ಚಿಕ್ಕಮಗಳೂರು: ಅರಣ್ಯ ಮತ್ತು ಸಾಗುವಳಿ ಭೂಮಿ ಸಮಸ್ಯೆ ಪರಿಹಾರಕ್ಕೆ ಮರು ಪರಿಷ್ಕರಣೆ ಪ್ರಕ್ರಿಯೆ ಆರಂಭ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅರಣ್ಯ ಮತ್ತು ಸಾಗುವಳಿ ಭೂಮಿ ಸಮಸ್ಯೆ ಪರಿಹಾರಕ್ಕೆ ಸುಪ್ರೀಂ ಕೋರ್ಟ್ ಮರು ಪರಿಷ್ಕರಣೆಗೆ ಅವಕಾಶ ನೀಡಿದೆ.


ನ್ನೂ ಓದಿ: ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಈ ರೂಲ್ಸ್‌ ಕಡ್ಡಾಯ; ರಾಜ್ಯ ಸರ್ಕಾರದಿಂದ ಆದೇಶ


ಹೌದು, 2002ರಲ್ಲಿ ಮೊದಲ ಬಾರಿಗೆ ಪರಿಭಾವಿತ ಅರಣ್ಯ(ಡೀಮ್ಸ್)-1 ಘೋಷಣೆಯಾಗಿದ್ದು, ಆಗ 3.50 ಲಕ್ಷ ಎಕರೆ ಜಾಗವನ್ನು ಪರಿಭಾವಿತ ಅರಣ್ಯ ಎಂದು ಗುರುತಿಸಲಾಗಿದೆ. 2014ರಲ್ಲಿ ಡೀಮ್ಸ್ 2ನಲ್ಲಿ ಪರಿಶೀಲನೆ ನಡೆಸಿ 1.32 ಲಕ್ಷ ಎಕರೆ ಉಳಿಸಲಾಯಿತು. ಆದ್ದರಿಂದ ಮತ್ತೊಮ್ಮೆ ಪರಿಶೀಲನೆ ನಡೆಸಿ ಪರಿಭಾವಿತ ಅರಣ್ಯ ಜಾಗವನ್ನು ನಿಖರವಾಗಿ ಗುರುತಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ.

ಜಿಲ್ಲಾ ಮಟ್ಟದಲ್ಲಿ ತಜ್ಞರ ಸಮಿತಿ ರಚನೆ:
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ತಜ್ಞರ ಸಮಿತಿ ರಚನೆಯಾಗಿದೆ. ಮಾಹಿತಿ ಸಂಗ್ರಹಿಸಲು ಈಗ ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲೂ ಸಮಿತಿಯನ್ನು ಜಿಲ್ಲಾಧಿಕಾರಿ ರಚನೆ ಮಾಡಿದ್ದಾರೆ. ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಕಂದಾಯ, ಅರಣ್ಯ, ಭೂದಾಖಲೆಗಳ ಇಲಾಖೆ, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ, ನೌಕರರು ಜಂಟಿ ಸಮೀಕ್ಷೆ ನಡೆಸಲು ತಂಡಗಳನ್ನು ಕಂದಾಯ ವೃತ್ತವಾರು ರಚನೆ ಮಾಡಿ ಆದೇಶಿಸಿದ್ದಾರೆ.


ನ್ನೂ ಓದಿ: SSLC-PUC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ;  ಕೇಂದ್ರ ಸರ್ಕಾರದಿಂದ ಪಡೆಯಬಹುದು ಈ ಯೋಜನೆ ಲಾಭ


ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಚಿಕ್ಕಮಗಳೂರು ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಸಂಚಾಲಕರಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಚಿಕ್ಕಮಗಳೂರು, ಕೊಪ್ಪ ಮತ್ತು ಭದ್ರಾವತಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿಗಳು, ಭೂದಾಖಲೆಗಳ ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಸಮಿತಿ ಸದಸ್ಯರಾಗಿದ್ದಾರೆ.

ಶೃಂಗೇರಿ ತಾಲೂಕಿನಲ್ಲಿ 34,620 ಎಕರೆ ಪರಿಭಾವಿತ ಅರಣ್ಯ:
ಚಿಕ್ಕಮಗಳೂರು ತಾಲ್ಲೂಕಿನಲ್ಲಿ 33,750 ಎಕರೆ ಪರಿಭಾವಿತ ಅರಣ್ಯವಿದ್ದರೆ, ಶೃಂಗೇರಿ ತಾಲ್ಲೂಕಿನ 34,620 ಎಕರೆ ಮತ್ತು ಮೂಡಿಗೆರೆ-ಕಳಸ ತಾಲ್ಲೂಕಿನಲ್ಲಿ 28,380 ಎಕರೆ ಪ್ರದೇಶ ಪರಿಭಾವಿತ ಅರಣ್ಯವಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.