ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ಶ್ರವಣ ಯಂತ್ರಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮವನ್ನು ಮೇ 3, ಭಾನುವಾರ ಶೃಂಗೇರಿಯಲ್ಲಿ ಆಯೋಜಿಸಲಾಗಿದೆ.
ಶ್ರೀ ಆದಿಚುಂಚನಗಿರಿ ಶಾಖಾ ಮಠ, ಶೃಂಗೇರಿ, ಚುಂಚಶೃಂಗ ತಾಲೂಕು ಒಕ್ಕಲಿಗರ ಮಹಿಳಾ ಸಂಘ, ಲಯನ್ಸ್ ಕ್ಲಬ್ ಶೃಂಗೇರಿ ಇವರು ಸಂಯುಕ್ತ ಆಶ್ರಯದಲ್ಲಿ, ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಈ ಶಿಬಿರ ನಡೆಯಲಿದೆ.
ಕಾರ್ಯಕ್ರಮವು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಿ.ಜಿ.ಎಸ್ ಶಾಲಾ ಆವರಣದಲ್ಲಿ ನಡೆಯಲಿದೆ. ಶಿಬಿರದಲ್ಲಿ ಉಚಿತ ಶ್ರವಣ ತಪಾಸಣೆ ನಡೆಸಲಾಗುವುದರ ಜೊತೆಗೆ ಶ್ರವಣ ಸಮಸ್ಯೆ ಇರುವವರಿಗೆ ಶ್ರವಣ ಯಂತ್ರಗಳಿಗೆ ಸಹಾಯಧನ ನೀಡಲಾಗುತ್ತದೆ.
ಟೀಮ್ ಈಶ್ವರ್ ಮಲ್ಪೆ ವತಿಯಿಂದ ಶ್ರವಣ ಸಾಧನಗಳ ಮೊತ್ತದ 40 ಶೇಕಡಾ ವೆಚ್ಚವನ್ನು ದೇಣಿಗೆ ಮೂಲಕ ಭರಿಸಲಾಗುವುದು. ಅಂತಾರಾಷ್ಟ್ರೀಯ ಅನುಭವ ಹೊಂದಿರುವ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡು ಸೇವೆ ನೀಡಲಿದ್ದಾರೆ.
ನೋಂದಣಿ ಕಡ್ಡಾಯವಾಗಿದ್ದು, ಮೊದಲು ನೋಂದಾಯಿಸುವ 30 ಜನರಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ. ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಶ್ರವಣ ಪರೀಕ್ಷೆಯ ಹಳೆಯ ವರದಿ ಇದ್ದಲ್ಲಿ ಜೊತೆಯಲ್ಲಿ ತರಲು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಮತ್ತು ನೋಂದಣಿಗಾಗಿ 8951804399 (ವಾಟ್ಸಾಪ್) ಸಂಖ್ಯೆಯನ್ನು ಸಂಪರ್ಕಿಸಬಹುದು.
ನಾಳೆ ಶೃಂಗೇರಿಯಲ್ಲಿ ಉಚಿತ ಶ್ರವಣ ತಪಾಸಣೆ ಶಿಬಿರ














