ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಉದ್ಯೋಗ ಸಿಗದೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶೃಂಗೇರಿಯಲ್ಲಿ ನಡೆದಿದೆ. ಶರತ್ ಕೆ ಬಿ (30) ಆತ್ಮಹತ್ಯೆ ಮಾಡಿಕೊಂಡ ಯುವಕ.


ಶರತ್ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು 8 ವರ್ಷದಿಂದ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ. ಕಳೆದ ಒಂದು ವರ್ಷದಿಂದ ಊರಿನಲ್ಲಿದ್ದು, ಬೇರೆಡೆ ಕೆಲಸ ಹುಡುಕುತ್ತಿದ್ದ. ನಿನ್ನೆ ಬೆಳಗ್ಗೆ ಮನೆಯಿಂದ ಹೊರಟ ಶರತ್, ಮಣಿಪಾಲದಲ್ಲಿ ಉದ್ಯೋಗ ಸಿಕ್ಕಿದ್ದು ಅದಕ್ಕಾಗಿ ಫೋಟೋ ತೆಗೆಸಿಕೊಂಡು ಬರುವುದಾಗಿ ತಿಳಿಸಿದ್ದಾನೆ. ಆದರೆ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಈ ಹಿನ್ನಲೆ ಶರತ್ ತಂದೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
ಇಂದು ಶೃಂಗೇರಿಯ ಕುರುಬಕೇರಿ ಸಮೀಪ ತುಂಗಾ ನದಿಯಲ್ಲಿ ಶವ ಪತ್ತೆಯಾಗಿದೆ. ಶರತ್ ತಂದೆ ಬಸಣ್ಣ (ಬಸವರಾಜ್ ಶೆಟ್ಟಿ) ಖಾಸಗಿ ಬಸ್ ಚಾಲಕರಾಗಿ ಅನೇಕ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಎಲ್ಲರಿಗೂ ಚಿರಪರಿಚಿತರು. ಪ್ರಕರಣ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡಿಗೆರೆ: ತಂದೆಯನ್ನು ಕೊಂದ ಮಗನಿಗೆ ಜೀವಾವಧಿ ಶಿಕ್ಷೆ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮೂರು ವರ್ಷಗಳ ಹಿಂದೆ ಬಾಳೂರಿನ ಚೆನ್ನಹಡ್ಲು ಗ್ರಾಮದಲ್ಲಿ ಹಣಕ್ಕಾಗಿ ಮನೆಯಲ್ಲಿಯೇ ತಂದೆಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ ಮಗನಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿ 50,000 ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಏನಿದು ಪ್ರಕರಣ:
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಚೆನ್ನಹಡ್ಲು ಗ್ರಾಮದ ಶ್ರೀಮತಿ ಅರುಣ ಮತ್ತು ಸುಂದರ ಪೂಜಾರಿ ಅವರಿಗೆ ಎರಡು ಬುದ್ಧಿ ಮಾಂದ್ಯ ಮತ್ತು ಅಂಗ ವಿಕಲ ಮಕ್ಕಳಾದ ರಾಕೇಶ್, ಮತ್ತು ರೇಖಾ ಹಾಗೂ ಮತ್ತೋರ್ವ ಮಗನಾದ ಆರೋಪಿ ಎಸ್. ನಿಖೇಶ್ ವಾಸವಾಗಿದ್ದರು. ಮೂರು ವರ್ಷಗಳ ಹಿಂದೆ ಸುಂದರ ಪೂಜಾರಿಯವರಿಗೆ ಪಾರ್ಶ್ವವಾಯುವಾಗಿ ತನ್ನ ಕೈ ಕಾಲು ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಎರಡು ಬುದ್ದಿ ಮಾಂದ್ಯ ಮಕ್ಕಳ ಜೀವನಕ್ಕಾಗಿ ಹಲವು ದಾನಿಗಳು ಹಾಗೂ ಗ್ರಾಮಸ್ಥರು ಲಕ್ಷಾಂತರ ರೂ ಹಣದ ನೆರವು ನೀಡಿದ್ದರು.
ಹಿರಿಯ ಮಗನಾದ ನಿಕೇಶ್ ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕನಾಗಿ ದುಡಿಯುತ್ತಿದ್ದನು. ಕೊರೋನಾ ಸಮಯದಲ್ಲಿ ಬೆಂಗಳೂರು ಬಿಟ್ಟು ಮನೆಗೆ ಬಂದಿದ್ದ. ಸುಮಾರು 3 ಲಕ್ಷ ಕ್ಕಿಂತ ಹೆಚ್ಚು ಮಕ್ಕಳಿಗೆ ನೆರವು ನೀಡಿದ್ದ ಹಣದ ಮೇಲೆ ಹಿರಿಯ ಮಗನಿಗೆ ಕಣ್ಣು ಬಿದ್ದು, ಹಣ ನೀಡುವಂತೆ ಪೀಡಿಸುತ್ತಿದ್ದ. ಆದರೆ ಬುದ್ಧಿಮಾಂದ್ಯ ಮಕ್ಕಳಿಗೆ ಬಂದ ಹಣ ಕೊಡಲು ತಂದೆ ನಿರಾಕರಿಸಿದ್ದರು. ಹಣಕ್ಕಾಗಿ ತಂದೆಯ ಅಸಹಾಯಕ ಸ್ಥಿತಿ ತಿಳಿದಿದ್ದ ಮಗ ನಿಖೇಶ್ ಕೊಡಲಿಯಿಂದ ತಂದೆಯ ತಲೆಗೆ ಹೊಡೆದು ತಂದೆಯನ್ನು ಮುಗಿಸಲು ಯತ್ನಿಸಿದ. ತಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಇದನ್ನೂ ಓದಿ: ಏರ್ ಇಂಡಿಯಾ ಏರ್ ಟ್ರಾನ್ಸ್ ಪೋರ್ಟ್ ಸರ್ವೀಸ್ ನಲ್ಲಿ ಉದ್ಯೋಗ; 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ
ಪ್ರಕರಣ ದಾಖಲಿಸಿದ ಬಾಳೂರು ಮಹಿಳಾ ಸಬ್ ಇನ್ಸ್ಪೆಕ್ಟರ್ ರೇಣುಕಾ, ಮೂಡಿಗೆರೆ ಸರ್ಕಲ್ ಇನ್ಸ್ಪೆಕ್ಟರ್ ಜಗನ್ನಾಥ್ ಮತ್ತು ಸೋಮಶೇಖರ್ ಹಾಗೂ ಪೊಲೀಸರು ತನಿಖೆ ಕೈಗೊಂಡು ಆರೋಪಿ ನಿಖೇಶ್ ಬಂಧಿಸಿ ಜೈಲಿಗೆ ಅಟ್ಟಿದ್ದರು. ಇತ್ತ ಬುದ್ದಿ ಮಾಂದ್ಯ ಇಬ್ಬರು ಮಕ್ಕಳೂ ಕೂಡ ಸಾವನ್ನಪ್ಪಿದರು. ಮಕ್ಕಳ ತಾಯಿ ಅರುಣ ಮಾತ್ರ ಈಗ ಇದ್ದಾರೆ. ಆದರೆ, ಜಿಲ್ಲಾ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 50,000 ದಂಡ ವಿಧಿಸಿ ಆದೇಶ ಹೊರಡಿಸಿದೆ.












