ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಹುಟ್ಟುಹಬ್ಬ ಹಾಗೂ ಶೀಘ್ರದಲ್ಲೇ ಬಿಡುಗಡೆ ಆಗ್ತಾರೆಂದು ಅಭಿಮಾನಿಯೊಬ್ಬರು ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಚಿಕ್ಕಮಗಳೂರು ನಗರದ ಹಿರೇಮಗಳೂರಿನ ನಿವಾಸಿ ಸುದೀಪ್ ಎಂಬ ಯುವಕ, ದರ್ಶನ್ ಫೋಟೋ ಹಿಡಿದು ಸುಮಾರು 100 ಕಿಲೋಮೀಟರ್ ದೂರದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಸಾಗಿದ್ದಾರೆ. ದರ್ಶನ್ ಜನ್ಮದಿನದ ಪ್ರಯುಕ್ತ ಹಾಗೂ ಬೇಗನೇ ಬಿಡುಗಡೆ ಆಗಬೇಕು ಎಂದು ಪ್ರಾರ್ಥನೆ ಸಲ್ಲಿಸುವ ಉದ್ದೇಶದಿಂದ ಈ ಪಾದಯಾತ್ರೆ ಕೈಗೊಂಡಿರುವುದಾಗಿ ಸುದೀಪ್ ತಿಳಿಸಿದ್ದಾರೆ.
ಆದರೆ, ದರ್ಶನ್ ಅಭಿಮಾನಿಗಳ ನಡೆ-ನುಡಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆ ತೀವ್ರಗೊಂಡಿದ್ದು, “ಅಭಿಮಾನ ಇರಬೇಕು, ಅಂಧಾಭಿಮಾನ ಇರಬಾರದು” ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.












