ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ನಟನಾಗಿ ಅಭಿನಯಿಸಿದ ಪ್ರಮೋದ್ ಮಲ್ನಾಡ್

ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಚಿತ್ರನಟ, ನಿರ್ದೇಶಕ ಉಪೇಂದ್ರ ಅವರ ಯುಐ ಚಲನಚಿತ್ರದಲ್ಲಿ ಬಣಕಲ್ ನಿವಾಸಿ ಪ್ರಮೋದ್ ಮಲ್ನಾಡ್ ಅವರು ನಟನಾಗಿ ಅಭಿನಯಿಸಿದ್ದಾರೆ.


ಇದನ್ನೂ ಓದಿ; ರಾಜ್ಯದ 1 ರಿಂದ 10ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!


ಪ್ರಮೋದ್ ಮಲ್ನಾಡ್ ಬಣಕಲ್ ನಲ್ಲಿ ಹಲವು ವರ್ಷಗಳಿಂದ ಜಿಮ್ ನಡೆಸಿಕೊಂಡು ಬರುತ್ತಿದ್ದರು. ಸುಮಾರು ಏಳು ವರ್ಷಗಳಿಂದ ಚಿತ್ರರಂಗವನ್ನು ಸೇರಿ ನಟಿಸಬೇಕೆಂಬ ಮಹದಾಸೆ ಹೊತ್ತವರು. ಸವರ್ಣ ದೀರ್ಘ ಸಂಧಿ, ತ್ರಿಬಲ್ ರೈಡ್, ರಾಜು ಕನ್ನಡ ಮೀಡಿಯಂ, ಮುಂದೆ ಬರಲಿರುವ ನಾನು ಕರುಣಾಕರ ಚಿತ್ರದಲ್ಲೂ ಖಳನಟನಾಗಿ ನಟಿಸಿದ್ದಾರೆ.


ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?


ಸುಮಾರು 14 ದಾರಾವಾಹಿಗಳಲ್ಲೂ ಖಳನಟನ ಪಾತ್ರದಲ್ಲಿ ನಟಿಸುತ್ತಾ ಬಂದಿದ್ದಾರೆ. ಸೀತಾರಾಮ, ಮರಳಿ ಮನಸಾಗಿದೆ, ಪುಟ್ಮಲ್ಲಿ, ನೂರು ಜನ್ಮಕೂ ಧಾರಾವಾಹಿಯಲ್ಲಿ ಖಳ ನಟನಾಗಿ ಕಿರು ತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೈ ಹೀರೋ ಕನ್ನಡ ಚಿತ್ರದಲ್ಲಿ ಮುಖ್ಯ ಖಳನಟನ ಪಾತ್ರದಲ್ಲಿ ನಟಿಸಿದ್ದಾರೆ.


ಇದನ್ನೂ ಓದಿ; ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ


ಮೂಲತಃ ಬಾಳೂರು ಹೋಬಳಿಯ ಕೆಳಗೊರು ನಿವಾಸಿಯಾದ ಇವರು ಚಿತ್ರರಂಗದವರ ನಂಟು ಹೊಂದಿ ಚಿತ್ರಗಳಲ್ಲಿ ನಟಿಸಿ ಉದಯೋನ್ಮುಖ ನಟನಾಗಬೇಕೆಂಬ ಹೆಬ್ಬಯಕೆ ಇವರದು. ಇವರ ನಟನೆಯ ಚಿತ್ರಗಳು ಯಶಸ್ವಿಯಾಗಿ ತೆರೆ ಕಂಡು ಉತ್ತಮ ಹೆಸರು ತಂದು ಕೊಡಲಿ ಎಂದು ಕಲಾಭಿಮಾನಿಗಳು ಹಾರೈಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)


ಇದನ್ನೂ ಓದಿ; ಇ-ಖಾತೆ ಪಡೆಯುವವರ ಗಮನಕ್ಕೆ; ನಿಮಗಿಲ್ಲಿದೆ ಮುಖ್ಯ ಮಾಹಿತಿ, ಮಿಸ್‌ ಮಾಡ್ದೆ ಈ ಸುದ್ದಿ ಓದಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.