ಶೃಂಗೇರಿ: ಪ್ಲಾಸ್ಟಿಕ್ ಪರಿಕರಗಳನ್ನು ಬಳಸದೆ ಮಾದರಿಯಾದ ಗೃಹಪ್ರವೇಶ ಕಾರ್ಯಕ್ರಮ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಪ್ಲಾಸ್ಟಿಕ್ ಪರಿಕರಗಳನ್ನು ಬಳಸದೆ ಬಂದ ಅತಿಥಿಗಳಿಗೂ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುತ್ತ ಮಾದರಿಯಾಗಿದ್ದಾರೆ.


ನ್ನೂ ಓದಿ: ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಈ ರೂಲ್ಸ್‌ ಕಡ್ಡಾಯ; ರಾಜ್ಯ ಸರ್ಕಾರದಿಂದ ಆದೇಶ


ಶೃಂಗೇರಿ ಸಮೀಪದ ಕುಂಬಾರ ಕೊಪ್ಪ ಡಾ.ವೆಂಕಪ್ಪಚಾರ್ಯರ ನೂತನ ಮನೆಯ ಗೃಹಪ್ರವೇಶ, ತತ್ಸಂಬಂಧ ವಿಶ್ವಜ್ಞ ಹೋಮ, ಸಾಹಿತ್ಯ ಪರಿಷತ್ ದತ್ತಿ ಉಪನ್ಯಾಸ ಹೀಗೆ ಅನೇಕ ಕಾರ್ಯಕ್ರಮಗಳು ನಡೆದಿದ್ದು, ರಾಜ್ಯದ ಬೇರೆ ಬೇರೆ ನಾಲ್ಕು ಮಠಗಳಿಂದ ಸ್ವಾಮಿಜಿಗಳು ಭಾಗವಹಿಸಿದ್ದರು.

ಈ ಕಾರ್ಯಕ್ರಮಗಳಲ್ಲಿ ಪೇಪರ್/ಪ್ಲಾಸ್ಟಿಕ್ ಕಪ್-ತಟ್ಟೆ, ಪ್ಲಾಸ್ಟಿಕ್ ಪ್ಲೆಕ್ಸ್, ಸನ್ಮಾನಕ್ಕೆ ಪ್ಲಾಸ್ಟಿಕ್ ಹಾರ, ವೇದಿಕೆ ಮೇಲೆ ನೀರಿನ ಬಾಟಲಿ ಬಳಸಲಿಲ್ಲ. ಕಾರ್ಯಕ್ರಮಕ್ಕೆ ಶೃಂಗೇರಿಯ ವಿಪ್ರ ನೌಕರ ವೇದಿಕೆ ಸಂಘಟನೆಯ ನೇತ್ರತ್ವದ ಸ್ಟೀಲ್ ಪರಿಕರಗಳ ಬ್ಯಾಂಕ್ ನಿಂದ ಸ್ಟೀಲ್ ತಟ್ಟೆಗಳು, ನೀರಿನ ಲೋಟ, ಕಾಪೀ ಲೋಟ ಮತ್ತು ಚಮಚಗಳು ಬಳಕೆ ಮಾಡಿದ್ದರು.


ನ್ನೂ ಓದಿ: SSLC-PUC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ;  ಕೇಂದ್ರ ಸರ್ಕಾರದಿಂದ ಪಡೆಯಬಹುದು ಈ ಯೋಜನೆ ಲಾಭ


ಪ್ಲಾಸ್ಟಿಕ್ ಬಳಸದೆ ಅಭೂತಪೂರ್ವ ಸಾಮಾಜಿಕ ಕಾಳಜಿ ತೋರಿದ ವೆಂಕಪ್ಪಚಾರ್ಯ ದಂಪತಿಗಳನ್ನು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಪ್ಲಾಸ್ಟಿಕ್ ಪರಿಕರಗಳಿಲ್ಲದೆ ಕಾರ್ಯಕ್ರಮವೊಂದು ಸಮಾಜಕ್ಕೆ ಮಾದರಿಯಾಗಿ ನಡೆದಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.