ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ರಾಜ್ಯಮಟ್ಟದ ಟೆನ್ನಿಕಾಯ್ಟ್ ಕ್ರೀಡಾಕೂಟದಲ್ಲಿ ಶೃಂಗೇರಿಯ ಬಿ.ಜಿ.ಎಸ್ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ; ಭೂವಂಚನೆ ತಡೆಗೆ ಮಹತ್ವದ ಕ್ರಮ; ಜಮೀನಿನ ಪಹಣಿಗೆ ಆಧಾರ್ ಲಿಂಕ್!

ಕೊಡಗಿನ ಸಂತೆಯಲ್ಲಿ ಡಿಸೆಂಬರ್ 8 ಹಾಗೂ 9 ರಂದು ನಡೆದ ಟೆನ್ನಿಕಾಯ್ಟ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಶೃಂಗೇರಿಯ ಬಿ.ಜಿ.ಎಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ದ್ರುಪದ ದೇವ್ ಬಾಲಕರ ಟೆನ್ನಿಕಾಯ್ಟ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ; ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲ್ಸ ಮಾಡದಿದ್ರೆ ರೇಷನ್ ಕಾರ್ಡ್ ರದ್ದಾಗತ್ತೆ!
ಡಿಸೆಂಬರ್ 1 ಮತ್ತು 2 ರಂದು ಮಂಡ್ಯದ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ ಡಾಡ್ಜ್ ಬಾಲ್ ಕ್ರೀಡಾಕೂಟದಲ್ಲಿ ಬಿ.ಜಿ.ಎಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಪೃಥ್ವಿಕ್ ಮತ್ತು ದ್ರುಪದ್ ದೇವ್ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಬೇಕಿದೆ ನಿಮ್ಮೆಲ್ಲರ ನೆರವಿನ ಹಸ್ತ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ, ದಿವಂಗತ ಶೇಷಪ್ಪ ಹಾಗೂ ಜಯಾ ಅವರ ದ್ವಿತೀಯ ಪುತ್ರಿ ಕುಮಾರಿ ಸುಶ್ಮಿತಾ ಕೆ.ಎಸ್ (17) ಕಳೆದ ಒಂದು ತಿಂಗಳ ಹಿಂದೆ ಬಿಟ್ಟು ಬಿಟ್ಟು ಅಲ್ಪ ಜ್ವರ, ಸುಸ್ತು, ವಾಂತಿ ಮತ್ತು ಕೆಮ್ಮು ಕಫ ಶುರುವಾಗಿ, ಶೃಂಗೇರಿಯ ಆಸ್ಪತ್ರೆಯಲ್ಲಿ ಎಕ್ಸರೇ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದೆ ಎಂದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಶ್ವಾಸಕೋಶ ವಿಭಾಗದ ಮುಖ್ಯ ವೈದ್ಯಾಧಿಕಾರಿಯಾದ ಡಾ.ರಾಹುಲ್ ಮ್ಯಾಗಸಿನ್ ಇವರಲ್ಲಿ ಸುಶ್ಮಿತಾಳನ್ನು ಕರೆತಂದು ಕೆಲವೊಂದು ರಕ್ತಪರೀಕ್ಷೆ ಮಾಡಿಸಿದ ವೈದ್ಯರು ರಕ್ತದಲ್ಲಿನ ರಕ್ತಕಣಗಳ ವೈಪರಿತ್ಯ ಕಂಡು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ರಕ್ತದ ಅಥವಾ ಅಸ್ಥಿಮಜ್ಜೆಯ ಕ್ಯಾನ್ಸರ್ (LUEKEMIA/ಲ್ಯುಕೆಮಿಯ) ಎಂದು ಅನುಮಾನಿಸಿ, ಮಣಿಪಾಲದ ಮಕ್ಕಳ ಹೆಮಟಲಾಜಿ ಮತ್ತು ಆಂಕಲಾಜಿ ವಿಭಾಗದ ಮುಖ್ಯ ಡಾಕ್ಟರ್ ವಾಸುದೇವ ಭಟ್ ಇವರಲ್ಲಿ ಸಮಾಲೋಚಿಸಿ ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರಿಸಿದ್ದಾರೆ.
ಹಲವಾರು ಬಾರೀ ರಕ್ತಪರೀಕ್ಷೆ ಮತ್ತು ಎಕ್ಸರೇ ಬಳಿಕ (T-CELL LARGE GRANULAR LEUKEMIA / LYMPHOMA ( ಟಿ ಸೆಲ್ ಲಾರ್ಜ್ ಗ್ರಾನುಲರ್ ಲುಕೆಮಿಯ / ಲಿಂಫೋಮ) EBV INDUCED T-CELL LYMPHOMA (ಇ.ಬಿ.ವಿ. ಇಂದ್ಯುಸ್ಡ್ ಟಿ ಸೆಲ್ ಲಿಂಫೋಮಾ) ಎಂಬ ಕಾಯಿಲೆಗೆ ಸುಶ್ಮಿತಾ ಒಳಗಾಗಿದ್ದಾಳೆ.
ಸುಶ್ಮಿತಾ ಗೆ ಕ್ಯಾನ್ಸರ್ ಗೆ ಸಂಬಂಧಿಸಿದ ಚಿಕಿತ್ಸೆಯನ್ನು ನೀಡಲು ಅವಳ ದೇಹ ಸದೃಢವಾಗಿ ಇಲ್ಲ ಹಾಗೂ ಅದರ ಅಡ್ಡ ಪರಿಣಾಮಗಳನ್ನು ತಡೆದುಕೊಳ್ಳುವ ಶಕ್ತಿ ಅವಳ ದೇಹಕ್ಕೆ ಇಲ್ಲ ಎಂದು ಪರಿಶೀಲಿಸಿದ ವೈದ್ಯರು, ಅವಳನ್ನು ಸದೃಢವಾಗಿಸಲು ಒಂದು ತಿಂಗಳುಗಳ ಕಾಲ ನಿಗಾವಹಿಸಿ ನೋಡಿಕೊಳ್ಳಬೇಕು. ಇದಕ್ಕೆ ಆಸ್ಪತ್ರೆಯಲ್ಲಿಯೇ ಇದ್ದರೆ ಒಂದು ತಿಂಗಳಲ್ಲಿ ಆಯುಷ್ಮಾನ ಭಾರತ್ ಯೋಜನೆಯ ಗರಿಷ್ಠ ಮಿತಿ ತಲುಪಿ ಮುಂದಿನ ಪ್ರಮುಖವಾದ ಕ್ಯಾನ್ಸರ್ ಗೆ ಸಂಬಂಧಪಟ್ಟ ಚಿಕಿತ್ಸೆಗೆ ಹಣಕಾಸಿನ ತೊಂದರೆ ಆಗಬಹುದು. ಹಾಗೂ ಈ ಚಿಕಿತ್ಸೆಯು ತುಂಬಾ ದುಬಾರಿ ಆದುದರಿಂದ ಆಯುಷ್ಣಾನ್ ಭಾರತ್ ಯೋಜನೆಯನ್ನು ಉಳಿಸಿಕೊಳ್ಳುವ ಸಲುವಾಗಿ ಆಕೆಯನ್ನು ಒಂದು ತಿಂಗಳವರೆಗೆ ಮಣಿಪಾಲ್ ನಲ್ಲಿ ಬೇರೆ ಖಾಸಗಿ ರೂಮ್ ಅಥವಾ ಲಾಡ್ಜ್ ನಲ್ಲಿ ಇರಿಸಿ ನೋಡಿಕೊಂಡು (ತುರ್ತು ಸಂದರ್ಭ ಎದುರಾದರೆ ತುರ್ತಾಗಿ ಆಸ್ಪತ್ರೆಗೆ ಕರೆತರಲು ಕೂಡ ಅನುಕೂಲವಾಗುವ ಉದ್ದೇಶದಿಂದ) ಆರೋಗ್ಯ ಸ್ಥಿರವಾದ ಮೇಲೆ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಬಹುದು ಎಂದು ವೈದ್ಯರು ಸೂಚಿಸುತ್ತಾರೆ.
ನಾವು ಪ್ರತಿನಿತ್ಯ ಎಷ್ಟೋ ಹಣವನ್ನು ಅನವಶ್ಯಕವಾಗಿ ಖರ್ಚು ಮಾಡುತ್ತೇವೆ. ಆದರೆ ನಿಮ್ಮ ಕೈಲಾದಷ್ಟು ಪ್ರತಿಭಾನ್ವಿತ ಬಡ ವಿದ್ಯಾರ್ಥಿನಿಯೊಬ್ಬಳಿಗೆ ನೀಡಿದಲ್ಲಿ ಅದು ಆಕೆಯ ಕುಟುಂಬಕ್ಕೆ ಶಕ್ತಿ ತುಂಬಿದಂತಾಗುತ್ತದೆ. ಎಲ್ಲರೂ ತಮ್ಮ ಕೈಲಾದಷ್ಟು ಹಣವನ್ನು ಆಕೆಯ ಕುಟುಂಬಕ್ಕೆ ಹಾಕುವಂತೆ ಮನವಿ ಮಾಡುತ್ತೇವೆ. – ಪ್ರಶಾಂತ್ ಪೂಜಾರಿ, ರಕ್ತದಾನಿ ಬಳಗದ ಸದಸ್ಯ
ಹೀಗಾಗಿ ಸುಶ್ಮಿತಾ ಳ ತಾಯಿ ಹಾಗೂ ಕುಟುಂಬದವರು ಮಾನಸಿಕವಾಗಿ ಆರ್ಥಿಕವಾಗಿ ತುಂಬಾ ಕಷ್ಟಕ್ಕೆ ಸಿಲುಕಿದ್ದು, ಸಹೃದಯಿಗಳಲ್ಲಿ ನೆರವಿನ ಹಸ್ತ ಚಾಚಿದ್ದಾರೆ. ಈ ಕೆಳಕಂಡ ನಂಬರಿಗೆ ಗೂಗಲ್ ಪೇ ಮಾಡಬಹುದು.
ಕುಮಾರಿ ಸುನೀತ ಕೆ.ಎಸ್ ( ಸುಶ್ಮಿತಾಳ ಅಕ್ಕ)
8310038217 (ಗೂಗಲ್ ಪೇ ಮಾತ್ರ)












