
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಕರ್ನಾಟಕದ ಪರ ಆಡಿದ ಅವನಿ ಎನ್. ಗೋಗಟೆ ಅವರ ತಂಡ ದ್ವಿತೀಯ ಸ್ಥಾನ ಗಳಿಸಿದೆ.
ನವದೆಹಲಿಯ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಆಯೋಜಿಸಿದ್ದ ಈ ಟೂರ್ನಿ ಅ. 23ರಿಂದ 26ರವರೆಗೆ ನಡೆದಿತ್ತು. ಕರ್ನಾಟಕದ ತಂಡ ಬಿಹಾರ, ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ರಾಜಸ್ಥಾನ ತಂಡಗಳನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಅಂತಿಮ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಸೆಣಸಿದ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.

ಅವನಿ ಅವರು ಹೆಬ್ರಿಯ ಅಮೃತಭಾರತಿ ವಿದ್ಯಾಸಂಸ್ಥೆಯಲ್ಲಿ ಪ್ರಥಮ ವರ್ಷದ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕೊಪ್ಪ ತಾಲೂಕಿನ ಹುಲ್ಲುಮಕ್ಕಿ ನಿವಾಸಿ ನಟರಾಜ್ ಗೋಗಟೆ ಮತ್ತು ನಾಗರತ್ನ ಗೋಗಟೆ ದಂಪತಿಯ ಪುತ್ರಿ.












