
ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಜಾನಪದ ಸಾಹಿತ್ಯ ಬೇರು ಇದ್ದಂತೆ ಹಳ್ಳಿಯ ಜನರ ಜೀವನ ಜಗತ್ತಿಗೆ ಮಾದರಿ ಎಂದು ದೀಪಕ್ ದೊಡ್ಡಯ್ಯ ಹೇಳಿದರು.
ಇದನ್ನೂ ಓದಿ: ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ.. ಏನಿದೆ ಇದರಲ್ಲಿ..?; ಅಲ್ಪಸಂಖ್ಯಾತರ ಕಲ್ಯಾಣ: ಹೆಚ್ಚಿನ ಘೋಷಣೆಗಳು – ಇಲ್ಲಿ ಹೈಲೈಟ್ಸ್

ಬಣಕಲ್ ಕನ್ನಡ ಸಾಹಿತ್ಯ ಪರಿಷತ್ ಬಣಕಲ್ ಹೋಬಳಿ ಘಟಕದ ವತಿಯಿಂದ ನಡೆದ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಮತ್ತು ಸುಗ್ಗಿ ಕಾಲದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿ ಅವರು, ಬಸವಣ್ಣ, ಸಂತರು, ಶರಣರು ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತ ಮಾಡಿದವರು. ವಚನ ಸಾಹಿತ್ಯ, ಚುಟುಕು ಸಾಹಿತ್ಯ, ನವ್ಯ ಸಾಹಿತ್ಯದ ಬಗ್ಗೆ ತಿಳಿಸಿದರು.

ಜಿಲ್ಲಾ ಸಂಚಾಲಕರಾದ ಮಗ್ಗಲಮಕ್ಕಿ ಗಣೇಶ್ ಮಾತಾನಾಡಿ, ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ರಾಜ್ಯದಲ್ಲಿ ಸುದ್ಧಿ ಮಾಡಿದ್ದು ಬಣಕಲ್ ಹೋಬಳಿ, ಏಕೆಂದರೆ ದಿವಂಗತ ಮೋಹನ್ ಕುಮಾರ್ ಶೆಟ್ರು ಅಂದಿನ ಅಧ್ಯಕ್ಷತೆಯಲ್ಲಿ ಇವರು ಬಣಕಲ್ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ದೊಡ್ಡ ಶಕ್ತಿ ಆಗಿದ್ದರು. ಅವರು ಮಾಡಿದ ಕೆಲಸದ ಬಗ್ಗೆ ನೆನಪಿಸಿದರು.
ಇದನ್ನೂ ಓದಿ: ಕರ್ನಾಟಕ ಬಜೆಟ್ 2025-26: SC/ST ಸಮುದಾಯಗಳಿಗೆ ಸಿದ್ದರಾಮಯ್ಯ ಗಿಫ್ಟ್
ಬಣಕಲ್ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಲೋಕೇಶ್ ಬೆಟ್ಟಗೆರೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಸಾಂಸ್ಕೃತಿಕ ವಲಯದ ಪ್ರಾತಿನಿಧಿಕ ಸಂಸ್ಥೆ ಆದ್ದರಿಂದ ಸುಗ್ಗಿ ಕಾಲದಲ್ಲಿ ಜಾನಪದ ಸಂಭ್ರಮ ಮನೆಯಂಗಳ ಕಾರ್ಯಕ್ರಮದಲ್ಲಿ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಡಿ. ಕೆ. ಲಕ್ಷ್ಮಣ್ ಗೌಡ, ಬಕ್ಕಿ ಮಂಜುನಾಥ್, ಮಂಜುನಾಥ್ ರಾಥೋಡ್ ಬಿಜಾಪುರ, ನಾಟ್ಯ ರಂಜಿತ್, ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಶಿವಪ್ರಸಾದ್, ಕೃಷ್ಣೇಗೌಡ, ಹೆಚ್. ಪಿ ರವಿ ಗೌಡ, ಹೊರಟಿ ರಘು, ರಾಮಚಂದ್ರ, ಶಶಿಕಾಂತ್, ಶ್ರಿಜೀತ್, ದೀಲಿಪ್ ಕನ್ನಗೆರೆ, ಹೆಚ್. ಬಿ ಶಶಿಧರ್, ಸುಮ, ಲಕ್ಷ್ಮಣ್ ಹೊಸಳ್ಳಿ, ಶಾಲಿನಿ ಜೀವನ್, ಸಂಗಮ್, ಪ್ರಜ್ವಲ್, ಮಹೇಶ್ ಇನ್ನಿತರರು ಇದ್ದರು. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ಸೌರ ಪಂಪ್ ಯೋಜನೆಗೆ 1 ಲಕ್ಷ ಸಹಾಯಧನ; ಸಂಪೂರ್ಣ ಮಾಹಿತಿ ಇಲ್ಲಿದೆ













