ಜಯಪುರ: ಸೆಕ್ಯುಲರ್ ಫ್ರಾನ್ಸಿಸ್ಕನ್ ವಲಯದ ಅಧ್ಯಕ್ಷರಾಗಿ ಅಲೆಕ್ಸ್ ಜಯಶೀಲನ್ ಆಯ್ಕೆ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಸೆಕ್ಯುಲರ್ ಫ್ರಾನ್ಸಿಸ್ಕನ್ ಧರ್ಮಸಭೆಯ ಮುಂದಿನ ಅವಧಿಗೆ ಅಧ್ಯಕ್ಷರಾಗಿ ಅಲೆಕ್ಸ್ ಜಯಶೀಲನ್ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಬಾಳೆಹೊನ್ನೂರು ಪ್ರಾಂತ್ಯದ ಸೆಕ್ಯುಲರ್ ಫ್ರಾನ್ಸಿಸ್ಕನ್ ಧರ್ಮಸಭೆಯ ಹೊಸ ಪದಾಧಿಕಾರಿಗಳ ಆಯ್ಕೆಯ ಚುನಾವಣೆ ಮಾಗುಂಡಿಯ ಲೂರ್ದುಮಾತೆಯ ದೇವಾಲಯದಲ್ಲಿ ನಡೆದಿದ್ದು, ಮುಂದಿನ ಅವಧಿಗೆ ಅಧ್ಯಕ್ಷರಾಗಿ ಅಲೆಕ್ಸ್ ಜಯಶೀಲನ್ ಆಯ್ಕೆಯಾಗಿದ್ದಾರೆ.

ಸೆಕ್ಯುಲರ್ ಫ್ರಾನ್ಸಿಸ್ಕನ್ ಧರ್ಮಸಭೆಯ ಭಾರತ ರಾಷ್ಟ್ರೀಯ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಮನೋಹರ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಬ್ರದರ್ ಒಲಿವರ್ ಫರ್ನಾಂಡೋ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿದ್ದು, ಈ ಸಂದರ್ಭದಲ್ಲಿ ಬಾಳೆಹೊನ್ನೂರು ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಥಾಮಸ್ ಅವರು ಅಮೂಲ್ಯ ಸಲಹೆ–ಸೂಚನೆ ನೀಡಿ ಸಹಕಾರ ನೀಡಿದರು. ಜೊತೆಗೆ ರಾಷ್ಟ್ರೀಯ ಕಾರ್ಯದರ್ಶಿಯಾದ ಸಿಸ್ಟರ್ ಐರಿನ್ ಅವರು ಕೂಡ ಈ ಚುನಾವಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಡ್ರೋನ್ ಪೈಲಟ್ ಆಗಲು ಇಲ್ಲಿದೆ ಸುವರ್ಣಾವಕಾಶ: ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರದ ವತಿಯಿಂದ ಉಚಿತ ಡ್ರೋನ್ ಪೈಲಟ್ ತರಬೇತಿ

ಮುಂದಿನ ಮೂರು ವರ್ಷಕ್ಕೆ ಅಧ್ಯಕ್ಷರಾಗಿ ಅಲೆಕ್ಸ್ ಜಯಶೀಲನ್ (ಕೊಪ್ಪ ಘಟಕ), ಉಪಾಧ್ಯಕ್ಷರಾಗಿ ಡೆನ್ನಿಸ್ ಡಿಸೋಜಾ (ಕುವೆ ಘಟಕ), ಕಾರ್ಯದರ್ಶಿಗಳಾಗಿ ಲಿಯೋ ಮಥಾಯಸ್ (ಮಾಗುಂಡಿ ಘಟಕ), ಕೋಶಾಧ್ಯಕ್ಷರಾಗಿ ಸೆಲಿನ್ ಜೋಸೆಫ್ (ಕೊಪ್ಪ ಘಟಕ), ತರಬೇತಿ ಶಿಕ್ಷಕಿಯಾಗಿ ತೆಲ್ಮಾ ಜಯಶೀಲನ್ (ಕೊಪ್ಪ ಘಟಕ), ಪ್ರಾಂತ್ಯದ ಪ್ರತಿನಿಧಿಗಳಾಗಿ ಲಿಲ್ಲಿ ಮೋರಿಸ್ (ಬಣಕಲ್ ಘಟಕ), ವಿನ್ನಿ ರೊಡ್ರಿಗಸ್ (ಮಾಗುಂಡಿ ಘಟಕ) ಆಯ್ಕೆಯಾಗಿದ್ದಾರೆ.

ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ಹಾಗೂ ಸೌಹಾರ್ದ ವಾತಾವರಣದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಭಾಗವಹಿಸಿದ ಚರ್ಚಿನ ಧರ್ಮ ಗುರುಗಳು ಕ್ರೈಸ್ತ ಬಾಂಧವರು ಪದಾಧಿಕಾರಿಗಳಿಗೆ ಶುಭ ಹಾರೈಸಿದರು. (ವರದಿ- ಎಂ.ಪಿ.ಪ್ರದೀಪ್ ಹೆಬ್ಬಾರ್, ಜಯಪುರ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.