ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೊಪ್ಪದಲ್ಲಿ ಆಗಸ್ಟ್ 15ರಂದು ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಶ್ರೀ ವಿದ್ಯಾಪೀಠ ಸಂವರ್ಧನ ಪ್ರತಿಷ್ಠಾನ, ಶ್ರೀ ಜಗದ್ಗುರು ಬದರೀ ಶಂಕರಾಚಾರ್ಯ ಸಂಸ್ಥಾನಮ್–ಶ್ರೀ ಕ್ಷೇತ್ರ ಶಕಟಪುರಂ, ಶ್ರೀಶ್ರೀ ಕೃಷ್ಣಾನಂದತೀರ್ಥ ಮಹಾಸ್ವಾಮಿಗಳ ಪೂರ್ಣಾನುಗ್ರಹದೊಂದಿಗೆ ಈ ಶಿಬಿರ ನಡೆಯಲಿದೆ.

ರೋಟರಿ ಕ್ಲಬ್–ಕೊಪ್ಪ, ರೋಟರಿ ಸಮುದಾಯ ದಳ–ಹರಿಹರಪುರ, ಪ್ರಶಮನೀ ಆಸ್ಪತ್ರೆ–ಕೊಪ್ಪ, ಲಯನ್ಸ್ ಕ್ಲಬ್–ಕೊಪ್ಪ, ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ–ಕೊಪ್ಪ, ವಿಪ್ರ ಮಹಿಳಾ ವೇದಿಕೆ–ಕೊಪ್ಪ, ರೋಟರಿ ಮಿಡ್‌ಟೌನ್ ರಕ್ತನಿಧಿ–ಶಿವಮೊಗ್ಗ, ಪ್ರಶಮನೀ ಚಾರಿಟೇಬಲ್ ಟ್ರಸ್ಟ್–ಕೊಪ್ಪ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಆಗಸ್ಟ್ 15, 2026ರಂದು ಬೆಳಗ್ಗೆ 9.00ರಿಂದ ಮಧ್ಯಾಹ್ನ 1.00ರವರೆಗೆ ಕೊಪ್ಪದ ಪ್ರಶಮನಿ ಆಸ್ಪತ್ರೆಯಲ್ಲಿ ನಡೆಯಲಿದೆ.

ಸಂಘಟಕರು ಆರೋಗ್ಯವಂತ ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ. ರಕ್ತದಾನದಿಂದ ಅಪಘಾತ, ತುರ್ತು ಚಿಕಿತ್ಸೆಗಳು ಹಾಗೂ ವಿವಿಧ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯವಿರುವ ರಕ್ತ ಸಂಗ್ರಹಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಡಾ. ಉದಯಶಂಕರ ಹೆಚ್.ಜಿ. ಅವರನ್ನು 9448156984 ಹಾಗೂ 9380929325 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ.













