ನುಗ್ಗೇಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ವಾಹನವೊಂದಕ್ಕೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, ಒಬ್ಬ ಗಾಯಗೊಂಡ ಘಟನೆ ನವಿಲೆ ಗ್ರಾಮದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಕಾಳೇನಹಳ್ಳಿ ಗ್ರಾಮದ ಪ್ರದೀಪ (19), ಅರುಣ್ (20) ಮೃತಪಟ್ಟವರು. ಉತ್ತರ ಪ್ರದೇಶದ ನರೇಶ್ (40) ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನವಿಲೆ ಗ್ರಾಮದಲ್ಲಿ ಶುಂಠಿ ಕೆಲಸ ಮುಗಿಸಿ ಹಿರೀಸಾವೆಗೆ ಹೋಗುವ ಮಾರ್ಗದಲ್ಲಿ ಚನ್ನರಾಯಪಟ್ಟಣ- ತಿಪಟೂರು ಮುಖ್ಯ ರಸ್ತೆಯಲ್ಲಿ ಬರುವ ಅಗ್ರಹಾರ ಬೆಳಗುಲಿ ಗೇಟ್ ಬಳಿ ಅಪಘಾತ ಸಂಭವಿಸಿದೆ. ಪೊಲೀಸ್ ಠಾಣೆ ಪಿಎಸ್‌ಐ ಭಾರತ್ ರೆಡ್ಡಿ ಸ್ಥಳ ಪರಿಶೀಲನೆ ನಡೆಸಿದರು. ನುಗ್ಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















