ಶೃಂಗೇರಿ/ಕೊಪ್ಪ: ಕಾಡಾನೆ ಹಾವಳಿ : ಬೆಳೆಗಳು ನಾಶ | ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯ

ಶೃಂಗೇರಿ/ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ)ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆ ದಾಳಿಗೆ ಹಲವು ಜೀವ ಹಾನಿಯಾಗಿದೆ. ಬಾಳೆಹೊನ್ನೂರು, ನರಸಿಂಹರಾಜಪುರ, ಖಾಂಡ್ಯ, ಕೊಪ್ಪ, ಮೂಡಿಗೆರೆ ಭಾಗದ ಜನರು ಕಾಡಾನೆ ಹಾವಳಿಯಿಂದ ತತ್ತರಿಸಿ ಹೋಗಿದ್ದು, ಜೀವಭಯದಿಂದ ಕೃಷಿ ತೋಟಗಳಿಗೆ ಹೋಗುವ ಪರಿಸ್ಥಿತಿ ಉದ್ಭವಿಸಿದೆ.


ಇದನ್ನೂ ಓದಿ: ಹುಟ್ಟೂರು ಶೃಂಗೇರಿಯನ್ನ ಕೊಂಡಾಡಿದ ವಜ್ರಕಾಯ ಬೆಡಗಿ; ನಾನು ಶೃಂಗೇರಿಯವಳು ಎನ್ನಲು ಈ ಕಾರಣಕ್ಕೆ ಹೆಮ್ಮೆ ನಭಾ ನಟೇಶ್..


ಸ್ಪಲ್ಪ ದಿನದ ಹಿಂದೆ ಶೃಂಗೇರಿ, ಅಡ್ಡಗದ್ದೆ, ಹೊಸಕೊಪ್ಪ ಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಇದೀಗ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮ ಪಂಚಾಯಿತಿಯ ಬಿಲಗದ್ದೆಯಲ್ಲಿ ಕಾಣಿಸಿಕೊಂಡಿದೆ.

ಜನಪ್ರತಿನಿಧಿಗಳು ಮಾಯ!?:
ಮನುಷ್ಯನ ಜೀವನದಲ್ಲಿ ಆಟವಾಡುತ್ತಿರುವ ಕಾಡಾನೆಗಳಿಗೆ ಕಡಿವಾಣ ಹಾಕುವವರು ಯಾರು ಎನ್ನುವ ಯಕ್ಷ ಪ್ರಶ್ನೆಗಳಿಗೆ ಉತ್ತರವೇ ಇಲ್ಲದಂತಾಗಿದ್ದು, ಕಾಡಾನೆ ದಾಳಿಯಿಂದ ಅಮಾಯಕರು ಮೃತಪಟ್ಟಾಗ ಮಾತ್ರ ಸ್ಥಳಕ್ಕೆ ಬರುವ ಜನಪ್ರತಿನಿಧಿಗಳು ಮೃತ ಕುಟುಂಬಕ್ಕೆ ಪರಿಹಾರ ನೀಡಿ ಸಾಂತ್ವನ ಹೇಳುವುದನ್ನು ಬಿಟ್ಟರೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಫಿ ತೋಟದಲ್ಲಿ ಗಜಪಡೆ ಬೀಡು ಬಿಡುತ್ತಿದ್ದು, ಪ್ರಾಣ‌ ಭಯದಿಂದ ಕಾಫಿ ತೋಟಕ್ಕೆ ಕೆಲಸಗಾರರಾಗಲಿ, ಮಾಲೀಕರಾಗಲಿ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಗದ್ದೆಗಲಲ್ಲಿ ಕಾಡಾನೆಗಳು ತುಳಿದು ನಾಶ ಮಾಡುವ ಆತಂಕದಲ್ಲಿದ್ದಾರೆ. ಹಲವು ವರ್ಷದಿಂದ ಬೆಳಿದಿದ್ದ ಕಾಫಿ ಗಿಡಗಳನ್ನು ನಾಶ ಮಾಡುತ್ತಿವೆ. ಸದ್ಯ ಅರಣ್ಯ ಇಲಾಖೆ ಹೈ ಅಲರ್ಟ್ ಆಗಿದ್ದು ಹಾನಿಯನ್ನು ತಡೆಗಟ್ಟಲು ಆನೆಯನ್ನು ಕಾಡಿಗೆ ಓಡಿಸಲು ಶತಪ್ರಯತ್ನ ಮಾಡುತ್ತಿದೆ.

“ಒಂಟಿ ಆನೆ ಆಗಿರುವುದರಿಂದ ನಿರ್ಲಕ್ಷ್ಯ ವಹಿಸಿದಲ್ಲಿ ಅದರಿಂದ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ, ಹಾಗೆಯೇ ಇತರೆ ಭಾಗದ ಆನೆಗಳು ಸಹ ಇತ್ತ ಬರಬಹುದಾದ ಸಾಧ್ಯತೆಗಳು ಇದೆ. ಈ ಎಲ್ಲಾ ಆತಂಕಗಳನ್ನು ಅರಣ್ಯ ಇಲಾಖೆ ಕ್ಷೀಪ್ರ ಕ್ರಮ ವಹಿಸಿ ಬಗೆಹರಿಸಬೇಕು.

ತಾರೊಳ್ಳಿ ಕೊಡಿಗೆ ಭಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ಒಂಟಿ ಆನೆಯೊಂದು ಆಗಾಗ್ಗೆ ಸಂಚರಿಸುತ್ತಿದ್ದು ಬೆಳೆ ನಾಶ ಮಾಡುತ್ತಿದೆ, ಅದನ್ನೂ ಸ್ಥಳಾಂತರ ಮಾಡಬೇಕು ಹಾಗೂ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು”. ರಂಜಿತ್ ಶೃಂಗೇರಿ, ಪ್ರಧಾನ ಕಾರ್ಯದರ್ಶಿ, ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ.


ಇದನ್ನೂ ಓದಿ: ವರ್ಷದ ಕೊನೆಯ ಖಗ್ರಾಸ ಚಂದ್ರಗ್ರಹಣ; ಶುರು-ಅಂತ್ಯ ಯಾವಾಗ?


ಆನೆ ಉಪಟಳ ಹೆಚ್ಚಾಗುವ ಮುನ್ನ ಶಾಶ್ವತ ಕ್ರಮವಹಿಸಿ:
ಬಾಳೆಹೊನ್ನೂರು, ನರಸಿಂಹರಾಜಪುರ, ಮೂಡಿಗೆರೆ, ಕೊಪ್ಪ ಭಾಗದಲ್ಲಿ ಆನೆಗಳ ಉಪಟಳಕ್ಕೆ ರೈತರು, ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳು ನಮ್ಮ ಕಣ್ಣ ಮುಂದೆ ಇದೆ. ಹಲವು ಕಾರ್ಮಿಕರು, ರೈತರು ಸಹ ಆನೆ ದಾಳಿಗೆ ಬಲಿಯಾಗಿದ್ದಾರೆ, ಈಗ ಶೃಂಗೇರಿ ಭಾಗದಲ್ಲೂ ಒಂಟಿ ಆನೆ ಉಪಟಳ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಒಂಟಿ ಆನೆ ಆಗಿರುವುದರಿಂದ ನಿರ್ಲಕ್ಷ್ಯ ವಹಿಸಿದಲ್ಲಿ ಅದರಿಂದ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ, ಹಾಗೆಯೇ ಇತರೆ ಭಾಗದ ಆನೆಗಳು ಸಹ ಇತ್ತ ಬರಬಹುದಾದ ಸಾಧ್ಯತೆಗಳು ಇದೆ. ಈ ಎಲ್ಲಾ ಆತಂಕಗಳನ್ನು ಅರಣ್ಯ ಇಲಾಖೆ ಕ್ಷೀಪ್ರ ಕ್ರಮ ವಹಿಸಿ ಬಗೆಹರಿಸಬೇಕು.

“ಒಂಟಿ ಆನೆಯೊಂದು ಬಿಲಗದ್ದೆ ಸಮೀಪ ಇದ್ದು ಅದನ್ನು ಆದಷ್ಟು ಬೇಗನೇ ಅಲ್ಲಿಂದ ದಟ್ಟ ಕಾಡಿನ ಭಾಗಕ್ಕೆ ಕಳಿಸುವ ಪ್ರಯತ್ನ ಇಲಾಖೆ ಮಾಡುತ್ತಿದೆ”. – ಮಧುಕರ್, ವಲಯ ಅರಣ್ಯಾಧಿಕಾರಿ ಶೃಂಗೇರಿ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.