
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ. ಬೇಲೂರು ಮೂಲದ ಇದ್ರಿಸ್ ಪಾಷಾ (33) ಬಂಧಿತ ಆರೋಪಿ.

ಚಾರ್ಮಾಡಿಗೆ ಗಾಂಜಾ ಮಾರಲು ತೆರಳುತ್ತಿದ್ದ ಆರೋಪಿಯನ್ನ, ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಿಂದ ಹೊರನಾಡು ಸಂಪರ್ಕಿಸುವ ರಸ್ತೆ ಕೊಟ್ಟಿಗೆಹಾರ ಸಮೀಪದಲ್ಲೇ 1.550 ಕೆ.ಜಿ. ಗಾಂಜಾ ಹಾಗೂ ಮಾರುತಿ ಕಾರ್ ಸಮೇತ ಅಪರಾಧ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ; ರಾಜ್ಯದ ರೈತರಿಗೆ ಗುಡ್ ನ್ಯೂಸ್; ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕ ಇಳಿಕೆ
ಇನ್ನು ಕಾರ್ಯಾಚರಣೆಯಲ್ಲಿ CEN ಅಪರಾಧ ಪೊಲೀಸ್ ಠಾಣಾ ಪಿ.ಎಸ್.ಐ. ವಿಶ್ವನಾಥ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಇಮ್ರಾನ್, ಹರೀಶ್, ರಮೇಶ್, ಮಹೇಂದ್ರ ಮತ್ತು ಮಂಜುನಾಥ್ ಇದ್ದರು. (ವರದಿ- ತನು ಕೊಟ್ಟಿಗೆಹಾರ)
ಶೃಂಗೇರಿ: ರಾಜ್ಯ ಸರ್ಕಾರಿ ನೌಕರರ ಸಂಘದ 2024 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕು ಘಟಕದ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಸಂಘ 2024 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಬುಧವಾರ ತಾಲ್ಲೂಕು ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಶೃಂಗೇರಿ ತಾಲ್ಲೂಕು ತಹಸೀಲ್ದಾರ್ ಗೌರಮ್ಮ, ನೌಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ನಾಯ್ಕ್ ಎಸ್, ಸಂಘದ ಕಾರ್ಯದರ್ಶಿ ಶಶಿಧರ್, ರಾಜ್ಯ ಪರಿಷತ್ ಸದಸ್ಯರಾದ ರವೀಂದ್ರ MB, ಖಜಾಂಚಿ ಸೋಮಯ್ಯ, ಉಪಾಧ್ಯಕ್ಷರಾದ ಅಬ್ದುಲ್ ಖಾದರ್, ವೆಂಕಟೇಶ್ BM, ಯಮನಪ್ಪ ತಳವಾರ್ ಹಾಗೂ ನಿರ್ದೇಶಕರಾದ ಅಶ್ವಿನಿ,ADLR ನಂದೀಶ್, ಶಿಕ್ಷಣ ಇಲಾಖೆಯ ಬಸವರಾಜ್, ಕೊಪ್ಪ ವಿಭಾಗದ ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಂದೀಶ್ CL, ತಾಲ್ಲೂಕು ವೈದ್ಯಾಧಿಕಾರಿಗಳಾದ ಆಡಿ ದಯಾನಂದ್, ವಲಯ ಅರಣ್ಯಧಿಕಾರಿಗಳಾದ ಅನಿಲ್ ಡಿಸೋಜಾ, ಜೂನಿಯರ್ ಕಾಲೇಜ್ ನ ಪ್ರಚಾರ್ಯರಾದ ಅರುಣ್ ಕುಮಾರ್ ಹಾಗೂ ತಾಲ್ಲೂಕು ಪಂಚಾಯ್ತಿಯ ಸಹಾಯಕ ನಿರ್ದೇಶಕರಾದ ಸುದೀಪ್ ಹಾಗೂ ತಾಲ್ಲೂಕಿನ ಎಲ್ಲಾ ಇಲಾಖೆಯ ನೌಕರರು ಇದ್ದರು.













