
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮಾರ್ಕಲ್ ಗ್ರಾಮ ಪಂಚಾಯಿತಿಯ ನಾಲ್ವರು ಸದಸ್ಯರು ಪಿಡಿಒ ಹಾಗೂ ಅಧ್ಯಕ್ಷರ ನಡೆ ಖಂಡಿಸಿ ರಾತ್ರಿಯಾದರೂ ತೆರಳದೆ ಗ್ರಾಮ ಪಂಚಾಯಿತಿಯಲ್ಲಿಯೇ ಕುಳಿತು ಪ್ರತಿಭಟಿಸುತ್ತಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಈ ತಿಂಗಳ ಕೊನೆಯ ವಾರ ಗಜಕೇಸರಿ ರಾಜಯೋಗ; ಈ 5 ರಾಶಿಗೆ ಅದೃಷ್ಟವೋ ಅದೃಷ್ಟ!

ಪಂಚಾಯಿತಿಯಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಲಂಚಗುಳಿತನ ಸೇರಿದಂತೆ ಹಲವು ಆರೋಪಗಳನ್ನು ಸದಸ್ಯರು ಮಾಡಿದ್ದು, ಪಿಡಿಒ ಹಾಗೂ ಅಧ್ಯಕ್ಷರ ಬಳಿ ಈ ಬಗ್ಗೆ ಸ್ಪಷ್ಟೀಕರಣ ಕೇಳಿದಾಗ ಉತ್ತರಿಸಿದೆ ಪಂಚಾಯಿತಿಯಿಂದ ಹೊರ ಹೋಗಿದ್ದಾರೆ, ರಾತ್ರಿಯಾದರೂ ನಾವು ಸ್ಪಷ್ಟೀಕರಣ ಸಿಗುವವರೆಗೂ ಪಂಚಾಯಿತಿಯಲ್ಲಿಯೇ ಕೂರುತ್ತೇವೆ ಎಂದು ಸದಸ್ಯರು ಕುಳಿತಿದ್ದಾರೆ.

ಇದನ್ನೂ ಓದಿ: ಅಂಚೆ ಇಲಾಖೆಯ ಫಲಿತಾಂಶ ಪ್ರಕಟ; ಅಭ್ಯರ್ಥಿಗಳು ಹೀಗೆ ಚೆಕ್ ಮಾಡಿ ನಿಮ್ಮ ರಿಸಲ್ಟ್
ಕಳೆದ ಒಂದೆರಡು ವರ್ಷಗಳಿಂದ ಮರ್ಕಲ್ ಗ್ರಾಮ ಪಂಚಾಯಿತಿಯಲ್ಲಿ ಹಲವಾರು ಬಾರಿ ಇಂತಹ ಆರೋಪ ಪ್ರತ್ಯಾರೋಪಗಳು ನಡೆದಿದ್ದರೂ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಶಾಸಕರು ಇದಕ್ಕೆ ಇತಿಶ್ರೀ ಹಾಡಲು ವಿಫಲರಾಗಿದ್ದಾರೆ.
ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; ಆಕರ್ಷಕ ಸಂಬಳ
















