ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರದ ತಾಲ್ಲೂಕು ಕಚೇರಿ ಎದುರಿನ ಬಡಾ ಮಕಾನ್ ಸಮೀಪದ ವಿವಾದಿತ ಸ್ಥಳದಲ್ಲಿದ್ದ ಕಟ್ಟಡವನ್ನು ಏಕಾಏಕಿ ತೆರವುಗೊಳಿಸಿದ ಆರೋಪದಲ್ಲಿ ಜಿಲ್ಲಾ ವಕ್ಸ್ ಅಧಿಕಾರಿ ಸೈಯದ್ ಸತ್ತಾರ್ ಷಾ ಹುಸೇನಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಅಂಗನವಾಡಿಯಲ್ಲಿ ಭರ್ಜರಿ ಜಾಬ್ ಆಫರ್; 10th, PUC ವಿದ್ಯಾರ್ಹತೆ: 15,000 ಸಂಬಳ

ಮಾ.5 ರಂದು ಜಿಲ್ಲೆಯ ಹನುಮಂತಪ್ಪ ವೃತ್ತದ ಬಳಿಯ ನಲ್ಲೂರು ಮಠದ ವಿವಾದಿತ ಜಾಗದಲ್ಲಿ ಮುಸ್ಲಿಂ ಸಮುದಾಯವರು ಏಕಾಏಕಿ ಹೋಟೆಲ್, ಅಂಗಡಿಗಳನ್ನು ತೆರವು ಮಾಡಿದ್ದರು. ಈ ಹಿನ್ನೆಲೆ ವಕ್ಫ್ ಅಧಿಕಾರಿ ಸೇರಿ 14 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ರಾಜ್ಯ ವಕ್ಫ್ ಬೋರ್ಡ್ ಸಿಇಓ ಜೀಲಾನಿ ಹೆಚ್ ಮೊಕಾಶಿಯವರು ಚಿಕ್ಕಮಗಳೂರು ಜಿಲ್ಲಾ ವಕ್ಫ್ ಅಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ತೆರವು ಕಾರಣ ಕೇಳಿ ನೋಟಿಸ್ ನೀಡಿದ್ದರು ನಿರ್ಲಕ್ಷ್ಯ:
ಜಿಲ್ಲಾಡಳಿತ, ನಗರಸಭೆ, ಪೊಲೀಸ್ ಇಲಾಖೆಯ ಅನುಮತಿ ಪಡೆಯದೆ ಏಕಾಏಕಿ ಮನೆ ಹಾಗೂ ಅಂಗಡಿಯನ್ನು ತೆರವು ಮಾಡಿದ್ದ ಸಂಬಂಧ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಕಾರಣ ಕೇಳಿ ನೋಟಿಸ್ ನೀಡಿದ್ದರು. ಅಲ್ಲದೆ ವಕ್ಫ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ಪಿ ವಿಕ್ರಮ್ ಆಮ್ಟೆ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಹೀಗಾಗಿ ರಾಜ್ಯ ವಕ್ಫ್ ಬೋರ್ಡ್ ಸಿಇಓ ಚಿಕ್ಕಮಗಳೂರು ಜಿಲ್ಲಾ ವಕ್ಫ್ ಅಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಜನವರಿ, ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣ ಕ್ಲೀಯರ್!; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ
ಪ್ರಕರಣ ಏನು?:
ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಬಳಿಯ ಮಠದ ಜಾಗವನ್ನು ಬಡಾಮಕಾನ್ ಜಾಮಿಯ ಮಸೀದಿ ಕಮಿಟಿಯ ಸದಸ್ಯರು ಕೋರ್ಟ್ ಆದೇಶವಿದೆ ಎಂದು ಸ್ಥಳೀಯ ಆಡಳಿತದ ಗಮನಕ್ಕೆ ತರದೆ ತೆರವು ಮಾಡಿದ್ದರು.
250ಕ್ಕೂ ಹೆಚ್ಚು ಅನ್ಯಕೋಮಿನ ಯುವಕರು ನಗರಸಭೆ ಗಮನಕ್ಕೆ ತರದೆ ಜೆಸಿಬಿ ತಂದು ಮಾ.5 ರಂದು ಬೆಳ್ಳಂಬೆಳಗ್ಗೆ ಮನೆ, ಹೋಟೆಲ್ ಹಾಗೂ ಕಟ್ಟಡವನ್ನ ತೆರವು ಮಾಡಿದ್ದರು. ಈ ಬಗ್ಗೆ ನಲ್ಲೂರು ಮಠದ ಗ್ರಾಮಸ್ಥರು, ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ನಲ್ಲೂರು ಮಠದ ಕುಟುಂಬಸ್ಥರು ಹಾಗೂ ಹೋಟೆಲ್ ಮಾಲೀಕರು ನಗರದ ಬಸವನಹಳ್ಳಿ ಠಾಣೆಗೆ ದೂರು ನೀಡಿದ್ದು, ವಕ್ಫ್ ಬೋರ್ಡ್ ಅಧಿಕಾರಿ ಸೇರಿ ಜಾಮೀಯ ಮಸೀದಿ ಕಮಿಟಿಯ 14 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ನಲ್ಲೂರು ಮಠದ ಕುಟುಂಬಸ್ಥರು ನಮ್ಮ ಮನೆ ತೆರವು, ತಮ್ಮ ಆಸ್ತಿಗೆ ಅಕ್ರಮ ಪ್ರವೇಶ ಹಾಗೂ ಆಸ್ತಿ ಹಾನಿಯಾಗಿದೆ ಎಂದು ದೂರು ನೀಡಿದ್ದರು. ಮಠದ ಕುಟುಂಬಸ್ಥರ ದೂರಿನ ಅನ್ವಯ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಅಡುಗೆಮನೆಯಲ್ಲಿ ಈ 2 ಪಾತ್ರೆಗಳನ್ನ ಉಲ್ಟಾ ಇಡಬೇಡಿ!; ಲಕ್ಷ್ಮಿ ಮುನಿಸಿಗೆ ನೀವು ಬಡವರಾಗ್ತೀರಿ!
ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ವಿಸ್ತರಣೆ:
ದ04/03/2025 ಮದ್ಯರಾತ್ರಿ 12:00 ಗಂಟೆಯಿಂದ ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನು ದಿ:10.03.2025 ರಂದು ಮದ್ಯರಾತ್ರಿ 12.00 ಗಂಟೆಯಿಂದ 24.03.2025 ರ ಮದ್ಯರಾತ್ರಿ 12.00 ಗಂಟೆಯ ವರೆಗೆ 14 ದಿವಸಗಳ ಕಾಲ ಬಡಮಕಾನ್ ದರ್ಗಾವನ್ನು ಹೊರತುಪಡಿಸಿ ಅದರ ಪಕ್ಕದಲ್ಲಿ ಇರುವ ವಿವಾಧಿತ ಸ್ಥಳಕ್ಕೆ ಯಾರೂ ಕೂಡಾ ಪ್ರವೇಶ/ಕಟ್ಟಡ ನಿರ್ಮಾಣ/ತೆರವು ಮತ್ತು ಪ್ರತಿಭಟನೆ ಹಾಗೂ ಯಾವುದೇ ರೀತಿಯ ಚಟುವಟಿಕೆಯನ್ನು ಮಾಡದಂತೆ ನಿಷೇಧಾಜ್ಞೆಯನ್ನು ವಿಸ್ತರಿಸಿದೆ.












