ಮೂಡಿಗೆರೆ: ಪತ್ರಕರ್ತರ ಕೊಡುಗೆ ಅಪಾರ, ಅವಹೇಳನಕಾರಿ ಬರವಣಿಗೆ ಸಹಿಸಲ್ಲ – ಪುನೀತ್ ಕಡಿದಾಳು

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಪತ್ರಕರ್ತರು ಸಮಾಜದ ಆಸ್ತಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಪತ್ರಕರರಿಗೆ ನೋವುಂಟು ಮಾಡುವ ಪದ ಬಳಕೆ ಸಹಿಸಲ್ಲ ಎಂದು ಯುವ ಪತ್ರಕರ್ತ ಪುನೀತ್ ಕಡಿದಾಳು ತಿಳಿಸಿದ್ದಾರೆ.

ವಿಶ್ವ ಕರ್ಮ ಕುಟುಂಬ ಎಂಬ ವಾಟ್ಸ್ ಆಪ್ ಗುಂಪಿನಲ್ಲಿ ವ್ಯಕ್ತಿಯೋರ್ವ ಪತ್ರಕರ್ತರು ಬರೆದ ಸುದ್ದಿಯನ್ನು ಸುಳ್ಳು ಸುದ್ದಿ ಎಂದು ಬಿಂಬಿಸಿದಲ್ಲದೆ ಇಂತಹ ಪತ್ರಕರ್ತರು ಸಮಾಜಕ್ಕೆ ದುರಂತ ಎಂದು ಬರೆದು ಅವಮಾನಿಸಿದ ಹಿನ್ನಲೆ ಇಂತಹ ಕಿಡಿಗೇಡಿಗಳು ಸಮಾಜಕ್ಕೆ ಮಾರಕ ಎಂದರು

ತಮ್ಮ ಕುಟುಂಬದ ಕೆಲಸ ಬಿಟ್ಟು ಸಮಾಜಕ್ಕಾಗಿ ದುಡಿಯುತ್ತಿರುವ ಪತ್ರಕರ್ತರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಸಮಾಜದಲ್ಲಿ ಯಾವುದೊ ಮೂಲೆಯಲ್ಲಿ ಸಮಸ್ಸೆಯ ಬಗ್ಗೆ ದಾಖಲಾತಿ ಸಮೇತ ಸುದ್ದಿ ಮಾಡಿ ಸಮಾಜದ ಜನಪ್ರತಿನಿದಿಗಳ ಗಮನ ಸೆಳೆಯುವ ಪತ್ರಕರ್ತರು ತಮ್ಮ ವೈಯಕ್ತಿಕ ಜೀವನ ಬದಿಗಿಡಿಸಿ ಕಾರ್ಯ ನಿರ್ವಹಿಸುತ್ತಿದ್ದು ಅವಮಾನಿಸಿದರೆ ಸರಿಯಲ್ಲ ಎಂದು ಗುಡುಗಿದರು
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಕೇಳುವ ಹಕ್ಕಿದೆ ಆದರೆ ನೋವುಂಟು ಆಗುವ ರೀತಿಯಲ್ಲಿ ಕೇಳಲು, ಮನಬಂದಂತೆ ಸಂಪೂರ್ಣ ವಿಚಾರ ತಿಳಿಯದೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದು ಸರಿಯಲ್ಲ ಎಂದರು.

ವಿಶ್ವಕರ್ಮ ಸಮಾಜದ ಬಗ್ಗೆ ಆಪಾರ ಗೌರವವಿದೆ ಇಂತಹ ವೈಯುಕ್ತಿಕ ಲಾಭಕ್ಕಾಗಿ ಸಂಘಟನೆ ಬಳಸಿಕೊಳ್ಳುವ ವ್ಯಕ್ತಿಗಳನ್ನು ಸಂಘಟನೆಯಿಂದ ಹಾಗೂ ಗುಂಪಿನಿಂದ ದೂರವಿಡಬೇಕು ಎಂದರು

ವಿಶ್ವ ಕರ್ಮ ಕುಟುಂಬ ಎಂಬ ವಾಟ್ಸ್ ಗುಂಪಿನಲ್ಲಿ ಸಮಾಜದ ಅಂಗವಾಗಿ ದುಡಿಯುತ್ತಿರುವ ಪತ್ರಿಕಾ ರಂಗದ ಬಗ್ಗೆ ಪತ್ರಕರ್ತರ ಕುರಿತು ಹಗುರವಾಗಿ ಮಾತಾನಾಡುವರ ವಿರುದ್ದ ಸಂಘಟನೆ ಪ್ರಮುಖರು ಸೂಕ್ತ ಕ್ರಮ ಕೈಗೊಳ್ಳಬೇಕು

ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪತ್ರಕರ್ತರನ್ನು ಅವಹೇಳನಕಾರಿ ಹಾಗೂ ಅವಮಾನಿಸುವ ಹೇಳಿಕೆಗಳನ್ನು ಹರಿಬಿಡುತ್ತಿರುವುದು ತೀವ್ರ ಖಂಡನೀಯ ಎಂದು ಯುವ ಪತ್ರಕರ್ತರಾದ ಪುನೀತ್ ಕಡಿದಾಳು ತಿಳಿಸಿದ್ದಾರೆ.

ಪತ್ರಕರ್ತರು ಸಮಾಜವನ್ನು ಸಮಾನತೆ, ಸಹಬಾಳ್ವೆ ಮತ್ತು ಮಾನವೀಯತೆಯ ತತ್ವಾದರ್ಶಗಳ ಜೊತೆಗೆ ನ್ಯಾಯಯುತವಾಗಿ ಸರ್ವ ಧರ್ಮಗಳನ್ನು ಸಂಘ ಸಂಸ್ಥೆ ಗಳನ್ನು ಸಮನಾಗಿ ಗೌರವಿಸಿಕೊಂಡು ಬಂದಿರುವ ಪತ್ರಿಕಾ ಬಳಗದ ಸಮುದಾಯದ ಬಗ್ಗೆ ಕೀಳುಮಟ್ಟದ ಪದಗಳನ್ನು ಬಳಸಿ ಸಮಾಜದ ಘನತೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಿರುವುದು ಪತ್ರಕರ್ತರ ಭಾವನೆಗಳಿಗೆ ಗಂಭೀರ ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.

ಇಂತಹ ಘಟನೆಗಳಿಂದ ತೀವ್ರ ಅಸಮಾಧಾನ ಮತ್ತು ಬೇಸರಕ್ಕೆ ಕಾರಣವಾಗಿದೆ. ಇಂತಹ ನೀಚ ಮನಸ್ಥಿತಿ ಇರುವ ವ್ಯಕ್ತಿಗಳಿಂದ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಸಮಾಜಗಳ ನಡುವೆ ದ್ವೇಷ ಮತ್ತು ವೈಮನಸ್ಸು ಸೃಷ್ಟಿಸುವ ಪ್ರಯತ್ನಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ತಿಳಿಸಿದರು. (ವರದಿ- ತನು ಕೊಟ್ಟಿಗೆಹಾರ)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.