ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಐ 10 ಕಾರೊಂದು ಕಂದಕಕ್ಕೆ ಉರುಳಿದ ಘಟನೆ ತೀರ್ಥಹಳ್ಳಿ ತಾಲೂಕಿನ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾವಗಲ್ ಬಸ್ ನಿಲ್ದಾಣದ ಬಳಿ ನಡೆದಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ ನಕಲಿ ಕಲ್ಲಂಗಡಿ ಹಣ್ಣು!; ಹೀಗೆ ಪತ್ತೆ ಹಚ್ಚಿ…

ಜಾವಗಲ್ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿನ ದೂಳಿನಿಂದ ಕಾರು ಚಾಲಕನ ನಿಯಂತ್ರಕ್ಕೆ ಸಿಗದೇ ಕಂದಕಕ್ಕೆ ಉರುಳಿ ಬಿದ್ದಿದೆ. ಸದ್ಯ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಲ್ಲಿ ತರಬೇತಿಗೆ ಅರ್ಜಿ ಸಲ್ಲಿಕೆ ಆರಂಭ; ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
ಜಲಜೀವನ್ ಮಿಷನ್ ಗೆಂದು ರಸ್ತೆಯ ಪಕ್ಕದಲ್ಲಿ ಹೊಂಡ ತೆಗೆದಿದ್ದು, ಇದರಿಂದ ರಸ್ತೆಯ ತುಂಬಾ ಮಣ್ಣಾಗಿದೆ. ಕಾರು ಮಾತ್ರವಲ್ಲದೆ ಬೈಕ್ ಸವಾರರಿಗೂ ಧೂಳಿನಿಂದ ಬಚಾವ್ ಆಗುವುದು ಅಸಾಧ್ಯ. ಕನಿಷ್ಠ ಬೆಳಿಗ್ಗೆ ಮತ್ತು ಸಂಜೆ ನೀರು ಸಿಂಪಡಿಸಿ ಧೂಳು ಏಳದಂತೆ ಎಚ್ಚರಿಕೆ ವಹಿಸಬೇಕಾದ ಅಧಿಕಾರಿಗಳು ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆದರೆ, ಜನತೆ ಮಾತ್ರ ಈ ಬಿಸಿಲು ಕಾಲ ಮತ್ತು ಧೂಳಿಗೆ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ವಿಶ್ವದ ಮೊದಲ CNG ಸ್ಕೂಟರ್ ಬಿಡುಗಡೆಗೆ ಸಿದ್ದ; ಮೈಲೇಜ್ ಕೇಳಿ ಶಾಕ್ ಆದ ಜನ…












