
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರುನಾಡ ಸಾರಥಿ ಬಸ್ಸ್ಟ್ಯಾಂಡ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನವೆಂಬರ್ 1ರಂದು ಶೃಂಗೇರಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ಗಂಟೆಗೆ ಶೃಂಗೇರಿ ಬಸ್ಸ್ಟ್ಯಾಂಡ್ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, 10.15ಕ್ಕೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯ ವಿನಯ್ ಕುಮಾರ್ ಎಸ್.ಎಸ್. ಹಾಗೂ ಶೃಂಗೇರಿ ಆಟೋ ಚಾಲಕರ ಸಂಘದ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣ ನಡೆಯಲಿದೆ. ಡಾ. ಉರಾಳ್, ವೆರಿಕೋಸ್ ಮತ್ತು ಆಯುರ್ವೇದ ತಜ್ಞರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಜ್ಞಾನಭಾರತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ನಾಡಗೀತೆ ಗಾಯನ ನಡೆಯಲಿದೆ. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಆಟೋ ಚಾಲಕರಿಂದ ಶೃಂಗೇರಿ ಬಸ್ಸ್ಟ್ಯಾಂಡ್ನಿಂದ ಪಟ್ಟಣದ ರಥಬೀದಿಯಲ್ಲಿ ಬೃಹತ್ ಜಾಥಾ ನಡೆಯಲಿದೆ.
ಸಂಜೆ 5 ಗಂಟೆಗೆ ಬಸ್ಸ್ಟ್ಯಾಂಡ್ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಗುರುಮೂರ್ತಿ ಎಸ್. ಅವರು ಕನ್ನಡ ರಾಜ್ಯೋತ್ಸವದ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮಕ್ಕೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಹಾಗೂ ವಿಶ್ವನಾಥ್ ಗದ್ದೆಮನೆ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸುಧಾಕರ್ ಎಸ್. ಶೆಟ್ಟಿ, ಹರೀಶ್ ವಿ. ಶೆಟ್ಟಿ, ಶೃಂಗೇರಿ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಸುನಿತಾ ನವೀನ್, ಕನ್ನಡ ಸಾಹಿತ್ಯ ಪರಿಷತ್ ಶೃಂಗೇರಿ ಅಧ್ಯಕ್ಷ ಡಾ. ಆಗುಂಬೆ ಗಣೇಶ್ ಹೆಗ್ಡೆ, ಜಿ.ಎ. ಶೃಂಗೇರಿ ಮಾಲೀಕರು ಹಾಗೂ ವಿಎಸ್ ಇವೆಂಟ್ಸ್ನ ಅಶೋಕ್, ಡಾ. ಉರಾಳ್, ವಿನಯ್ ಕುಮಾರ್ ಎಸ್.ಎಸ್., ಜ್ಯೋತಿ ಹೋಮಿಯೋ ಕ್ಲಿನಿಕ್ನ ಡಾ. ಅಣ್ಣದೊರೆ, ಶೈಲಜಾ ರತ್ನಾಕರ ಹೆಗ್ಡೆ, ಬನಶಂಕರಿ ಲೇಔಟ್ನ ಸುಬ್ಬಣ್ಣ, ಅಭಿ ಗೌಡ ಹಾಗೂ ಶೃಂಗೇರಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವೀರೇಂದ್ರ ಎನ್. ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ 6 ಗಂಟೆಗೆ ಸುನಿತಾ ನವೀನ್ ಅವರ ನಾಟ್ಯವೈಭವ ನೃತ್ಯ ಅಕಾಡೆಮಿ, ಶೃಂಗೇರಿ ಇವರ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಭಾಷಾಭಿಮಾನವನ್ನು ಸಾರುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.













