ಕೊಪ್ಪ: ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಗ್ರಾಮಸ್ಥರು

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕಳೆದ 16 ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿರೇಹಡ್ಲುವಿನ 15 ಮನೆಗಳು ಪರದಾಡುತ್ತಿದ್ದಾರೆ.


ಇದನ್ನೂ ಓದಿ: ನವ ಮಂಗಳೂರು ಬಂದರು ಟ್ರಸ್ಟ್​​ ನಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್


ಮಲೆನಾಡು ಭಾಗದಲ್ಲಿ ಕಳೆದ ತಿಂಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಭಾರೀ ಅನಾಹುತ ಸಂಭವಿಸಿದೆ. ಅದೇ ರೀತಿ ಹಿರೇಹಡ್ಲುವಿನಲ್ಲಿ ಸುರಿದ ಮಳೆಗೆ ವಿದ್ಯುತ್ ಕಂಬವೊಂದು ಬಿದ್ದಿದ್ದು, ಗ್ರಾಮಸ್ಥರು ಎಇ ಗಮನಕ್ಕೆ ತಂದರೂ ಕೂಡ ಕೆಲಸಗಾರರು ಇಲ್ಲ ಎಂಬ ನೆಪ ಹೇಳುತ್ತಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ.


ಇದನ್ನೂ ಓದಿ: ರೈತರೇ ಗಮನಿಸಿ; ಈ ಕೆಲಸ ಮಾಡದಿದ್ದರೆ ಜಮೆ ಆಗಲ್ಲ ಬರ ಪರಿಹಾರ ಹಣ!


16 ದಿನದಿಂದ ಕತ್ತಲೆಯಲ್ಲಿ ಜೀವನ ನಡೆಸುತ್ತಾ ಇದ್ದು, ಮನೆಯಲ್ಲಿ ಪ್ರೆಗ್ನೆಂಟ್ ಇದ್ದಾರೆ. ಏನಾದರೂ ಎಮರ್ಜೆನ್ಸಿ ಅಂದ್ರೆ ಮೊಬೈಲ್ ಕೂಡ ಚಾರ್ಜ್ ಇಲ್ಲ. ಯಾರಿಗೆ ಸಂಪರ್ಕ ಮಾಡಲು ಸಾಧ್ಯವಿಲ್ಲವಾಗಿದೆ.– ದಾಮೋದರ ಹಿರೇಹಡ್ಲು


ಇದನ್ನೂ ಓದಿ: ಸಾಲಗಾರರಿಗೆ ಗುಡ್‌ ನ್ಯೂಸ್‌; ಹೆಚ್ಚಿನ ಬಡ್ಡಿ ವಸೂಲಿ ಮಾಡಿ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ


ಚಿಕ್ಕಮಗಳೂರು: ಜುಲೈ 1ರಿಂದ ಹೊಸ ಕ್ರಿಮಿನಲ್ ಕಾನೂನುಗಳು ಅನುಷ್ಠಾನ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬ್ರಿಟಿಷರ ಕಾಲದಲ್ಲಿ ಜಾರಿಗೆ ತಂದಿದ್ದ ಅಪರಾಧ ಕಾಯ್ದೆಯನ್ನು ಮಾರ್ಪಡಿಸಿ ಅಗತ್ಯಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಮೂರು ಕ್ರಿಮಿನಲ್ ಕಾನೂನುಗಳನ್ನು ರೂಪಿಸಿದೆ. ಜುಲೈ 1 ರಿಂದ ಅವುಗಳು ದೇಶದಾದ್ಯಂತ ಜಾರಿಗೆ ಬರಲಿವೆ ಎಂದು ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆ ಏರ್ಪಡಿಸಿದ್ದ ಹೊಸ ಕ್ರಿಮಿನಲ್ ಕಾನೂನುಗಳು ಹಾಗೂ ಮಾಧ್ಯಮ ಮತ್ತು ಪೊಲೀಸ್ ಕಾನೂನುಗಳು ಕುರಿತು ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕ ಸಮಾಜದಲ್ಲಿ ಕಾಲಕ್ಕೆ ತಕ್ಕಂತೆ ಕಾನೂನುಗಳ ಬದಲಾವಣೆ ಅಗತ್ಯ. ಸಮಾಜದಲ್ಲಿ ಮಹಿಳೆಯರು, ನೊಂದವರು, ಅಸಹಾಯಕರಿಗೆ ತ್ವರಿತ ನ್ಯಾಯ ಕಲ್ಪಿಸಿ ಹಕ್ಕುಗಳ ರಕ್ಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾನೂನುಗಳನ್ನು ಮಾರ್ಪಡಿಸಿ ಭಾರತೀಯ ದಂಡ ಸಂಹಿತೆ (ಐಪಿಸಿ) ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಹಾಗೂ ಸಾಕ್ಷ್ಯ ಕಾಯ್ದೆ ಜಾಗದಲ್ಲಿ ಭಾರತೀಯ ಸಾಕ್ಷ್ಯ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಿದರು.

ಈ ಕಾನೂನುಗಳನ್ನು ಆಧುನಿಕತೆಗೆ ತಕ್ಕಂತೆ ಸರಳೀಕರಣಗೊಳಿಸಿ ಮಾರ್ಪಡಿಸಲಾಗಿದೆ. ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸಲಿವೆ. ಇದರಿಂದ ಜನಸಾಮಾನ್ಯರು, ಪೊಲೀಸರು, ನ್ಯಾಯಾಧಿಕರಣ ಮಾಡುವವರಿಗೆ ಅನುಕೂಲವಾಗಲಿದೆ ಅದರಂತೆ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.

ಸರ್ಕಾರಿ ಅಭಿಯೋಜಕಿ ಭಾವನಾ ಅವರು ಹೊಸ ಭಾರತೀಯ ನ್ಯಾಯ ಸಂಹಿತೆ ಕುರಿತು ಮಾತನಾಡಿ ಅವರು, 1860 ರಲ್ಲಿ ಜಾರಿಗೆ ತಂದಿದ್ದ ಐಪಿಸಿ ಕಾಯ್ದೆಗಳನ್ನು 2023 ರಲ್ಲಿ ಮಾರ್ಪಡಿಸಲಾಗಿದೆ. ಹಳೆಯ ಕಾನೂನುಗಳಲ್ಲಿ 511 ಸೆಕ್ಷನ್ ಹಾಗೂ 23 ಅಧ್ಯಾಯಗಳಿದ್ದವು. ಹೊಸ ಕಾನೂನಿನಲ್ಲಿ 358 ಸೆಕ್ಷನ್ ಹಾಗೂ 20 ಅಧ್ಯಾಯಗಳಿವೆ. ಅಧ್ಯಾಯ 5ರ ಸೆಕ್ಷನ್ 63 ರಿಂದ 99 ರವರೆಗೆ ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ, ವರದಕ್ಷಿಣೆ, ಅಪಹರಣ ಸಂಬಂಧಿತ ಪ್ರಕರಣಗಳು ಹಾಗೂ ದಂಡ ಮತ್ತು ಶಿಕ್ಷೆಯ ಸ್ವರೂಪ, ಪ್ರಮಾಣದಲ್ಲಿ ಬದಲಾವಣೆ ತರಲಾಗಿದೆ. ಗಂಭೀರವಲ್ಲದ ಚಿಕ್ಕ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಜೈಲು ಶಿಕ್ಷೆ ಬದಲಾಗಿ ಮನಃಪರಿವರ್ತನೆ ಹೊಂದಲು ಸಾಮಾಜಿಕ ಸೇವೆ ಮಾಡುವ (ವೃದ್ಧಾಶ್ರಮ, ಅನಾಥಶ್ರಮಗಳಲ್ಲಿ ಕೆಲಸ) ಶಿಕ್ಷೆ ನೀಡಲು ಅವಕಾಶವಿದೆ ಎಂದು ಹೇಳಿದರು.

ಕೊಲೆ ಪ್ರಕರಣ, ಗುಂಪು ಘರ್ಷಣೆ ಬಿಎನ್‌ಎಸ್ ಕಾಯ್ದೆಯ 103ರಡಿ ಬರಲಿವೆ. ಸಂಘಟಿತ ಅಪರಾಧ, ಉಗ್ರಗಾಮಿ ಚಟುವಟಿಕೆ, ಅಪಹರಣ, ಭೂಕಬಳಿಕೆ, ಜೂಜು, ಸುಪಾರಿ ನೀಡುವುದು ಹೊಸ ಕಾನೂನಿನ ಅಧ್ಯಾಯ 6ರ ಕಾಯ್ದೆಗಳಲ್ಲಿ ಅಳವಡಿಸಲಾಗಿದೆ. ಪೋಕ್ಸೊ ಕಾಯ್ದೆಗಳಲ್ಲಿ ಮಕ್ಕಳ ಹೆಸರು, ಭಾವಚಿತ್ರ ಬಹಿರಂಗಪಡಿಸುವಂತಿಲ್ಲ. ಇದಕ್ಕೆ ಕೋರ್ಟ್ ಹಾಗೂ ಕುಟುಂಬದವರ ಸಮ್ಮತಿ ಅಗತ್ಯ ಎಂದು ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ದೇಶದಲ್ಲಿ ಮೂರು ಕ್ರಿಮಿನಲ್ ಕಾನೂನುಗಳನ್ನು ಮಾರ್ಪಡಿಸಿ ಜುಲೈ 1ರಿಂದ ಅನುಷ್ಠಾನಕ್ಕೆ ಬರಲಿವೆ. ಕಾಲಕ್ಕೆ ತಕ್ಕಂತೆ ಸೂಕ್ಷ್ಮ ಪ್ರಕರಣಗಳಲ್ಲಿ ಈ ಕಾನೂನುಗಳು ಪೊಲೀಸರು, ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇಲ್ಲಿ ಮುದ್ರಣ ಮಾಧ್ಯಮಗಳ ಪಾತ್ರವೂ ಮುಖ್ಯವಾಗಿದೆ ಎಂದು ಹೇಳಿದರು.

ಇದುವರೆಗೂ ದೇಶದಲ್ಲಿ ಭಾರತೀಯ ದಂಡ ಸಂಹಿತೆ (ಐ.ಪಿ.ಸಿ) ಜಾರಿಯಲ್ಲಿದ್ದು, ಹಲವು ಮಹತ್ವದ ಬದಲಾವಣೆಗಳೊಂದಿಗೆ ಭಾರತೀಯ ನ್ಯಾಯ ಸಂಹಿತೆ-2023 (ಬಿಎನ್‌ಎಸ್) ಆಗಿ ಜುಲೈ 1 ರಿಂದ ಜಾರಿಯಾಗಲಿದೆ ಎಂದರು. ಈ ಹಿಂದೆ ಐಪಿಸಿಯಲ್ಲಿದ್ದ 511 ವಿಭಾಗಗಳನ್ನು 311 ಕ್ಕೆ ಇಳಿಸಲಾಗಿದ್ದು, ನೂತನ ಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಯಲ್ಲಿ ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ ಜಾಗದಲ್ಲಿ ಭಾರತೀಯ ಸಾಕ್ಷ್ಯ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಿದರು.

ನೂತನ ಭಾರತೀಯ ನ್ಯಾಯ ಸಂಹಿತೆಯಲ್ಲಿ (ಬಿಎನ್‌ಎಸ್) 3 ಪ್ರಮುಖ ಅಪರಾಧ ಕಾನೂನುಗಳು ಹೊಸದಾಗಿ ಜಾರಿಗೆ ಬರುತ್ತಿದ್ದು, 1861 ರಿಂದ ಐಪಿಸಿ ಕಾನೂನುಗಳು ಜಾರಿಯಲ್ಲಿದ್ದು, ಅವುಗಳಲ್ಲಿ ಕೆಲವು ತಿದ್ದುಪಡಿ ಆಗಿವೆ. ಐಪಿಸಿ ಕಾನೂನುಗಳನ್ನು ಸರಳೀಕರಣ ಮಾಡಲಾಗಿದೆ ವಿನಾ ಸಮಗ್ರ ಬದಲಾವಣೆ ಮಾಡಿಲ್ಲ. ಸಿಆರ್‌ಪಿಸಿ ಹೋಗಿ ಬಿಎನ್‌ಎಸ್‌ಎಸ್ ಆಗಿದೆ ಎಂದು ಹೇಳಿದರು.

ಕಿರಿಯ ಕಾನೂನು ಅಧಿಕಾರಿ ವಿನು ಮಾತನಾಡಿ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಕೆಲವು ನಿದರ್ಶನಗಳನ್ನಿಟ್ಟುಕೊಂಡು ಭಾರತೀಯ ನ್ಯಾಯ ಸಂಹಿತೆಯನ್ನು ಜಾರಿಗೆ ತರಲಾಗಿದೆ. ಸಿಆರ್‌ಪಿಸಿ ಯಲ್ಲಿ 415 ಕಾನೂನುಗಳಿದ್ದು, ಅದರಲ್ಲಿ 9 ರದ್ದಾಗಿವೆ. 107 ಬದಲಾವಣೆಯಾಗಿವೆ. 9 ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಬಂಧನ, ಸಾಕ್ಷಿ, ಚಾರ್ಜ್ಶೀಟ್, ಎಫ್‌ಐಆರ್ ಗಳಲ್ಲಿ ಈ ಬದಲಾವಣೆಗಳಾಗಿವೆ ಎಂದು ಹೇಳಿದರು.

ಪಿಪಿ ರಾಘವೇಂದ್ರ ರಾಯ್ಕರ್ ಭಾರತೀಯ ಸಾಕ್ಷ್ಯ ಅನಿಯಮದ ಬಗ್ಗೆ ಮಾತನಾಡಿ, ಪೊಲೀಸ್ ಮತ್ತು ಮಾಧ್ಯಮ ಪರಸ್ಪರ ಸಹಕಾರದಿಂದ ಒಟ್ಟೊಟ್ಟಿಗೆ ಸಾಗಬೇಕು. ಯಾವುದೇ ಪ್ರಕರಣ ತನಿಖೆಯ ಹಂತದಲ್ಲಿರುವಾಗ ಪೊಲೀಸರು ಯಾರೊಂದಿಗೂ ಮಾಹಿತಿ ಹಂಚಿಕೊಳ್ಳಬಾರದು. ಮೇಲಾಕಾರಿ ಅನುಮತಿ ಇಲ್ಲದೆ ಮಾಹಿತಿ ನೀಡುವಂತಿಲ್ಲ ಎಂದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.