ಎನ್ ಆರ್ ಪುರ: 12 ಅಡಿ ಎತ್ತರದಿಂದ ಬಿದ್ದು ಯುವಕ ಸಾವು

ಎನ್. ಆರ್. ಪುರ (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಬಾಳೆ ಗ್ರಾ.ಪಂ. ಮುಳುವಳ್ಳಿಯಲ್ಲಿ ಹೊಸ ಕಟ್ಟಡವೊಂದರ ಕೆಲ️ಸ ಮಾಡುವಾಗ ಹನ್ನೆರಡು ಅಡಿ ಎತ್ತರದ ಟೆರೇಸ್‌ನಿಂದ ಬಿ️ದ್ದು ಯುವಕ ಸಾವನ್ನಪ್ಪಿದ ಘಟನೆ ತಡವಾಗಿ ವರದಿಯಾಗಿದೆ.


ಇದನ್ನೂ ಓದಿ; ರಾಜ್ಯದ 1 ರಿಂದ 10ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!


ಬಾಳೆ ಗ್ರಾ. ಪಂ. ಬಿ️ಲ್‌ಕಲೆಕ್ಟರ್ ನಾಗರಾಜ ಎಂಬುವವರ ಎರಡನೇ ಮಗ ಪ್ರಜ್ವಲ್ (22) ಮೃತಪಟ್ಟ ದುರ್ದೈವಿ. ಪ್ರಜ್ವಲ್ ಗಾರೆ ಕೆಲ️ಸ ವೃತ್ತಿ ಮಾಡುತ್ತಿದ್ದು, ಎಂದಿನಂತೆ ಡಿ. 14ರಂದು ಬೆಳಿಗ್ಗೆ ತನ್ನ ಚಿಕ್ಕಪ್ಪನೊಂದಿಗೆ ಕೆಲ️ಸಕ್ಕೆ ಹೋಗಿದ್ದಾನೆ. ಮುಳುವಳ್ಳಿ ಗ್ರಾಮದ ಹೊಸ ಮನೆ ಕಟ್ಟಡವೊಂದರ ಕಾಮಗಾರಿ ಮಾಡುವ ಸಂದರ್ಭದಲ್ಲಿ ಸಂಜೆ 4:45ರ ಸುಮಾರಿಗೆ ಟೆರೇಸ್ ಮೇಲಿದ್ದ ಇಟ್ಟಿಗೆಯನ್ನು ತರಲು ಹೋಗಿ, ಇಟ್ಟಿಗೆಯನ್ನು ಟೆರೇಸ್ ಮೇಲಿನಿಂದ ಕೆಳಗೆ ಹಾಕುವಾಗ ಆಯಾ ತಪ್ಪಿ ಆಕಸ್ಮಿಕವಾಗಿ ಬಿ️ದ್ದಿದ್ದಾನೆ.


ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?


ಕಟ್ಟಡದ ಮೆಟ್ಟಿಲಿನ ಟೈಲ್ಸ್ ಮೇಲೆ ಆತ ಬಿ️ದ್ದಿದ್ದರಿಂದ ತಲೆ ಟೈಲ್ಸ್ ತುದಿ ಹೊಡೆದದ್ದರಿಂದ ತಲೆಗೆ ತೀವ್ರ ತರಹದ ಪೆಟ್ಟಾಗಿ, ರಕ್ತ ಸ್ರಾವವಾಗಿದೆ. ಕೂಡಲೇ ಆತನನ್ನು ಅವರ ಚಿಕ್ಕಪ್ಪ ಹಾಗೂ ಇತರರು ಎನ್. ಆರ್ ಪುರ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಪ್ರಜ್ವಲ್‌ನನ್ನು ಪರೀಕ್ಷಿಸಲು ವೈದ್ಯರು ಬಂದಾಗ ಪ್ರಜ್ವಲ್ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ.


ಇದನ್ನೂ ಓದಿ; ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ


ಈ ಬಗ್ಗೆ ಪ್ರಜ್ವಲ್ ಸಹೋದರ ಉಜ್ವಲ್ ಪೊಲೀಸ್ ಠಾಣೆಗೆ ದೂರು ನೀಡಿ, ತನ್ನ ಸಹೋದರ ಆಕಸ್ಮಿಕ ಸಾವನ್ನಪ್ಪಿದ್ದಾನೆಂದು ತಿಳಿಸಿದ್ದಾರೆ. ನಂತರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಹಸ್ತಾಂತರಿಸಲಾಯಿತು.


ಇದನ್ನೂ ಓದಿ; ಇ-ಖಾತೆ ಪಡೆಯುವವರ ಗಮನಕ್ಕೆ; ನಿಮಗಿಲ್ಲಿದೆ ಮುಖ್ಯ ಮಾಹಿತಿ, ಮಿಸ್‌ ಮಾಡ್ದೆ ಈ ಸುದ್ದಿ ಓದಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.