
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ)ಶೃಂಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹಿನ್ನಲೆ ಬಿಜೆಪಿಯಿಂದ ಮಾರ್ಚ್ 2 ರಂದು ಪ್ರತಿಭಟನೆಗೆ ಕರೆ ನೀಡಲಾಗಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ತಾಲೂಕಿನ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ವಿಚಾರವಾಗಿ ಬಿಜೆಪಿ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿದ್ದು. ಶೃಂಗೇರಿ ತಾಲೂಕಿನ ಜನರಿಗೆ ಸರಿಯಾದ ಅಗತ್ಯ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಈ ಐದು ತಿಂಗಳ ಹಿಂದೆ ಇದೇ ವಿಚಾರವಾಗಿ ಪ್ರತಿಭಟನೆ ನಡೆಸಲಾಗಿತ್ತು. ಇಲಾಖೆ 2 ತಿಂಗಳ ಕಾಲಾವಕಾಶ ಕೇಳಿತ್ತು ಆದರೆ ಐದು ತಿಂಗಳಾದರೂ ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯ ಸರಿಪಡಿಸಿಲ್ಲ. ಈ ಸಮಸ್ಯೆಗೆ ಶಾಸಕರ ಬೇಜವಾಬ್ದಾರಿತನವೇ ಕಾರಣ ಎಂದು ಶಾಸಕರ ವಿರುದ್ದ ಆರೋಪಿಸಿದ್ದು, ಮಾರ್ಚ್ 2 ರಂದು ಪ್ರತಿಭಟನೆಗೆ ಕರೆ ನೀಡಿದ್ದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ಉಮೇಶ್ ತಲಗಾರು, ನೂತನ್ ಕುಮಾರ್, ವೇಣುಗೋಪಾಲ್, ಹರೀಶ್ ಶೆಟ್ಟಿ, ಶೃಂಗೇರಿ ಶಿವಣ್ಣ, ರಾಘವೇಂದ್ರ ಹಂಚಲಿ, ಅಂಗುರ್ಡಿ ದಿನೇಶ್ ಸೇರಿದಂತೆ ಪ್ರಮುಖರು ಇದ್ದರು.













