ಪ್ರವಾಸಿಗರ ಗಮನಕ್ಕೆ : ನ.4 ರಿಂದ ಮೂರು ದಿನ ಚಿಕ್ಕಮಗಳೂರಿನ ಈ ಪ್ರವಾಸಿ ತಾಣಕ್ಕೆ ಪ್ರವೇಶ ನಿರ್ಬಂಧ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡು ಚಿಕ್ಕಮಗಳೂರಿನಲ್ಲಿರುವ ಪ್ರವಾಸಿಗರ ನೆಚ್ಚಿನ ತಾಣ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ನವೆಂಬರ್ 4 ರಿಂದ 3 ದಿನ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

 

ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ, 15ನೇ ಕಂತಿನ ಹಣ ಈ ದಿನ ಬರಲಿದೆ; ಅರ್ಜಿ ಸಲ್ಲಿಸುವುದು ಹೇಗೆ?; ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ

ಹೌದು, ದತ್ತಮಾಲಾ ಅಭಿಯಾನ ಹಿನ್ನೆಲೆ ನವೆಂಬರ್ 4 ರಿಂದ 6 ವರೆಗೆಗೆ ದತ್ತಪೀಠ, ಮಾಣಿಕ್ಯಧಾರ, ಸೀತಾಳಯ್ಯನಗಿರಿ, ಹೊನ್ನಮ್ಮನಹಳ್ಳ, ಗಾಳಿಕೆರೆಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅ.30 ರಿಂದ ನ.5 ರವರೆಗೆ ದತ್ತಮಾಲಾ ಅಭಿಯಾನ ನಡೆಯಲಿದ್ದು, ಸಾವಿರಾರು ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಲಿದ್ದಾರೆ. ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತದಿಂದ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

 

ಇದನ್ನೂ ಓದಿ; ಕೃಷಿಕರಿಗೆ ಸಿಹಿ ಸುದ್ದಿ..!; ಕೇಂದ್ರದಿಂದ ರಸಗೊಬ್ಬರಕ್ಕೆ ಸಬ್ಸಿಡಿ ಅನುಮೋದನೆ; ಈ ತಿಂಗಳ ವರೆಗೆ ಸಬ್ಸಿಡಿ ಲಭ್ಯ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬಾಬಾ ಬುಡನ್ನಿರಿ ಬೆಟ್ಟಸಾಲಿನಲ್ಲಿರುವ ಒಂದು ಶಿಖರ. 1923 ಮೀಟರ್ (6317 ಅಡಿ) ಎತ್ತರದಲ್ಲಿರುವ ಮುಳ್ಳಯ್ಯನ ಗಿರಿ ಕರ್ನಾಟಕದ ಅತ್ಯುನ್ನತ ಪರ್ವತ ಶಿಖರವಾಗಿದೆ.

 

Chikkamagaluru: ಅರಣ್ಯಾಧಿಕಾರಿ ಕುತ್ತಿಗೆಯಲ್ಲೇ ಹುಲಿ ಉಗುರಿನ ಡಾಲರ್, ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯ

ಕಳಸ: (ನ್ಯೂಸ್ ಮಲ್ನಾಡ್ ವರದಿ) ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ನಡೆದಿದೆ. ಅರಣ್ಯ ರಕ್ಷಕರು, ವನ್ಯಜೀವಿ ರಕ್ಷಕರು ಎಂದು ಹೇಳಿಕೊಳ್ಳುವ ಅರಣ್ಯ ಅಧಿಕಾರಿಯೊಬ್ಬ ಹುಲಿ ಉಗುರು ಆರೋಪ ಎದುರಿಸುತ್ತಿದ್ದಾನೆ.

 

ಹುಲಿ ಉಗುರು ಧರಿಸಿದ ಆರೋಪದ ಹಿನ್ನಲೆ ಕಳಸದ ಡಿಆರ್‌ಎಫ್‌ಓ ದರ್ಶನ್ ಎಂಬಾತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ದಾಖಲು ಮಾಡಲಾಗಿದೆ. ದರ್ಶನ್ ಹುಲಿಯ ಉಗುರಿನ ಡಾಲರ್ ಧರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶೋಕಿ ಮಾಡಿದ್ದ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ದರ್ಶನ್ ಫೋಟೋ ಡಿಲಿಟ್ ಮಾಡಿದ್ದಾನೆ.

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಮೂಲದ ದರ್ಶನ್ ವಿರುದ್ಧ ಈಗ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿಬಂದಿದೆ. ಹೀಗಾಗಿ ದರ್ಶನ್ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ದೂರು ನೀಡಲಾಗಿದೆ. ಆಲ್ದೂರು ವಲಯ ಅರಣ್ಯಾಧಿಕಾರಿಗೆ ಅರೆನೂರು ಗ್ರಾಮದ ಸುಪ್ರೀತ್, ಅಬ್ದುಲ್ ಎಂಬುವವರಿಂದ ದೂರು ದಾಖಲಾಗಿದೆ.

ಕಾನೂನು ಎಲ್ಲರಿಗೂ ಒಂದೇ. ಸಂತೋಷ್, ಮಾರ್ಕಂಡೇಯ ದೇವಸ್ಥಾನದ ಅರ್ಚಕರು ಸೇರಿದಂತೆ ಅಮಾಯಕರ ಮೇಲೆ ಕ್ರಮ ಕೈಗೊಳ್ಳುವ ಅರಣ್ಯ ಇಲಾಖೆಯವರು ಆರ್‌ಎಫ್‌ಒ ದರ್ಶನ ಮೇಲೆಯೂ ಕ್ರಮ ತೆಗೆದುಕೊಳ್ಳಬೇಕು ಎಂದು ದೂರುದಾರ ಸುಪ್ರೀತ್ ತಿಳಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.