ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲಾ ಪಂಚಾಯಿತಿ ಮಹಿಳಾ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಶಾಲಾ ಶಿಕ್ಷಕರು, ಸಿಬ್ಬಂದಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್; ಸರ್ಕಾರದ ಈ ಆದೇಶ ನೋಡಿ

ಚಿಕ್ಕಮಗಳೂರು ಜಿಲ್ಲಾ ಪಂಚಾಯತಿಯಲ್ಲಿ ಒಂಬುಡ್ಸ್ಮನ್ ಹುದ್ದೆಯಲ್ಲಿರುವ ನಟರಾಜ್, ಮಹಿಳಾ ಸಿಬ್ಬಂದಿಯೊರ್ವರಿಗೆ ವಾಟ್ಸಪ್ ನಲ್ಲಿ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿರುವ ಆರೋಪ ಮೇರೆಗೆ, ಮಹಿಳಾ ಸಿಬ್ಬಂದಿ ಕಡೆಯವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಏಕಾಏಕಿ ಕಚೇರಿಗೆ ನುಗ್ಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಮೆಸೇಜ್ ಮಾಡಿಲ್ಲ. ಆದ್ರೆ ನನ್ನ ಮೊಬೈಲ್ ನಿಂದ ಮೆಸೇಜ್ ಸೆಂಡ್ ಆಗಿದೆ ಎಂದು ನಟರಾಜ್ ಹೇಳಿದ್ದಾರೆ.
ಇದನ್ನೂ ಓದಿ: 10th ಹಾಗೂ PUC ವಿದ್ಯಾರ್ಥಿಗಳ ಗಮನಕ್ಕೆ; 40,000 ಸ್ಕಾಲರ್ ಶಿಪ್ ಗೆ ಹೀಗೆ ಅರ್ಜಿ ಸಲ್ಲಿಸಿ
ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಹಿನ್ನೆಲೆ ಜಿಲ್ಲಾ ಪಂಚಾಯತಿ CEO ಕೀರ್ತನ ಅವರಿಂದ ತನಿಖೆ ನಡೆಸಿ ನಟರಾಜ್ ಅವರನ್ನ ಸೇವೆಯಿಂದ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನರೇಗಾ ಅಕ್ರಮಗಳ ತನಿಖೆಗಾಗಿಯೇ ಇರುವ ಒಂಬುಡ್ಸ್ಮನ್ ಹುದ್ದೆ ಇದಾಗಿದೆ.
ಇದನ್ನೂ ಓದಿ: ಫೋನ್ ಪೇನಲ್ಲಿ ಹಣ ಕಳುಹಿಸುವಾಗ ಅರ್ಧಕ್ಕೆ ನಿಂತರೆ ಏನು ಮಾಡಬೇಕು?












