
ಆಲ್ದೂರು: (ನ್ಯೂಸ್ ಮಲ್ನಾಡ್ ವರದಿ) ಕೃಷಿ ಹೊಂಡಕ್ಕೆ 11 ವರ್ಷದ ಬಾಲಕಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇದನ್ನೂ ಓದಿ: CET ಪರೀಕ್ಷೆಯ ದಿನಾಂಕ ಬದಲಾವಣೆ.. ಹೆಚ್ಚಿನ ಇಲ್ಲಿದೆ ಮಾಹಿತಿ

ಕೆಳಗೂರು ಗ್ರಾಮದ ರವಿ ಅವರ ಮನೆ ಸಮೀಪ ಕಾರ್ಮಿಕರು ನರ್ಸರಿ ಗಿಡಗಳನ್ನು ನೆಡಲು ಬುಟ್ಟಿಗಳನ್ನು ತುಂಬುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಹಾನಗಲ್ ನಿಂದ ಕೂಲಿ ಅರಸಿ ಕಾರ್ಮಿಕ ಕುಟುಂಬವೊಂದು ಮೂರು ಮಕ್ಕಳ ಜೊತೆ ಇಲ್ಲಿಗೆ ಬಂದಿದ್ದು, ಕೆಲವು ತಿಂಗಳಿಂದ ಇಲ್ಲಿಯೇ ವಾಸವಿದ್ದರು. ನರ್ಸರಿ ಗಿಡಗಳಿಗೆ ಬುಟ್ಟಿ ತುಂಬುವ ಸಂದರ್ಭದಲ್ಲಿ ಇವರ ಮಕ್ಕಳು ಆಟವಾಡುತ್ತ ಗಲಾಟೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮಕ್ಕಳನ್ನು ಮನೆಗೆ ಹೋಗುವಂತೆ ಪಾಲಕರು ಕಳುಹಿಸಿದ್ದಾರೆ.
ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; ಆಕರ್ಷಕ ಸಂಬಳ
ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಪಾಲಕರಿಗೆ ಮೂರು ಮಕ್ಕಳಲ್ಲಿ ಮಗಳು ಕಾಣದೆ ಇದ್ದಾಗ ಮಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ರಸ್ತೆ ಸಮೀಪವೇ ನರ್ಸರಿ ಇದ್ದು ಅಂಗಡಿ ಸೇರಿದಂತೆ ಸುತ್ತಮುತ್ತ ಹುಡುಕಾಡಿದ್ದು ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಗ್ಗೆ ಕಾರ್ಮಿಕರು ನರ್ಸರಿ ಗಿಡಗಳಿಗೆ ನೀರು ಹಾಕಲು ಕೃಷಿ ಹೊಂಡಕ್ಕೆ ಹೋದಾಗ ಕೃಷಿ ಹೊಂಡದಲ್ಲಿ ಬಾಲಕಿಯ ಮೃತದೇಹ ತೇಲುತ್ತಿದ್ದದ್ದು ಕಂಡು ಪಾಲಕರಿಗೆ ವಿಷಯ ತಿಳಿಸಿದ್ದಾರೆ.
ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಈ ತಿಂಗಳ ಕೊನೆಯ ವಾರ ಗಜಕೇಸರಿ ರಾಜಯೋಗ; ಈ 5 ರಾಶಿಗೆ ಅದೃಷ್ಟವೋ ಅದೃಷ್ಟ!
















