ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಮತ್ತು ಕಾನೂನು ತರಬೇತಿ ಕಾರ್ಯಾಗಾರ

ಕಳಸ: (ನ್ಯೂಸ್ ಮಲ್ನಾಡ್ ವರದಿ) ಶುದ್ಧ ವರದಿ ಪತ್ರಿಕಾ ದೇವತೆಗೆ ಸಲ್ಲಿಸುವ ಸೇವೆಯಾಗಬೇಕು. 1843 ರಲ್ಲಿ ಬ್ರಿಸಲ್ ಕಿಷಲ್ ಅವರ ಸಮಾಚಾರ ಪತ್ರಿಕೆ ಪ್ರಾರಂಭವಾಗಿದ್ದು, ಆ ಕಾಲಘಟ್ಟದಲ್ಲಿ ತನ್ನದೆ ಆದ ವೈಶಿಷ್ಟತೆ, ಜವಾಬ್ದಾರಿ ಮತ್ತು ಗುರಿಯನ್ನು ಹೊಂದಿತ್ತು ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಹೇಳಿದರು.


ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ


ಶನಿವಾರ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಹೊರನಾಡಿನಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಕಾನೂನು ತರಬೇತಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸ್ವಾತಂತ್ರ‍್ಯ ಪೂರ್ವದಲ್ಲಿ ಹುಟ್ಟಿಕೊಂಡ ಪತ್ರಿಕಾ ಮಾಧ್ಯಮ ಅಹಿಂಸಾವಾದವನ್ನು ಇಟ್ಟುಕೊಂಡು ಈ ದೇಶಕ್ಕೆ ಸ್ವಾತಂತ್ರ‍್ಯವನ್ನು ತಂದುಕೊಡುವಲ್ಲಿ ಪತ್ರಿಕಾ ಮಾದ್ಯಮ ಮಹತ್ತರ ಪಾತ್ರವನ್ನು ವಹಿಸಿದೆ ಎಂದರು.


ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ


ಪತ್ರಿಕೆ ಕೊಡುವ ವಿಚಾರಧಾರೆ ಅದು ವ್ಯಕ್ತಿಗೆ ಅಥವಾ ಸಮಾಜಕ್ಕೆ ಬದಲಾವಣೆಗೆ ಬೆಳಕಾಗಬೇಕು. ವರದಿಗಾರರ ಕೈಗೆ ಸಿಕ್ಕಿರುವಂತ ಅವಕಾಶ ಅದು ಶ್ವೇಸ್ವಚಾರ ಆಗಬಾರದು. ಅದು ರಂಗಕ್ಕೆ ಆಪಾಯವಾಗುತ್ತದೆ ರಂಗಕ್ಕೆ ಅಪಾಯವಾದರೆ ಅದು ಸಮಾಜಕ್ಕೆ, ಈ ದೇಶಕ್ಕೆ ಆಪಾಯವಾಗುತ್ತದೆ. ಯಾವುದೇ ವರದಿಯನ್ನು ಮಾಡುವಾಗ ಅದು ವರದಿಗಾರನ ಅಂತರಂಗ ಮೊದಲು ತೃಪ್ತಿಯಾಗುವಂತೆ ಇರಬೇಕು ಎಂದರು. ಹಾಗೆಯೇ ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ. ಶೃಂಗೇರಿ ಮತ್ತು ಅಜ್ಜಂಪುರದಲ್ಲಿ ಪತ್ರಿಕಾ ಕಟ್ಟಡಕ್ಕೆ ಸಹಾಯಧನ ಹಾಗೂ ಪ್ರತಿ ವರ್ಷ ಒಬ್ಬ ಉತ್ತಮ ಪತ್ರಕರ್ತನನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದರು.

ಹೊರನಾಡು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ರಾಮನಾರಾಯಣ ಜೋಷಿ ಮಾತನಾಡಿ, ಈ ದೇಶದ ಪ್ರಜಾಪ್ರಭುತ್ವ ಉಳಿಯಬೇಕಾದರೆ ಪತ್ರಿಕಾ ಮಾಧ್ಯಮ ಗಟ್ಟಿಯಾಗಬೇಕು. ಸಮಾಜದಲ್ಲಿ ಎಲ್ಲಿ ಯಾವುದು ತಪ್ಪು ಆಗುತ್ತಿದೆಯೋ ಅದನ್ನು ಪತ್ರಕರ್ತರು ಖಂಡಿಸಿ ಬರೆಯಬೇಕು ಎಂದರು.


ಇದನ್ನೂ ಓದಿ: ಮಳೆಯಿಂದ ಮನೆ ಹಾನಿ ಆಗಿದ್ಯಾ?;ಹಾಗಾದ್ರೆ ಈ ಯೋಜನೆಯಲ್ಲಿ ಸಿಗುತ್ತೆ ಮನೆ


ಇನ್ನು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಶ್ರೀ ಹನುಮಂತಪ್ಪ ಮಾತನಾಡಿ, ನೂತನವಾಗಿ ಭಾರತ ನ್ಯಾಯ ಸಂಹಿತೆ ಜಾರಿಗೊಂಡಿದ್ದು ಶಿಕ್ಷೆಯ ಪ್ರಮಾಣ ಅದರ ಉದ್ದೇಶಗಳು ಯಾತಾವತ್ತಾಗಿದ್ದು ದಂಡದ ಪ್ರಮಾಣ ಹೆಚ್ಚಿಸಲಾಗಿದೆ. ಡಿಜಿಟಲ್ ಸಾಕ್ಷಿಗಳನ್ನು ಬದಲಾದ ಕಾನೂನಿನಲ್ಲಿ ಪರಿಗಣಿಸುತ್ತಿದ್ದು ಪತ್ರಕರ್ತರು ಸುದ್ದಿ ಮಾಡುವಾಗ ಜಾಗೃತಿಯಿಂದ ಸುದ್ದಿ ಪ್ರಸಾರ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದು ಪತ್ರಕರ್ತರು ನಮ್ಮೊಂದಿಗೆ ಸಹಕರಿಸಿ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರಮ, ಆಯುಷ್ಠಾನ್ ಕಾರ್ಡ್, ಯಶಸ್ವಿನಿ, ಖಾಸಗಿ ರಿಯಾಯಿತಿ ಬಸ್ ಪಾಸ್, 100 ಜನ ಪತ್ರಕರ್ತರ ನೇತ್ರದಾನ ನೋಂದಾಣಿ ಪತ್ರ, ಪತ್ರಕರ್ತರ ಮಕ್ಕಳಿಗೆ ಸ್ಕಾಲರ್ ಶೀಪ್, ಕೋವಿಡ್ ವಾರಿಯಾರ್ ಗೆ ಪ್ರಮಾಣ ಪತ್ರ, ಸಂಘದ ಗುರುತಿನ ಚೀಟಿಯನ್ನು ವಿತರಿಸಲಾಯಿತು.


ಇದನ್ನೂ ಓದಿ: ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್; ಕೃಷಿ ಹೊಂಡ, ತಂತಿ ಬೇಲಿಗೆ ಶೇ. 50ರಷ್ಟು ಸಬ್ಸಿಡಿ


ಕಾರ್ಯಕ್ರಮದಲ್ಲಿ ಹೊರನಾಡು ದೇವಸ್ಥಾನದ ಟ್ರಸ್ಟಿಗಳಾದ ರಾಜಲಕ್ಷ್ಮಿ ಜೋಷಿ, ರಾಜಗೋಪಾಲ ಜೋಷಿ, ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್, ಭೂಮಿಕ ವಾಹಿನಿಯ ವ್ಯವಸ್ಥಾಪಕರಾದ ಅನಿಲ್ ಆನಂದ್, ಕಿಬ್ಲಿ ಪ್ರಸನ್ನ ಇತರರು ಇದ್ದರು.

ಹಿರಿಯ ಪತ್ರಕರ್ತರ ದಾರಿಯಲ್ಲಿ ನಡೆದು ಬಂದ ಜಿಲ್ಲಾ ಸಂಘವು ಇದೀಗ ಹೆಮ್ಮರವಾಗಿ ಬೆಳೆದು ನಿಂತಿದ್ದು, ಹತ್ತು ಹಲವು ಜನಪರ ಕಾರ್ಯಗಳು ಮಾಡಿಕೊಂಡು ಬರುತ್ತಿದೆ. ಇಂದು ಜಿಲ್ಲೆಯಲ್ಲಿ ಅನೇಕ ಜಿಲ್ಲಾ ಮಟ್ಟದ ಪತ್ರಿಕೆಗಳು, ರಾಜ್ಯಮಟ್ಟದ ಪತ್ರಿಕೆಗಳು ಹುಲಸಾಗಿ ಬೆಳೆದು ನಿಂತಿದೆ. ಆದರೆ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಗ್ರಾಮೀಣ ಪತ್ರಕರ್ತರು ಹಲವು ಸೌಲಭ್ಯದಿಂದ ವಂಚಿತರಾಗಿದ್ದು, ಬಂದಂತಹ ಸರ್ಕಾರಗಳ ಬೇಡಿಕೆಗಳು ನೆನೆಗುದಿಗೆ ಬಿದ್ದಿದ್ದು, ಸೌಲಭ್ಯ ನೀಡುವಲ್ಲಿ ಹಿಂದೆ ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಸಂಘವು ಪತ್ರಕರ್ತರಿಗೆ 10 ಹಲವು ಕಾರ್ಯಕ್ರಮ ಮಾಡಿಕೊಂಡು ಒಂದಿಷ್ಟು ಸೇವೆಯನ್ನು ಮಾಡಿಕೊಂಡು ಬರುತ್ತಿದೆ. – ಜಿ. ಎಂ ರಾಜಶೇಖರ, ಅಧ್ಯಕ್ಷರು ಜಿಲ್ಲಾ ಪತ್ರಕರ್ತರ ಸಂಘ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.