ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ನಗರದ ವಿಶಾಲ್ ಮಾರ್ಟ್ ಲಿಫ್ಟ್ ನಲ್ಲಿ ಸಿಲುಕಿದ್ದ 8 ಮಂದಿಯನ್ನು ಅಗ್ನಿಶಾಮಕ ದಳ ಸಿಬಂದಿ ರಕ್ಷಿಸಿ ಹೊರ ಕರೆತಂದರು.
ಸೋಮವಾರ ಎಂದಿನಂತೆ ಗ್ರಾಹಕರು ಶಾಪಿಂಗ್ ಮಾಡಲು ಬಂದಿದ್ದರು. ಕೆಳಗೆ ಬರುವ ವೇಳೆ ಲಿಫ್ಟ್ ಕೈಕೊಟ್ಟಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸೂಕ್ತ ಸಮಯದಲ್ಲಿ ಆಗಮಿಸಿ ಗ್ರಾಹಕರನ್ನು ಎಮರ್ಜೆನ್ಸಿ ಡೋರ್ ಮೂಲಕ ಹೊರಕರೆತಂದರು.

ಕಾರ್ಯಾಚರಣೆಯಲ್ಲಿ ಆರ್ ಎಫ್‌ಓ ರಾಜು, ಡಿಎಫ್‌ಒ ಆಶೋಕ್‌ಕುಮಾರ್, ಮುಕ್ತಮ್ ಹುಸೇನ್, ಸುನೀಲ್, ಸತೀಶ್, ಸಂತೋಷ್, ಮಜೋಜ್ ಪಾಲ್ಗೊಂಡಿದ್ದರು.

















