ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಪ್ರವಾಸಿಗರ ವಾಹನದ ಮೇಲೆ ಕಾಡಾನೆ ದಾಳಿಗೆ ಮುಂದಾದ ಘಟನೆ ತರೀಕೆರೆ ತಾಲೂಕು ಲಕ್ಕವಳ್ಳಿ ಸಮೀಪದ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಭದ್ರಾ ಬಲದಂಡೆ ನಾಲೆ ಬಳಿ ನಡೆದಿದೆ.
ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ

ಜಂಗಲ್ ಲಾಡ್ಜ್ಗೆ ಸೇರಿದ ಜೀಪ್ನಲ್ಲಿ ಪ್ರವಾಸಿಗರು ಸಫಾರಿ ತೆರಳುತ್ತಿದ್ದರು. ಈ ವೇಳೆ ಭದ್ರಾ ಬಲದಂಡೆ ನಾಲೆ ಬಳಿಯ ಕದಳಿ ರಂಗನಾಥ ಸ್ವಾಮಿ ದೇವಸ್ಥಾನದ ಬಳಿ ಏಕಾಏಕಿ ಕಾಡಾನೆ ಪ್ರವಾಸಿಗರಿದ್ದ ಜೀಪ್ನತ್ತ ಅಂದಾಜು 400 ಮೀಟರ್ಗೂ ಹೆಚ್ಚು ಅಟ್ಟಿಸಿಕೊಂಡು ಬಂದಿದೆ.
ಕಾಡಾನೆ ಜೀಪನ್ನು ಅಟ್ಟಿಸಿಕೊಂಡು ಬರುತ್ತಿರುವುದನ್ನು ಗಮನಿಸಿದ ಚಾಲಕ ಜೀಪನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ. ಚಾಲಕನ ಸಮಯಪ್ರಜ್ಞೆಯಿಂದ ಕಾಡಾನೆ ದಾಳಿಯಿಂದ ಪ್ರವಾಸಿಗರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಆನೆ ಪ್ರವಾಸಿಗರ ಜೀಪನ್ನು ಬೆನ್ನತ್ತಿಕೊಂಡು ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿಂದೆಯೂ ಮೂನಾಲ್ಕು ಬಾರಿ ಪ್ರವಾಸಿಗರಿದ್ದ ಜೀಪನ್ನು ಕಾಡಾನೆ ಅಟ್ಟಾಡಿಸಿಕೊಂಡು ಬಂದಿರುವ ಘಟನೆಗಳು ನಡೆದಿದೆ.
ಇದನ್ನೂ ಓದಿ: ಆಲದ ಮರದ ನೆರಳಿನಲ್ಲಿ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ – ಇಂದು 400 ಲಕ್ಷ ಕೋಟಿಯ ಮೌಲ್ಯ!












