತುಗೊಂಡಿದ್ದ ಸಿದ್ದೇಶ್, ತರೀಕೆರೆ ಠಾಣೆಯಿಂದ ಅಮಾನತುಗೊಂಡಿದ್ದ ಉಮಾಶಂಕರ್ ಕೊಪ್ಪ ಠಾಣೆಗೆ ವರ್ಗಾವಣೆಗೊಂಡಿದ್ದರು. ವಸೂಲಿ ದಂಧೆಯಲ್ಲಿ ತೊಡಗಿದ್ದ ಸಿದ್ದೇಶ್ ಮತ್ತು ದುರ್ವರ್ತನೆ ತೋರಿದ ಉಮಾಶಂಕರ್ ಅವರು ಶುಕ್ರವಾರ ರಾತ್ರಿ ಅಮಾನತುಗೊಂಡಿದ್ದಾರೆ.
ಸಿದ್ದೇಶ್ ಹಳೇ ಚಾಳಿಯನ್ನು ಮುಂದುವರಿಸಿ ಜನರಿಂದ ವಸೂಲಿ ದಂಧೆ ನಡೆಸುತ್ತಿದ್ದರು. ಉಮಾಶಂಕರ್ ಮದ್ಯಸೇವಿಸಿ ರೌಡಿಶೀಟರ್ ಗಳ ಜೊತೆ ಸೇರಿಕೊಂಡು ಗುಂಪು ಗಲಾಟೆಯಲ್ಲಿ ತೊಡಗಿದ್ದರು. ಕೊಪ್ಪ ಪಿಎಸ್ಐ ಕೌಶಿಕ್ ಅವರ ವರದಿ ಆಧರಿಸಿ DYSP ಅನಿಲ್ ಅಮಾನತು ಆದೇಶ ಹೊರಡಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಸಾಕಷ್ಟು ಕ್ರಮ ಕೈಗೊಂಡಿದ್ದು, ಕರ್ತವ್ಯಲೋಪ ಮಾಡಿದ ತನ್ನ ಇಲಾಖೆಯ ಸಿಬ್ಬಂದಿಯನ್ನೇ ಅಮಾನತುಗೊಳಿಸಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.












