ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದ ರೈತರ ಸಮಸ್ಯೆಗಳ ಕುರಿತು ಶನಿವಾರ ಮಲೆನಾಡು ರೈತ ಹಿತರಕ್ಷಣಾ ಸಮಿತಿ ಕರೆ ನೀಡಿರುವ ಶೃಂಗೇರಿ ಕ್ಷೇತ್ರ ಬಂದ್ ಗೆ ಮೂರು ತಾಲೂಕಿನ (ಶೃಂಗೇರಿ, ಕೊಪ್ಪ, ಎನ್. ಆರ್. ಪುರ) ವರ್ತಕರ ಸಂಘ ಸಂಪೂರ್ಣ ಬೆಂಬಲ ಸೂಚಿಸಿದೆ.
ಇದನ್ನೂ ಓದಿ: ರಾಜ್ಯದ ರೈತರಿಗೆ ಗುಡ್ ನ್ಯೂಸ್; ಈ ದಿನ ಬೆಳೆ ಪರಿಹಾರದ ಹಣ ಜಮಾ!; ರೈತರೇ ಮಿಸ್ ಮಾಡ್ದೆ ಈ ಸುದ್ದಿ ಓದಿ

ರೈತ ವಿರೋಧಿ ಕಾಯ್ದೆ ವಿರೋಧಿಸಿ ನಾಳೆ (17.08.2024) ಶನಿವಾರದಂದು ಶೃಂಗೇರಿ ಕ್ಷೇತ್ರ ಬಂದ್’ಗೆ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಬಂದ್ ಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಬೆಂಬಲ ಸೂಚಿಸಿದ್ದವು ಇದೀಗ ಮೂರು ತಾಲೂಕಿನ ವರ್ತಕರ ಸಂಘವೂ ಸಂಪೂರ್ಣ ಬೆಂಬಲ ಸೂಚಿಸಿದೆ.
ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್; ಇಂತಹವರ ರೇಷನ್ ಕಾರ್ಡ್ ರದ್ದು, ದಂಡದ ಜೊತೆ ಕ್ರಿಮಿನಲ್ ಕೇಸ್ ದಾಖಲು
ಬಂದ್ ಹಿನ್ನೆಲೆ ಏನಿರುತ್ತೆ?, ಏನಿರಲ್ಲ?:
* ಆಸ್ಪತ್ರೆ, ಮೆಡಿಕಲ್ ಸ್ಟೋರ್, ಪೇಪರ್ – ಹಾಲು, ಆಂಬುಲೆನ್ಸ್, ಪೋಸ್ಟ್ ಆಫೀಸ್, ATM ಗಳು ಎಂದಿನಂತೆ ಲಭ್ಯವಿರುತ್ತದೆ.
* ಅಂಗಡಿ ಮುಂಗಟ್ಟುಗಳು, ಬಸ್ ಸೇವೆಗಳು, ಶಾಲಾ ಕಾಲೇಜುಗಳು, ಶಾಲಾ ಖಾಸಗಿ ವಾಹನಗಳು, ವೈನ್ಸ್, ಬಾರ್ & ರೆಸ್ಟೋರೆಂಟ್, ಬ್ಯಾಂಕ್, ಆಟೋ ಹಾಗೂ ಟ್ಯಾಕ್ಸಿ, ಲಾರಿ, ಟೆಂಪೋ, ಗೂಡ್ಸ್ ವಾಹನಗಳು, ಹೋಟೆಲ್, ಚಿತ್ರಮಂದಿರ, ಜಿಮ್, ಲಾಡ್ಜ್, ಬೀದಿ ಬದಿ ವ್ಯಾಪಾರ ಬಂದ್ ಇರುತ್ತದೆ. (ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲವು ಸಂಪೂರ್ಣ ಬಂದ್ ಆಗಿರುತ್ತದೆ.)
ಇದನ್ನೂ ಓದಿ: ಕೃಷಿ ಭಾಗ್ಯ ಯೋಜನೆಯಲ್ಲಿ ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ; ಶೇ. 80 ರಿಂದ ಶೇ.90% ರಷ್ಟು ಸಹಾಯಧನ












