ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕು ಘಟಕದ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಸಂಘ 2024 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಬುಧವಾರ ತಾಲ್ಲೂಕು ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಶೃಂಗೇರಿ ತಾಲ್ಲೂಕು ತಹಸೀಲ್ದಾರ್ ಗೌರಮ್ಮ, ನೌಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ನಾಯ್ಕ್ ಎಸ್, ಸಂಘದ ಕಾರ್ಯದರ್ಶಿ ಶಶಿಧರ್, ರಾಜ್ಯ ಪರಿಷತ್ ಸದಸ್ಯರಾದ ರವೀಂದ್ರ MB, ಖಜಾಂಚಿ ಸೋಮಯ್ಯ, ಉಪಾಧ್ಯಕ್ಷರಾದ ಅಬ್ದುಲ್ ಖಾದರ್, ವೆಂಕಟೇಶ್ BM, ಯಮನಪ್ಪ ತಳವಾರ್ ಹಾಗೂ ನಿರ್ದೇಶಕರಾದ ಅಶ್ವಿನಿ,ADLR ನಂದೀಶ್, ಶಿಕ್ಷಣ ಇಲಾಖೆಯ ಬಸವರಾಜ್, ಕೊಪ್ಪ ವಿಭಾಗದ ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಂದೀಶ್ CL, ತಾಲ್ಲೂಕು ವೈದ್ಯಾಧಿಕಾರಿಗಳಾದ ಆಡಿ ದಯಾನಂದ್, ವಲಯ ಅರಣ್ಯಧಿಕಾರಿಗಳಾದ ಅನಿಲ್ ಡಿಸೋಜಾ, ಜೂನಿಯರ್ ಕಾಲೇಜ್ ನ ಪ್ರಚಾರ್ಯರಾದ ಅರುಣ್ ಕುಮಾರ್ ಹಾಗೂ ತಾಲ್ಲೂಕು ಪಂಚಾಯ್ತಿಯ ಸಹಾಯಕ ನಿರ್ದೇಶಕರಾದ ಸುದೀಪ್ ಹಾಗೂ ತಾಲ್ಲೂಕಿನ ಎಲ್ಲಾ ಇಲಾಖೆಯ ನೌಕರರು ಇದ್ದರು.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳು ಮೆಣಸಿನ ರೇಟ್ ಹೇಗಿದೆ?
ಮತ್ತೆ ಮುನ್ನಲೆಗೆ ಬಂದ 2017ರ ದತ್ತಪೀಠ ಕೇಸ್ | ಹಿಂದು ಕಾರ್ಯಕರ್ತರಿಗೆ ಸಮನ್ಸ್ ಜಾರಿ ಮಾಡಿ ಆದೇಶ!
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ 2017 ರಲ್ಲಿ ದಾಖಲಾಗಿದ್ದ ದತ್ತಪೀಠ ಆವರಣದ ಗೋರಿ ಹಾನಿ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, 14 ಜನ ಆರೋಪಿಗಳಿಗೆ ಪೊಲೀಸರು ಸಮನ್ಸ್ ನೀಡಿದ್ದಾರೆ.
ಇದನ್ನೂ ಓದಿ; ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನ; ಯಾವುದೇ ಪರೀಕ್ಷೆ ಇಲ್ಲದೆ ಆಯ್ಕೆ; ಅರ್ಜಿ ಸಲ್ಲಿಕೆಯ ಎಲ್ಲಾ ಮಾಹಿತಿ ಇಲ್ಲಿದೆ
ಏನಿದು ಪ್ರಕರಣ:
2017 ರಲ್ಲಿ ದತ್ತಪೀಠ ಆವರಣದ ಗೋರಿ ಹಾನಿ ಪ್ರಕರಣದಲ್ಲಿ ಕಳೆದ ಡಿಸೆಂಬರ್ 6 ರಂದು ನ್ಯಾಯಾಲಯಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಪ್ರಕರಣದ 14 ಜನ ಆರೋಪಿತರಿಗೆ ಕೋರ್ಟ್ ಸಮನ್ಸ್ ನೀಡಿದೆ. ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಚಾರ್ಜ್ ಶೀಟ್ ಸಲ್ಲಿಕೆಗೆ ಅನುಮತಿ ನೀಡಿತ್ತು. ಇದೀಗ 14 ಜನರ ಮೇಲಿನ ಕೇಸ್ ನ ಆರೋಪಿಗಳಾದ ತುಡುಕೂರು ಮಂಜು, , ಸುಮಂತ್, ನಾಗೇಂದ್ರ ಪೂಜಾರಿ, ಶಿವರಾಜ್, ಸಂದೇಶ್ ಮೋಹನ್, ಅಶೋಕ್, ತೇಜು, ಶ್ರೀನಾಥ್, ಲೋಕೇಶ್, ಮಹೇಂದ್ರ, ಸಂದೀಪ್ ರಾಮುಗೆ ಪೊಲೀಸರು ಸಮನ್ಸ್ ನೀಡಿದ್ದು, ಇದೇ ಜನವರಿ 8 ಕ್ಕೆ ಕೋರ್ಟಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ
ಇದನ್ನೂ ಓದಿ; ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ; ಯಾವ ಜಿಲ್ಲಾ ನ್ಯಾಯಾಲಯ, ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ?
ಎಸ್ಪಿಯಿಂದ ಸ್ಪಷ್ಟನೆ:
ಈ ಕುರಿತು ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ ನೀಡಿದ್ದು, ಜಿಲ್ಲೆಯಲ್ಲಿ ಯಾವುದೇ ಹಳೇ ಪ್ರಕರಣಗಳ ರೀ ಒಪನ್ ಆಗಿಲ್ಲ, ಕೆಲ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟ ಪಡಿಸಿದ್ದಾರೆ.












