ಕೊಪ್ಪದ ಮೊರಾರ್ಜಿ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ: ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ವಾ…?, ಪೋಸ್ಟರ್ ಅಭಿಯಾನ

ಕೊಪ್ಪ: ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿವೊಬ್ಬಳು ಭಾನುವಾರ ಶೌಚಗೃಹದ ಬಾಗಿಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಆತ್ಮಹತ್ಯೆಗೆ ಆಡಳಿತಾತ್ಮಕ ವೈಫಲ್ಯದ ಕಾರಣವೆಂದು ಆರೋಪ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ನ್ಯಾಯ ಒದಗಿಸುವಂತೆ ಪೋಸ್ಟರ್‌ ಅಭಿಯಾನ ಆರಂಭಿಸಿದ್ದಾರೆ.


ಇದನ್ನೂ ಓದಿ: IBPS PO ನಲ್ಲಿ 5208 ಹುದ್ದೆಗಳ ನೇಮಕ; ಆಕರ್ಷಕ ಸಂಬಳ


“2023 ರಲ್ಲಿ ಅಮೂಲ್ಯ… 2025ರಲ್ಲಿ ಶಮಿತಾ… 2026ಕ್ಕೆ ಯಾರು ???…” ಎಂದು ಪೋಸ್ಟರ್ ಅಭಿಯಾನ
ಕಳೆದ ವರ್ಷ ಜು.27ರಂದು ವಿದ್ಯಾರ್ಥಿನಿಯೊಬ್ಬಳು ಶೌಚಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಳೆದ ವರ್ಷನೂ ಇದೇ ಜಾಗದಲ್ಲಿ.. ಇದೇ ರೀತಿ ಮತ್ತೊಬ್ಬ ವಿದ್ಯಾರ್ಥಿನಿಯೂ ನೇಣಿಗೆ ಶರಣಾಗಿದ್ದು.. ಕೊಪ್ಪದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏನಾಗ್ತಿದೆ..? ಯಾವ ಸಮಸ್ಯೆ ಕಾಡ್ತಿದೆ.? ಹೊಣೆ ಯಾರದ್ದು.? ತಪ್ಪು ಯಾರದ್ದು.? ಮಕ್ಕಳಿಗೆ ರಕ್ಷಣೆ ಇಲ್ವಾ ಎಂಬ ಅನುಮಾನ ಮೂಡಿದೆ ಎಂದು ಪೋಸ್ಟರ್‌ ಅಭಿಯಾನ ಆರಂಭಿಸಿದ್ದಾರೆ.

ಪೋಸ್ಟರ್‌ ನಲ್ಲಿ ಏನಿದೆ?:
“ಘಟನೆ ಬಗ್ಗೆ ಮಧ್ಯರಾತ್ರಿ 12 ಗಂಟೆಗೆ ಗೊತ್ತಾಗಿತ್ತು ಎಂದು ವಿದ್ಯಾರ್ಥಿಗಳು ಹಾಗೂ ಕೆಲವು ಸಿಬ್ಬಂದಿ ವರ್ಗದವರು ಹೇಳುತ್ತಾರೆ, ಕೆಲವು ಸಿಬ್ಬಂದಿ ವರ್ಗದವರು ಹೇಳುತ್ತಾರೆ ರಾತ್ರಿ 03 ಗಂಟೆಗೆ ಗೊತ್ತಾಗಿದೆ ಎ೦ದು!!!. ಆದರೆ ಪೋಷಕರಿಗೆ ತಿಳಿಸಿದ್ದು ಮಾತ್ರ ಬೆಳಗ್ಗಿನ ಜಾವ 06 ಗಂಟೆಗೆ..
ಇಷ್ಟುವಿಳ೦ಬ ಯಾಕಾಯಿತು?… ಸಾಕ್ಷಿ ನಾಶ ಮಾಡುವ ಹುನ್ನಾರವೇ???…
ಕೊಪ್ಪದ ಮೊರಾರ್ಜಿ ವಸತಿ ಶಾಲೆಗೆ ಸಂಬಂಧಪಟ್ಟ ಸಿಬ್ಬಂದಿ ವರ್ಗದವರೇ, ಅಧಿಕಾರಿಗಳೇ, ಜನಪ್ರತಿನಿದಿಗಳೇ ಉತ್ತರ ಕೊಡಿ…
ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ವಾ..????”

“2023 ರಲ್ಲಿ ಅಮೂಲ್ಯ…
2025ರಲ್ಲಿ ಶಮಿತಾ…
2026ಕ್ಕೆ ಯಾರು ???…
ಕೊಪ್ಪದ ಮೊರಾರ್ಜಿ ವಸತಿ ಶಾಲೆಗೆ ಸಂಬಂಧಪಟ್ಟ ಸಿಬ್ಬಂದಿ ವರ್ಗದವರೇ, ಅಧಿಕಾರಿಗಳೇ, ಜನಪ್ರತಿನಿದಿಗಳೇ ಉತ್ತರ ಕೊಡಿ…
ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ವಾ…????”

“2023 ರಲ್ಲಿ ಅಮೂಲ್ಯ…??? 2025ರಲ್ಲಿ ಶಮಿತಾ…????
7ರಿಂದ-8 ಶೌಚ ಗೃಹ ಒಟ್ಟಿಗೆ ಸರದಿ ಸಾಲಿನಲ್ಲಿ ಇದ್ದರೂ ಕೂಡ ಒ೦ದೇ ಶೌಚ ಗೃಹದ ಕಬ್ಬಿಣದ ರಾಡಿಗೆ (ಇಬ್ಬರು ಸಹ) ನೇಣು ಬಿಗಿದುಕೊಂಡಿರುವ, ಜೊತೆಗೆ ಇಬ್ಬರು ಕೂಡ ನೇಣು ಹಾಕಿಕೊಳ್ಳುವಾಗ ಸಭೆ ಸಮಾರ೦ಭಕ್ಕೆ ಹೋಗುವ ರೀತಿಯಲ್ಲಿ ಉಡುಗೆ-ತೊಡುಗೆಯನ್ನು ಹಾಕಿರುವ ದೃಶ್ಯ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ????
ಕೊಪ್ಪದ ಮೊರಾರ್ಜಿ ವಸತಿ ಶಾಲೆಗೆ ಸ೦ಬ೦ಧ ಪಟ್ಟ ಸಿಬ್ಬಂದಿ ವರ್ಗದವರೇ, ಅಧಿಕಾರಿಗಳೇ, ಜನಪ್ರತಿನಿದಿಗಳೇ ಉತ್ತರ ಕೊಡಿ…
ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ವಾ…????” ಎಂಬ ಪೋಸ್ಟರ್‌ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದ್ದಾರೆ.


ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮ ಸರಳೀಕರಣ


ಆಡಳಿತಾತ್ಮಕ ವೈಫಲ್ಯ…:
ವಸತಿ ಶಾಲೆಯಲ್ಲಿ ಪದೇಪದೆ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿರುವುದು ಆಡಳಿತಾತ್ಮಕ ವೈಫಲ್ಯ ಎದ್ದುಕಾಣುತ್ತಿದೆ. ಕಳೆದ ವರ್ಷ ಘಟನೆ ನಡೆದಾಗ ಶಾಸಕ ರಾಜೇಗೌಡ ಎಚ್ಚೆತ್ತುಕೊಂಡು ಅಗತ್ಯ ಕ್ರಮ ತೆಗೆದುಕೊಳ್ಳಬೇಕಿತ್ತು. ನಿರ್ಲಕ್ಷ್ಯವಹಿಸಿದ ಕಾರಣ ಘಟನೆ ಮತ್ತೆ ಮರುಕಳಿಸಿದೆ. ಈ ಹಿಂದೆ ನಡೆದ ಸ್ಥಳದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷವೇ ಆ ಬಾಗಿಲನ್ನು ತೆಗೆದು ಬದಲಿ ವ್ಯವಸ್ಥೆ ಮಾಡಿದ್ದರೆ ಇದಕ್ಕೆ ಅವಕಾಶವಾಗುತ್ತಿರಲಿಲ್ಲ. ಬೇರೆ ಇಲಾಖೆಗಳಲ್ಲಿ ವರ್ಗಾವಣೆ ಆಗುವ ಮೊದಲೇ ಅಧಿಕಾರಿಗಳ ನೇಮಕವಾಗಿರುತ್ತದೆ. ಆದರೆ ಇಲ್ಲಿನ ಮುರಾರ್ಜಿ ವಸತಿ ಶಾಲೆಗೆ ವಾರ್ಡನ್ ಇಲ್ಲ. ಇರುವ ಶಿಕ್ಷಕರೇ ವಾರ್ಡನ್‌ನಂತೆ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಸುರಕ್ಷತೆ ನೀಡುವಲ್ಲಿ ಎಡವಿದ ಪರಿಣಾಮ ಇಂತಹ ಘಟನೆಗಳು ಮರುಕಳಿಸುತ್ತಿವೆ. ಶಾಸಕರು, ಅಧಿಕಾರಿಗಳು ಎಚ್ಚೆತ್ತು ವಾರ್ಡನ್ ನೇಮಕ ಮಾಡಬೇಕು.

ಮುಖ್ಯವಾಗಿ ಈ ವಸತಿ ಶಾಲೆಯಲ್ಲಿ ಸಿಸಿ ಕ್ಯಾಮೆರಾದ ವ್ಯವಸ್ಥೆ, ಸೆಕ್ಯೂರಿಟಿ, ಮಹಿಳಾ ವಾರ್ಡನ್, ರಾತ್ರಿ ಒಂದು ಸುತ್ತು ಪೋಲಿಸ್ ಬೀಟ್, ದೂರು ಪೆಟ್ಟಿಗೆ, ಕೌನ್ಸೆಲಿಂಗ್, ಪೋಷಕರೊಂದಿಗೆ ಸಭೆ ಈ ವ್ಯವಸ್ಥೆಯನ್ನು ಮಾಡಬೇಕು. ಅಲ್ಲದೆ ಪದೇ ಪದೇ ಇಂಥ ಘಟನೆ ನಡೆಯುತ್ತಿದೆ. ಆದರೂ ಕೂಡ ಅಧಿಕಾರಿಗಳು ಗಮನ ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಾವಿಗೆ ನ್ಯಾಯ ಒದಗಿಸಿಕೊಡಬೇಕಾಗಿದೆ.


ಇದನ್ನೂ ಓದಿ: ITI ಪಾಸ್‌ ಆದವರಿಗೆ ಭರ್ಜರಿ ಜಾಬ್‌ ಆಫರ್; ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.