ಶೆಟಲ್ ಬ್ಯಾಡ್ಮಿಂಟನ್‌ ನಲ್ಲಿ ಮೂಡಿಗೆರೆ ಯುವಕ ರಾಷ್ಟ್ರಮಟ್ಟಕ್ಕೆ ಆಯ್ಕೆ

ಮೂಡಿಗೆರೆ:  (ನ್ಯೂಸ್ ಮಲ್ನಾಡ್ ವರದಿ) ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ನಡೆದ 44ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ, ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಮೂಡಿಗೆರೆ ತಾಲ್ಲೂಕಿನ ಭಾರತಿಬೈಲ್ ನ ರಾಜೇಶ್ ಬಿ.ಆರ್ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 

ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್; ಮುಂದಿನ 5 ವರ್ಷ ಉಚಿತ ಪಡಿತರ ವಿಸ್ತರಣೆ ಘೋಷಿಸಿದ ಮೋದಿ!

ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಸಿ.ಪಿ.ಸಿ ಪಾಲಿಟೆಕ್ನಿಕ್ ಮೈಸೂರು, ಇವರ ವತಿಯಿಂದ ನಡೆದ 44ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಮೂಡಿಗೆರೆ ತಾಲ್ಲೂಕಿನ ಭಾರತಿಬೈಲ್‌ನ ರಾಜೇಶ್ ಬಿ ಆರ್ ಮತ್ತು ಉಡುಪಿಯ ದರ್ಶನ್ ಸಿ ಅಂಬಲ್ಪಡಿ ಭಾಗವಹಿಸಿದ್ದು ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳೊಂದಿಗೆ ಪಾಲಿಟೆಕ್ನಿಕ್ ಉಡುಪಿ ಕಾಲೇಜಿನ ಪ್ರಾಂಶುಪಾಲರಾದ ಉಮಾ ಬಿ ಮತ್ತು ಕ್ರೀಡಾ ಯೋಜನಾಧಿಕಾರಿಳಾದ ಮಧು ಎಂಜಿ ಇದ್ದರು.

 

ಮೂಡಿಗೆರೆ ತಾಲ್ಲೂಕಿನ ಭಾರತಿಬೈಲ್ ನ ರಾಜೇಶ್ ಬಿ ಆರ್, ಉಡುಪಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮೊ ವ್ಯಾಸಂಗ ಮಾಡುತ್ತಿದ್ದಾರೆ. ರಾಜೇಶ್ ಬಿ.ಆರ್ ಭಾರತಿಬೈಲ್ ನ ರಾಮಚಂದ್ರ ಮತ್ತು ಸರೋಜ ದಂಪತಿಗಳ ಪುತ್ರ. ಇದೇ ಕ್ರೀಡಾಕೂಟದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಉಡುಪಿ ಕಾಲೇಜಿನ ವಿದ್ಯಾರ್ಥಿಗಳಾದ ಸಾಕ್ಷಿತ್ ದೇವಾಡಿಗ ಕಾಪು ಉಡುಪಿ, ಸುಚಿತ್ ಕುಂದಾಪುರ, ಕಾರ್ತಿಕ್ ಶೆಟ್ಟಿಗಾರ್, ಸಂದೀಪ್ ಎಚ್ ಎಂ, ಶ್ರೀ ಜಿ ಆಚಾರ್ಯ ಕುಂದಾಪುರ, ಸನಾತ್ ಆಚಾರ್ಯ ಕಾಪು, ವಿನಯ್ ಕುಮಾರ್, ಆದಿತ್ಯ ಉಡುಪಿ ವಾಲಿಬಾಲ್ ಪಂದ್ಯದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

ವರದಿ- ತನು ಕೊಟ್ಟಿಗೆಹಾರ

 

25 ನೇ ರಜತ ದಿನಕ್ಕೆ ಕಾಲಿಟ್ಟ ಜಲಪಾತ ಸಿನಿಮಾ

ಇಂಡಸ್ ಹರ್ಬ್ಸ್ ನ ರವೀಂದ್ರ ತುಂಬರಮನೆ ವಿಷಯ ವಿನ್ಯಾಸ ಗೈದು ನಿರ್ಮಿಸಿ, ಮಲೆನಾಡ ಪ್ರಸಿದ್ಧ ರಂಗಕರ್ಮಿ ರಮೇಶ್ ಬೇಗಾರ್ ರಚಿಸಿ ನಿರ್ದೇಶಿಸಿರುವ ಜಲಪಾತ ಸಿನಿಮಾಕ್ಕೆ ಇದೀಗ 25 ನೇ ದಿನಕ್ಕೆ ಕಾಲಿಟ್ಟು ಜನಪ್ರೀತಿ ಗಳಿಸಿದೆ.

 

ಜಲಪಾತ ಸಿನಿಮಾದಲ್ಲಿ ಸಂಪೂರ್ಣವಾಗಿ ಮಲೆನಾಡ ಭಾಷೆಯನ್ನು ಸೊಗಸಾಗಿ ಬಳಸಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅತ್ಯಂತ ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ರಜನೀಶ್ ಎಂ ಮತ್ತು ಮಲೆನಾಡ ಬುಹುಮುಖ ಪ್ರತಿಭೆ ನಾಗಶ್ರೀ ಬೇಗಾರ್ ನಾಯಕ-ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಮಲೆನಾಡ ಹೆಸರಾಂತ ರಂಗಭೂಮಿ ಕಲಾವಿದ ಬಿ ಎಲ್ ರವಿಕುಮಾರ್ ವಾಸಣ್ಣಯ್ಯನಾಗಿ , ಗಾಯಕಿ ರೇಖಾ ಪ್ರೇಂ ಕುಮಾರ್ ವನಮಾಲಮ್ಮನ ಪಾತ್ರದಲ್ಲಿ ಅಪಾರ ಕೀರ್ತಿಯನ್ನು ಈ ಚಿತ್ರದ ಮೂಲಕ ಪಡೆದಿದ್ದಾರೆ. ಇವರೊಂದಿಗೆ ಪ್ರತಿಭಾವಂತ ಕಲಾವಿದರಾದ ವಿಶ್ವನಾಥ್, ಚಂದ್ರಶೇಖರ ತುಂಬರಮನೆ, ವಿಶ್ವನಾಥ್ ಶೆಟ್ಟಿ ಗಂಡಘಟ್ಟ, ಕಾರ್ತಿಕ್, ಪ್ರಶಾಂತ್ ಶೆಟ್ಟಿ, ವ್ಯಂಗ್ಯ ಚಿತ್ರಕಾರ ಎಮ್ ಎನ್ ದತ್ತಾತ್ರೀ, ನಟರಾಜ್ ರಾವ್, ಶ್ರೀ ಹರ್ಷ, ಸ್ವಾತಿ, ಸುನೀತ, ವೈಶಾಲಿ, ವಿಜಯಲಕ್ಷ್ಮ್ಮೀ, ಸುಧಾಕರ ಶೆಟ್ಟಿ, ಶ್ರೀಮತಿ, ರಶ್ಮಿ ಹೇರ್ಳೆ, ಶಂಕರ್, ರಾಮದಾಸ್, ಸುರೇಶ್ ಎಮ್ ಆರ್, ಚಿದಾನಂದ ಹೆಗ್ಗಾರ್ ಮೊದಲಾದವರು ವೈವಿಧ್ಯಮಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಸಾದ್ವಿನಿ ಕೊಪ್ಪ ಸಂಗೀತದ 3 ಹಾಡುಗಳು ಜನರನ್ನು ಮೋಡಿಮಾಡಿವೆ. ವಿನು ಮನಸು ಅವರ ಹಿನ್ನೆಲೆ ಸಂಗೀತ, ಶಶೀರ ಶೃಂಗೇರಿ- ಛಾಯಾಗ್ರಹಣ, ಅವಿನಾಶ್ ಶೃಂಗೇರಿ – ಸಂಕಲನ ಮತ್ತು ಅಭಿಷೇಕ್ ಹೆಬ್ಬಾರ್ ಕಲಾನಿರ್ದೇಶನವನ್ನು ಜಲಪಾತ ಹೊಂದಿದೆ.

ಪರಿಸರ ಕಾಳಜಿಯನ್ನು ಫ್ಯಾಮಿಲಿ ಡ್ರಾಮ ಶೈಲಿಯ ಕಥೆಯಲ್ಲಿ ಕಟ್ಟಿಕೊಡಲಾಗಿರುವ ಜಲಪಾತಕ್ಕೆ ಎಲ್ಲಾ ವಯೋಮಾನದ ಪ್ರೇಕ್ಷಕರೂ ಫಿದಾ ಆಗಿದ್ದು, ನೋಡಿದವರು ಶಾಲಾ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ನೋಡಬೇಕೆಂಬ ಆಶಯ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಚಿಕ್ಕಮಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ ಚಿತ್ರ ವೀಕ್ಷಣೆಗೆ ಅನುಮತಿ ಅಧಿಕೃತವಾಗಿ ನೀಡಿದ್ದಾರೆ.

ಇನ್ನು ಕುರಿತು ಪ್ರತಿಕ್ರಿಯಿಸಿದ ನಿರ್ಮಾಪಕ ರವೀಂದ್ರ ತುಂಬರಮನೆ ಸಿನಿಮಾ ನಿರ್ಮಾಣದ ಉದ್ದೇಶವೇ ಭಾವನೆಗಳ ಜೊತೆ ಪರಿಸರ ಕಾಳಜಿಯನ್ನು ಬಿಂಬಿಸುವುದಾಗಿತ್ತು. ಮತ್ತೆ ಇದು ಮುಂದಿನ ಪೀಳಿಗೆಯನ್ನು ಗಮನದಲ್ಲಿರಿಸಿ ಅರಿವು ಮೂಡಿಸುವುದಾಗಿತ್ತು. ದಿನೇ ದಿನೇ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮುಗಿಬಿದ್ದು ಚಿತ್ರ ವೀಕ್ಷಿಸುತ್ತಿದ್ದಾರೆ. ನಮ್ಮ ಉದ್ದೇಶ ಸಾರ್ಥಕಗೊಳ್ಳುತ್ತಿರುವ ಕ್ಷಣವಿದು ಎಂದಿದ್ದಾರೆ.

ಚಿತ್ರವನ್ನು ಮಲೆನಾಡ ಭಾಷೆ ಸಂಸ್ಕೃತಿ ಮತ್ತು ಪ್ರಕೃತಿಯನ್ನು ಆಧರಿಸಿ ನಿರ್ಮಿಸಿದ್ದೆವು. ಇಂಥಹ ಪ್ರಾದೇಶಿಕ ಕಂಟೆಂಟ್ ನ ಸಿನಿಮಾ ಯಶಸ್ವೀ ೪ ನೇ ವಾರ ಮತ್ತು 25 ನೇ ದಿನ ಪೂರೈಸುವುದರ ಮೂಲಕ ಕನ್ನಡ ಜನರ ಸಾಂಸ್ಕೃತಿಕ ಅಭಿರುಚಿ ಸದಾ ಶ್ರೇಷ್ಠ ಎಂದು ಬಿಂಬಿಸಿದೆ. ಚಿತ್ರ ಸಾಂಸ್ಕೃತಿಕವಾಗಿ ಸಂಪೂರ್ಣ ಒಂದು ಪ್ರದೇಶವನ್ನು ಜನರಿಗೆ ಪರಿಚಯಿಸಲ್ಪಟ್ಟಿದೆ. ಇದೊಂದು ಸದಭಿರುಚಿಯ ಗೆಲುವು ಎಂದು ನಿರ್ದೇಶಕ ರಮೇಶ್ ಬೇಗಾರ್ ಅಭಿಪ್ರಾಯಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.