ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಸುತ್ತಿ ಅವಾಂತರ: ತಹಸೀಲ್ದಾರ್ ವಿರುದ್ಧ ಕನ್ನಡ ಸಂಘಟನೆ ಮುಖಂಡೆ ಕಿಡಿ

ಎನ್.ಆರ್‌. ಪುರ: (ನ್ಯೂಸ್ ಮಲ್ನಾಡ್ ವರದಿ)  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜದ ಕಟ್ಟೆಗೆ ಕಪ್ಪು ಬಟ್ಟೆ ಸುತ್ತಿರುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್‌ ಕಿಡಿಕಾರಿದ್ದಾರೆ.


ಇದನ್ನೂ ಓದಿ; ಪಡಿತರ ಚೀಟಿ ಹೊಂದಿರುವವರು ಓದಲೇಬೇಕು ಈ ಸುದ್ದಿ; ಈ ಕೆಲಸ ಮಾಡದಿದ್ದರೆ ರದ್ದಾಗಲಿದೆ ಕಾರ್ಡ್


ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್‌.ಪುರ ತಾಲೂಕಿನ ಕುವೆಂಪು ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಕಾರ್ಯಕ್ರಮದ ಉಸ್ತುವಾರಿ ಹೊಂದಿದ್ದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರು ತಹಶಿಲ್ದಾರ್‌ ತನುಜಾ ಸಮದತ್ತಿ ವಿರುದ್ಧ ಪ್ರೇಮಾ ಶ್ರೀನಿವಾಸ್‌ ಕಿಡಿಕಾರಿದ್ದಾರೆ.


ಇದನ್ನೂ ಓದಿ; ಬೆಳೆ ಸಾಲ ಪಡೆದ, ಪಡೆಯದ ರೈತರಿಗೆ ಮುಖ್ಯ ಮಾಹಿತಿ; ಬೆಳೆ ವಿಮೆ ನೋಂದಾಯಿಸಲು ಅವಕಾಶ; ಕೊನೆಯ ದಿನಾಂಕ ಯಾವಾಗ? ಇಲ್ಲಿದೆ ನೋಡಿ


ಧ್ವಜದ ಕಟ್ಟೆಗೆ ಕಪ್ಪು ಬಟ್ಟೆಯನ್ನು ತರೆವು ಮಾಡುವಂತೆ ತಿಳಿಸಿದ್ದರು ಕೂಡ ತೆರವು ಮಾಡದೇ ಈ ವಿವಾದಕ್ಕೆ ಕಾರಣವಾಗಿದೆ. ಕಟ್ಟೆಗೆ ಕಪ್ಪು ಬಟ್ಟೆ ಕಟ್ಟಿ ಅವಮಾನ ಮಾಡಲಾಗಿದೆ. ತಹಶಿಲ್ದಾರ್‌ ಕೂಡ ಇದರ ಬಗ್ಗೆ ಗಮನಹರಿಸಿಲ್ಲ. ಸಮಿತಿಯ ಜವಬ್ದಾರಿಯನ್ನ ತಹಶಿಲ್ದಾರ್‌ ತೆಗೆದುಕೊಂಡಿದ್ದು, ಆದರೆ, ಕಾರ್ಯಕ್ರಮದಲ್ಲಿ ಧ್ವಜದ ಕಟ್ಟೆಗೆ ಕಪ್ಪು ಬಟ್ಟೆ ಸುತ್ತಿರುವ ಕುರಿತು ಗಮನಹರಿಸಿಲ್ಲ. ಕನ್ನಡದ ಬಗ್ಗೆ ಅಭಿಮಾನ, ಪ್ರೀತಿ ಇರುವವನ್ನು ಸಮಿತಿಯಲ್ಲಿ ಆಯ್ಕೆ ಮಾಡಿ ಹೊರತು ಕಟಾಚಾರಕ್ಕೆ ಅಲ್ಲ. ಪ್ರತಿಯೊಂದು ಅಂಗಡಿಯಲ್ಲೂ ಇಂಗ್ಲೀಷ್‌ ಬೋರ್ಡ್‌ ಇದೆ ಅದನ್ನ ಪ್ರಶ್ನೆ ಮಾಡಲು ಹೋದರೆ ಏನಿವಾಗ ಎಂಬ ಉತ್ತರ ಬರುತ್ತದೆ, ಅದನ್ನು ಲೈಸೆನ್ಸ್ ನೀಡುವಾಗ ಕಟ್ಟುನಿಟ್ಟಾಗಿ ಆದೇಶ ಹೊರಡಿಸಿ ಜಾರಿಗೆ ತರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್‌ ಒತ್ತಾಯಿಸಿದ್ದಾರೆ.


ಇದನ್ನೂ ಓದಿ; ಕ್ವಿಂಟಾಲ್‌ ಗೆ 50,000 ದಾಟಿದ ಅಡಿಕೆ;ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಎಷ್ಟಿದೆ ನೋಡಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.