ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಇದೀಗ ಶವವಾಗಿ ಪತ್ತೆಯಾಗಿದ್ದಾನೆ.
ಇದನ್ನೂ ಓದಿ: 60% ಅಂಕ ಪಡೆದ ವಿದ್ಯಾರ್ಥಿಗಳಿಗೆ 50,000 ಸ್ಕಾಲರ್ ಶಿಪ್

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಹೊನ್ನೆತಾಳು ಗ್ರಾಮ ಪಂಚಾಯತ್ ಚಂಗಾರು ಗ್ರಾಮದ ರಮೇಶ (56) ಕಳೆದ ಮೂರು ದಿನದ ಹಿಂದೆ ನಾಪತ್ತೆಯಾಗಿದ್ದರು. ಸಂಬಂಧಿಕರು ಆಗುಂಬೆ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರ ಮೇಲೆ ಹುಡುಕಲು ಪ್ರಾರಂಭಿಸಿದ ಪೊಲೀಸರಿಗೆ ಇಂದು ರಮೇಶ ಚಂಗಾರು ಗ್ರಾಮದ ಹೊಸಪೇಟೆಯ ಕಲ್ಲು ಗುಡ್ಡದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಈ ಸಾವಿನ ಕುರಿತು ಪೊಲೀಸ್ ತನಿಖೆ ವೇಳೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಇದನ್ನೂ ಓದಿ: ರಾಜ್ಯದ ರೈತರಿಗೆ ಎಚ್ಚರಿಕೆ; ಪಿಎಂ ಕಿಸಾನ್ ಹಣ 110 ಕೋಟಿ ವಂಚನೆ!












