ಬಣಕಲ್: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದಲ್ಲಿ ಮಂಗಳವಾರ ಸಂಜೆ ಭಾರಿ ಮಳೆಯಾಗಿ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ತಗ್ಗಿನ ಪ್ರದೇಶಕ್ಕೆ ಉರುಳಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ; ನಿಮಗೆ ಗೃಹಲಕ್ಷ್ಮೀ ಹಣ ಜಮೆಯಾಗಿಲ್ಲವಾ?; ನಿಮ್ಮ ಗೊಂದಲಕ್ಕೆ ತೆರೆ ಎಳೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ರಸ್ತೆಯಲ್ಲಿ ಮಳೆನೀರು ಹರಿಯುತ್ತಿದ್ದರಿಂದ ಚಾಲಕನಿಗೆ ಸರಿಯಾಗಿ ಕಾಣದೆ ನಿಯಂತ್ರಣ ತಪ್ಪಿದ್ದರಿಂದ ಕಾರು ತಗ್ಗಿನ ಪ್ರದೇಶಕ್ಕೆ ಉರುಳಿತು. ಸ್ಥಳೀಯರ ಸಹಕಾರದಿಂದ ಕಾರನ್ನು ಎತ್ತಲಾಯಿತು.
ಗೂಡ್ಸ್ ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ
ಮತ್ತೊಂದು ಪ್ರಕರಣದಲ್ಲಿ ಚಾರ್ಮಾಡಿ ಘಾಟ್ನ ಎರಡನೇ ತಿರುವಿನಲ್ಲಿ ಕಾರು ಮತ್ತು ಗೂಡ್ಸ್ ವಾಹನ ಡಿಕ್ಕಿ ಹೊಡೆದುಕೊಂಡಿದ್ದು, ಕಾರಿನ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರು ಮತ್ತು ಮಹಾರಾಷ್ಟ್ರ ಕಡೆಗೆ ಸಾಗುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದುಕೊಂಡಿವೆ. ಗಾಯಾಳುಗಳನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾರ್ಮಾಡಿ ಘಾಟ್ ತಿರುವುಗಳಿಗೆ ಬ್ರೇಕ್; ಅಭಿವೃದ್ಧಿ ಯೋಜನೆಗೆ ಕೇಂದ್ರದ ಹಸಿರು ನಿಶಾನೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಾರ್ಮಾಡಿ ಘಾಟಿ ರಸ್ತೆಯ ಚಾರ್ಮಾಡಿ ಹಳ್ಳದಿಂದ ಘಾಟಿಯ 11ನೇ ತಿರುವು ವರೆಗಿನ 11.2 ಕಿ.ಮೀ ಅಭಿವೃದ್ಧಿಯ 490 ಕೋಟಿ ವೆಚ್ಚದ ಕಾಮಗಾರಿಗೆ ಸಂಬಂಧಿಸಿದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ.
ಈ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಯ ಮೊದಲ ಹಂತ ಬಂಟ್ವಾಳದ ಬಿ.ಸಿ ರೋಡ್ ನಿಂದ ಪುಂಜಾಲಕಟ್ಟೆವರೆಗೆ ಪೂರ್ಣಗೊಂಡಿದ್ದು ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗಿನ ಕಾಮಗಾರಿ ಪ್ರಗತಿಯಲ್ಲಿದೆ. ಚಾರ್ಮಾಡಿ ಘಾಟಿಯಲ್ಲಿ ಮೂರನೇ ಹಂತದ ಈ ಕಾಮಗಾರಿಯ ಡಿಪಿಆರ್ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಚಾರ್ಮಾಡಿ ಘಾಟಿ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 25 ಕಿ.ಮೀ ವ್ಯಾಪ್ತಿ ಹೊಂದಿದೆ. ಈ ಪೈಕಿ ದಕ್ಷಿಣ ಕನ್ನಡ ಭಾಗದ 11.20 ಕಿ.ಮೀ. ರಸ್ತೆ ಅಭಿವೃದ್ಧಿ ಹೊಂದಲಿದೆ. ರಸ್ತೆ 10 ಮೀಟರ್ ಅಗಲವಾಗಲಿದೆ. 7,745 ಕೋಟಿ ವೆಚ್ಚದಲ್ಲಿ ದೇಶದ ಒಟ್ಟು 588 ಕಿ.ಮೀ ರಸ್ತೆಯ 21 ಯೋಜನೆಗಳ ಪ್ರಸ್ತಾವಕ್ಕೆ ಅನುಮೋದನೆ ಲಭಿಸಿದೆ. ಈ ಯೋಜನೆಗಳಲ್ಲಿ ಚಾರ್ಮಾಡಿ ಘಾಟಿಯ ಅಭಿವೃದ್ಧಿಯೂ ಸೇರಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮೌಲಿಕ್ ಎ ತಿಳಿಸಿದರು.
ರಸ್ತೆ ಅಭಿವೃದ್ಧಿಯಿಂದ ಪ್ರಯಾಣಿಕರಿಗೆ ಅನುಕೂಲ:
ಸೌ೦ದರ್ಯದ ಜೊತೆ ಅಪಾಯಕಾರಿಯೂ ಆಗಿರುವ ಚಾರ್ಮಾಡಿ ಘಾಟಿ ಪರಿಸರದಲ್ಲಿ ಸಾಕಷ್ಟು ಗುಡ್ಡಗಳು, ಬಂಡೆಕಲ್ಲು, ಮರಗಳು ಇದ್ದು, ಇವೆಲ್ಲ ರಸ್ತೆಗೆ ಉರುಳಿ ಬೀಳುವುದು ಮಳೆಗಾಲದಲ್ಲಿ ಸಾಮಾನ್ಯವಾಗಿದೆ. ವಾಹನ ದಟ್ಟಣೆಯೂ ಅಧಿಕವಿರುವ ಕಾರಣ ಘಾಟ್ ಪರಿಸರದ ರಸ್ತೆ ಅಗಲೀಕರಣ ಅಗತ್ಯವಾಗಿತ್ತು. ರಸ್ತೆ ಅಭಿವೃದ್ಧಿಯಿಂದ ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.












