ಸೊರಬ: (ನ್ಯೂಸ್ ಮಲ್ನಾಡ್ ವರದಿ) ಕೆಡಿಪಿ ಸಭೆಗೆ ಗೈರು ಹಾಗೂ ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಸೊರಬ ಉಪ ವಿಭಾಗದ ಉಳವಿ ಶಾಖೆಯ ಸಹಾಯಕ ಎಂಜಿನಿಯರ್ ಇಬ್ರಾಹಿಂ ಎನ್. ಅವರನ್ನು ಅಮಾನತುಗೊಳಿಸಿ ಮೆಸ್ಕಾಂ ಶಿವಮೊಗ್ಗ ವೃತ್ತದ ಅಧೀಕ್ಷಕ ಎಂಜಿನಿಯರ್ ಜಯದೇವಪ್ಪ ಆದೇಶ ಹೊರಡಿಸಿದ್ದಾರೆ.
ಮೇಲಧಿಕಾರಿಗಳ ಸೂಚನೆ ನಿರ್ಲಕ್ಷಿಸಿ ಪ್ರಗತಿ ಪರಿಶೀಲನಾ ಸಭೆಗೆ (ಕೆಡಿಪಿ) ಗೈರಾಗಿ ಕರ್ತವ್ಯ ಲೋಪ ಎಸಗಿದ್ದಾರೆ. ಕಂಪನಿಯ ಕಂದಾಯ ವಸೂಲಾತಿಯಲ್ಲಿ ನಿರ್ಲಕ್ಷ್ಯ ಮಾಡಿದ್ದು ಸೇರಿದಂತೆ ವಿವಿಧ ಆರೋಪಗಳು ಇವರ ಮೇಲಿವೆ. ಹೀಗಾಗಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸಚಿವರ ಸೂಚನೆ:
ಇಬ್ರಾಹಿಂ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೊರಬದಲ್ಲಿ ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಸೂಚಿಸಿದ್ದರು.

















