ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಮಹಿಳೆಯರು ಆರೋಗ್ಯ ರಕ್ಷಣೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ ಎಂದು ಪ್ರದೀಪಿನಿ ಆಯುರ್ವೇದಾಲಯದ ವೈದ್ಯೆ ಡಾ. ಯಶಸ್ವಿನಿ ಕೃಷ್ಣ ಪ್ರಸಾದ್ ಹೇಳಿದರು.

ಜಯಪುರದ ಪ್ರದೀಪಿನಿ ಆಯುರ್ವೇದಾಲಯ, ಸ್ಪಂದನ ಸ್ವಯಂ ಸೇವಾ ಸಂಸ್ಥೆ, ಶೃಂಗೇರಿ ಶಿಷ್ಯ ಮಲೆನಾಡ ಹೆಬ್ಬಾರ ಬ್ರಾಹ್ಮಣ ಮಹಾಸಭಾ ಹಾಗೂ ಜೆಸಿಐ ಬಿಳಾಲುಕೊಪ್ಪದ ಸಹಯೋಗದೊಂದಿಗೆ ಗುರುವಾರ ಜಯಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವೈದ್ಯಕೀಯ ಮಾಹಿತಿ ಶಿಬಿರದಲ್ಲಿ ಮಾತನಾಡಿದ ಅವರು, ಮಹಿಳೆ ಮೈ ನೆರೆದಾಗ, ಮಗುವನ್ನು ಹಡೆದಾಗ, ಮುಟ್ಟು ನಿಲ್ಲುವ ಸಮಯದಲ್ಲಿ ಹೆಚ್ಚಿನ ಆರೈಕೆ, ಹಾಗೂ ಉತ್ತಮ ಪೌಶ್ಟಿಕಾಂಶಯುಕ್ತ ಆಹಾರ ಸೇವನೆ ಮಾಡಬೇಕಾಗುತ್ತದೆ. ಈ ಸಂಧರ್ಭದಲ್ಲಿ ಖಾಯಿಲೆಗಳಿಗೆ ತುತ್ತಾದರೆ ಜೀವನ ಪೂರ್ತಿ ಅದರ ದುಷ್ಪರಿಣಾಮವನ್ನು ಎದುರಿಸ ಬೇಕಾಗುತ್ತದೆ. ಇಂದು 35 ರಿಂದ 40 ವರ್ಷಕ್ಕೆ ಶಾರೀರಿಕ ಸಮಸ್ಯೆಯ ಕಾರಣ ಮುಟ್ಟು ನಿಲ್ಲುವುದನ್ನು ನಾವು ನೋಡುತ್ತೇವೆ, ಆದರೆ ಇದು ಉತ್ತಮ ಆರೋಗ್ಯದ ಲಕ್ಷಣವಲ್ಲ. ಅಂತವರಲ್ಲಿ ಹೃದ್ರೋಗ, ಸಕ್ಕರೆ ಖಾಯಿಲೆ ಅಥಾವ ಸ್ಥೂಲ ಕಾಯದ ಸಮಸ್ಯೆ ಬರಬಹುದು.
ಸಹಜವಾಗಿ ಹೊರ ಹೋಗಬೇಕಾದ ರಕ್ತ ದೇಹದಲ್ಲಿ ಉಳಿದರೇ ದೇಹದಲ್ಲಿ ಬೇರೆ ಬೇರೆ ರೀತಿಯಲ್ಲಿ ಶೇಖರಣೆಗೊಂಡು ಕ್ರಮೇಣವಾಗಿ ಅದು ಸ್ಥನ ಕ್ಯಾನ್ಸರ್ ಸೇರಿದಂತೆ ವಾಸಿ ಮಾಡಲು ಅಸಾಧ್ಯವಾದ ವ್ಯಾದಿಗೆ ಕಾರಣವಾಗಲಿದೆ. ಇದನ್ನು ತಪ್ಪಿಸಲು ಉತ್ತಮ ಆಹಾರ ಪದ್ದತಿ ಮತ್ತು ಯೋಗ್ಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ಆಯುರ್ವೇದ ಚಿಕಿತ್ಸೆಗಳಿಂದ ದೇಹವನ್ನು ಶುದ್ಧೀಕರಣ ಮಾಡುವ ಮೂಲಕವೂ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು ಎಂದರು.
ಭಾರತೀಯರಲ್ಲಿ ಹೃದಯದ ಸಮಸ್ಯೆ ಅತ್ಯಂತ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮುಖ್ಯ ಕಾರಣ ಹೃದಯದ ಕಾರ್ಯದಲ್ಲಿನ ಸಮಸ್ಯೆ. ಅತಿಯಾದ ಮದ್ಯಪಾನ, ಧೂಮಪಾನ ಹಾಗೂ ದೇಹದಲ್ಲಿನ ಕೆಟ್ಚ ಕೊಬ್ಬಿನ ಕಾರಣ ರಕ್ತನಾಳಗಳು ಬಂದ್ ಆಗಿ ಹೃದಯಾಘಾತ ಸಂಭವಿಸುತ್ತಿದೆ. ಮಿತವಾದ ಊಟ, ನಿಯಮಿತ ಶೌಚ ಹಾಗೂ ನಿತ್ಯ ಯೋಗ, ದ್ಯಾನಗಳನ್ನು ಮಾಡುವ ಅಭ್ಯಾಸ ರೂಡಿಸಿಕೊಂಡರೆ ಹೃದಯಾಘಾತದಿಂದ ದೂರವಿರಬಹುದಾಗಿದ್ದು, ಔಷಧಿಯೇ ಖಾಯಿಲೆಗೆ ಪರಿಹಾರ ಅನ್ನುವ ಮನಸ್ಥಿತಿ ಸರಿಯಲ್ಲ ಎಂದು ಮೈಸೂರಿನ ಶ್ರೀ ರಂಗ ಆಯುರ್ವೇದಾಲಯದ ವೈದ್ಯ ಡಾ. ಪ್ರಸನ್ನ ವೆಂಕಟೇಶ್ ಹೇಳಿದರು.
ಫಾಸ್ಟ್ ಫುಡ್, ಕೂಲ್ ಡ್ರಿಂಕ್ಸ್ ಗಳ ಸೇವನೆ ಹಾಗೂ ಧೂಮಪಾನ, ಮದ್ಯ ಸೇವನೆಯಿಂದ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು, ದುಡ್ಡಿಲ್ಲದೆ, ಮದ್ದಿಲ್ಲದೆ ನಮ್ಮ ಆರೋಗ್ಯ ಸುಧಾರಿಸಿಕೊಳ್ಳುವ ಜೀವನ ಶೈಲಿಯ ಕುರಿತ ಅತ್ಯುತ್ತಮ ಮಾಹಿತಿಯನ್ನು ಇಂದಿನ ಶಿಭಿರದಲ್ಲಿ ವೈದ್ಯರುಗಳಿಂದ ಪಡೆದಿದ್ದೇವೆ. ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವೆಲ್ಲ ಆರೋಗ್ಯವಂತರಾದರೆ ಮಾಹಿತಿ ಶಿಬಿರಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದು ಸ್ಪಂದನ ಸಂಸ್ಥೆಯ ಅದ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾದ ಗೌರವಾದ್ಯಕ್ಷ ಗೋಪಾಲಕೃಷ್ಣ ಜಿ ಸಿ, ಅದ್ಯಕ್ಷ ಜಯ ಕುಮಾರ್, ಜಯಪುರ ಗ್ರಾಪಂ ಅದ್ಯಕ್ಷ ಸಂಪತ್, ಸ್ಪಂದನ ಸ್ವಯಂ ಸೇವಾ ಸಂಸ್ಥೆಯ ಗೌರವಾದ್ಯಕ್ಷ ಮಣಿಕಂಠನ್ ಕಂದ ಸ್ವಾಮಿ, ಯುವ ಹೆಬ್ಬಾರ ಬಳಗದ ಅದ್ಯಕ್ಷ ಪ್ರದೀಪ್ ಹೆಬ್ಬಾರ್, ಜೇಸಿಐ ಬಿಳಾಲುಕೊಪ್ಪದ ಅದ್ಯಕ್ಷ ದೇವರಾಜ್, ಸಾಮಾಜಿಕ ಕಾರ್ಯಕರ್ತರುಗಳಾದ ಶ್ರೀಕಂಠ, ವಿಜಯರಂಗ, ನಟರಾಜ್, ಸ್ಪಂದನದ ವಿಶ್ವನಾಥ್, ಸುಂದರೇಶ್, ಹರೀಷ್, ಲೋಕೇಶ್, ಸುಖನ್ಯಾ ಸುರೇಶ ಹಾಗೂ ಇತರರಿದ್ದರು.
ಹುಲಿ ಉಗುರು ಹೊಂದಿದ್ದ ಆರೋಪ: ಎನ್ ಆರ್ ಪುರದಲ್ಲಿ DRFO ದರ್ಶನ್ ಅರೆಸ್ಟ್
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲಿ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದೆ. ಅದರಲ್ಲಿ ಕಳಸದ ಅರಣ್ಯಾಧಿಕಾರಿಯೊಬ್ಬ ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಎನ್.ಆರ್.ಪುರದಲ್ಲಿ ಬಂಧನ ಮಾಡಿ ಕೊಪ್ಪ ಡಿ.ಎಫ್.ಓ ಕಚೇರಿಗೆ ಕರೆ ತರಲಾಗಿದೆ.
ಏನಿದು ಪ್ರಕರಣ:
ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಅರಣ್ಯ ರಕ್ಷಕರು, ವನ್ಯಜೀವಿ ರಕ್ಷಕರು ಎಂದು ಹೇಳಿಕೊಳ್ಳುವ ಅರಣ್ಯ ಅಧಿಕಾರಿಯೊಬ್ಬ ಹುಲಿ ಉಗುರಿನ ಡಾಲರ್ ಧರಿಸಿದ ಆರೋಪ ಕೇಳಿಬಂದಿತ್ತು. ಹುಲಿ ಉಗುರು ಧರಿಸಿದ ಆರೋಪದ ಹಿನ್ನಲೆ ಕಳಸದ ಡಿಆರ್ಎಫ್ಓ ದರ್ಶನ್ ಎಂಬಾತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ದಾಖಲು ಮಾಡಲಾಗಿತ್ತು. ದರ್ಶನ್ ಹುಲಿಯ ಉಗುರಿನ ಡಾಲರ್ ಧರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶೋಕಿ ಮಾಡಿದ್ದ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ದರ್ಶನ್ ಫೋಟೋ ಡಿಲಿಟ್ ಕೂಡ ಮಾಡಿದ್ದ.












